ಕಲ್ಲು ಎತ್ತಿ ಹಾಕಿ ಮೈಸೂರಿನ ಕುಖ್ಯಾತ ರೌಡಿಶೀಟರ್ ಹತ್ಯೆ

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮೈಸೂರು, ಆಗಸ್ಟ್ 30: ಇತ್ತೀಚೆಗೆ ನಗರದ ಪಡುವಾರಹಳ್ಳಿಯಲ್ಲಿ ನಡೆದ ದೇವು ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ರೌಡಿಶೀಟರ್ ಅನ್ನು ದುಷ್ಕರ್ಮಿಗಳು ಕಲ್ಲು ಎತ್ತಿ ಹಾಕಿ, ಕೊಲೆಗೈದಿದ್ದಾರೆ.

ನಗರದ ಹೃದಯಭಾಗ ಸಯ್ಯಾಜಿರಾವ್ ರಸ್ತೆಯ ಅಕ್ಷಯ ಭಂಡಾರ ಬಳಿಯೇ ಘಟನೆ ನಡೆದಿರುವುದು ಜನತೆಯನ್ನು ಬೆಚ್ಚಿ ಬೀಳಿಸಿದೆ. ವಿಜಯಶ್ರೀಪುರ ಬಡಾವಣೆ ವಾಸಿ ವಿಜಯ್ (28) ದುಷ್ಕರ್ಮಿಗಳಿಂದ ಹತ್ಯೆಗೀಡಾದ ರೌಡಿಶೀಟರ್.

ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ಹತ್ಯೆ ನಡೆದಿರಬಹುದು ಎಂದು ಶಂಕಿಸಲಾಗಿದೆ. ಬೆಳಗ್ಗೆ 4 ಗಂಟೆ ಸಮಯದಲ್ಲಿ ಸಯ್ಯಾಜಿರಾವ್ ರಸ್ತೆಯ ಅಕ್ಷಯ ಬಂಡಾರ್ ಮಳಿಗೆ ಎದುರು ದುಷ್ಕರ್ಮಿಗಳು ವಿಜಯ್ ಮೇಲೆ ದೊಡ್ಡ ಕಲ್ಲನ್ನು ಎತ್ತಿ ಹಾಕಿ ಕೊಲೆಗೈದು, ಪರಾರಿಯಾಗಿದ್ದಾರೆ.[ವಿದ್ಯಾಶ್ರೀ ಯೋಜನೆಗೆ ಸುತ್ತೂರು ರಾಜೇಂದ್ರ ಶ್ರೀ ಪ್ರೇರಣೆ: ಸಿಎಂ]

Rowdy sheeter Vijay murdered in Mysuru

ಆ ಸಂದರ್ಭ ಅಲ್ಲಿ ಜನರಿಲ್ಲದ ಕಾರಣ ಯಾರಿಗೂ ಗೊತ್ತಾಗಿರಲಿಲ್ಲ. ಆ ನಂತರ ನೋಡಿದ ಕೆಲವರು ಹೆಂಡದ ಮತ್ತಿನಲ್ಲಿ ಬಿದ್ದಿದ್ದಾನೆಂದು ತಮ್ಮ ಪಾಡಿಗೆ ಹೋಗಿದ್ದರು. ಬೆಳಗಾಗುತ್ತಿದ್ದಂತೆ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡಿದ್ದರಿಂದ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ.[ದಸರಾ : ಕಾವಡಿ, ಮಾವುತರ ಮಕ್ಕಳ ಟೆಂಟ್ ಶಾಲೆ ನೋಡಿ]

ಸ್ಥಳಕ್ಕೆ ಬಂದ ಮಂಡಿ ಠಾಣೆ ಪೊಲೀಸರು ಮಹಜರು ನಡೆಸಿ, ಶವವನ್ನು ಕೆ.ಆರ್.ಆಸ್ಪತ್ರೆ ಶವಾಗಾರಕ್ಕೆ ಸಾಗಿಸಿದ್ದಾರೆ. ಮೃತ ವಿಜಯ್ ಮೇಲೆ ಕೆಲವು ಪ್ರಕರಣಗಳು ಇವೆ. ಈತ ಹಳೆಯ ರೌಡಿಗಳೊಂದಿಗೆ ಸಂಪರ್ಕ ಹೊಂದಿದ್ದ ಎಂಬ ಮಾಹಿತಿಯೂ ಇದೆ.

ಪಡುವಾರಹಳ್ಳಿಯಲ್ಲಿ ನಡೆದ ದೇವು ಕೊಲೆ ಪ್ರಕರಣದಲ್ಲಿಯೂ ಈತನ ಪಾತ್ರವಿತ್ತು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ದುಷ್ಕರ್ಮಿಗಳ ಪತ್ತೆಗಾಗಿ ಕ್ರಮ ಕೈಗೊಂಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Rowdy sheeter Vijay, 28 years old murdered in Sayyajirao road, Mysuru. There is suspicion of old revenge against Vijay. He involved in the murder of Paduvarahalli devu.
Please Wait while comments are loading...