ಮೈಸೂರು ಮೃಗಾಲಯದ 'ಭೀಮ' ಇನ್ನಿಲ್ಲ

Posted By:
Subscribe to Oneindia Kannada

ಮೈಸೂರು, ಮಾರ್ಚ್ 10 : ಮೈಸೂರಿನ ಚಾಮರಾಜೇಂದ್ರ ಮೃಗಾಲಯದ ಪ್ರಮುಖ ಆಕರ್ಷಣೆಯಾಗಿದ್ದ 'ಭೀಮ' ಮೃತಪಟ್ಟಿದ್ದಾನೆ. ಜರ್ಮನಿಯ ಮೃಗಾಲಯದಿಂದ ಘೇಂಡಾಮೃಗ 'ಭೀಮ'ನನ್ನು 1971ರಲ್ಲಿ ಮೈಸೂರಿಗೆ ಕರೆತರಲಾಗಿತ್ತು.

ಮೈಸೂರು ಮೃಗಾಲಯದಲ್ಲಿದ್ದ ಗಂಡು ಆಫ್ರಿಕನ್ ಬಿಳಿ ಘೇಂಡಾಮೃಗ ಭೀಮ (49) ಬುಧವಾರ ಮುಂಜಾನೆ ಮೃತಪಟ್ಟಿದೆ. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಭೀಮ ಯಾವುದೇ ಚಿಕಿತ್ಸೆಗೆ ಸ್ಪಂದಿಸುತ್ತಿರಲಿಲ್ಲ ಎಂದು ವೈದ್ಯರು ಹೇಳಿದ್ದಾರೆ. [ಮೃಗಾಲಯದ ವಾಲಿ ಇನ್ನಿಲ್ಲ]

1971ರ ಅಕ್ಟೋಬರ್ 1ರಂದು ಜರ್ಮನಿಯ ಹ್ಯಾನೋವರ್‌ನ ಹ್ಯಾಂಪೊಲೋಜಿ ಮೃಗಾಲಯದಿಂದ ಭೀಮನನ್ನು ಮೈಸೂರಿಗೆ ಕರೆತರಲಾಗಿತ್ತು. ಭೀಮನಿಗೆ ಹಲವು ವರ್ಷಗಳ ಕಾಲ ಸಂಗಾತಿಯಾಗಿದ್ದ ಹೆಣ್ಣು ಘೇಂಡಾಮೃಗ 2003ರಲ್ಲಿ ಸಾವನ್ನಪ್ಪಿತ್ತು. [ಚಾಮರಾಜೇಂದ್ರ ಮೃಗಾಲಯಕ್ಕೆ ಹೊಸ ಅತಿಥಿ]

ಭೀಮನ ಸಾವಿನಿಂದಾಗಿ ಘೇಂಡಾಮೃಗದ ಮನೆ ಖಾಲಿಯಾಗಿದೆ. ಸಾಮಾನ್ಯವಾಗಿ ಘೇಂಡಾಮೃಗಗಳ ಸರಾಸರಿ ಆಯಸ್ಸು 40 ರಿಂದ 50 ವರ್ಷಗಳು. ಅನಾರೋಗ್ಯಕ್ಕೆ ತುತ್ತಾಗಿದ್ದ ಭೀಮ ಹಲವು ದಿನಗಳಿಂದ ಆಹಾರವನ್ನು ಸರಿಯಾಗಿ ಸೇವಿಸುತ್ತಿರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. [ಮೈಸೂರಲ್ಲಿ ಮತ್ತೊಂದು ಮಿನಿ ಜೂ ಶೀಘ್ರ ಉದ್ಘಾಟನೆ]

ಅಂದಹಾಗೆ ಮೃಗಾಲಯದಲ್ಲಿದ್ದ ಗಂಡು ಚಿಂಪಾಂಜಿ 'ವಾಲಿ' 2013ರ ಆಗಸ್ಟ್ 7ರಂದು ಮೃತಪಟ್ಟಿತ್ತು. 1986ರಲ್ಲಿ ಬಿಡುಗಡೆಗೊಂಡ ಅಂಬರೀಶ್‌ ನಾಯಕನಾಗಿ ನಟಿಸಿದ್ದ 'ಮೃಗಾಲಯ' ಚಿತ್ರದಲ್ಲಿಯೂ ವಾಲಿ ನಟಿಸಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Bheema (49) a male African white rhinoceros died of health complications at Sri Chamarajendra Zoological Gardens in Mysuru, on Wednesday. Bheema was brought from the National Park Hannover, Germany on October 1, 1971.
Please Wait while comments are loading...