ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿಎಂ ವಿರುದ್ಧ ಸಿಡಿದೆದ್ದ ರೇವಣ ಸಿದ್ದಯ್ಯ ಕಾಂಗ್ರೆಸಿಗೆ ಗುಡ್ ಬೈ

By Yashaswini
|
Google Oneindia Kannada News

ಮೈಸೂರು, ಏಪ್ರಿಲ್ 22: ರಾಜ್ಯ ವಿಧಾನಸಭಾ ಸಮೀಪಿಸುತ್ತಿರುವ ಹೊಸ್ತಿಲಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ವರುಣಾ ಕ್ಷೇತ್ರದ ಪ್ರಭಾವಿ ಮುಖಂಡರು ಆಘಾತ ನೀಡಿದ್ದಾರೆ. ಕ್ಷೇತ್ರದ ಪ್ರಭಾವಿ ಮುಖಂಡ ಹಾಗೂ ನಿವೃತ್ತ ಹಿರಿಯ ಪೊಲೀಸ್ ಅಧಿಕಾರಿ ರೇವಣ ಸಿದ್ದಯ್ಯ ಕಾಂಗ್ರೆಸಿಗೆ ಗುಡ್ ಬೈ ಹೇಳಿದ್ದಾರೆ.

ಇ-ಮೇಲ್ ಮೂಲಕ ರೇವಣ್ಣ ಸಿದ್ದಯ್ಯ ಅವರು ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಮೈಸೂರಿನ ಖಾಸಗಿ ಹೊಟೆಲ್ ನಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರೇವಣ ಸಿದ್ದಯ್ಯ, ಚಾಮುಂಡೇಶ್ವರಿಯಲ್ಲಿ ಜಿ.ಟಿ. ದೇವೇಗೌಡರನ್ನು ಬೆಂಬಲಿಸುವುದಾಗಿ ತಿಳಿಸಿದ್ದಾರೆ.

ವರುಣ ಕ್ಷೇತ್ರ : ಕಾಂಗ್ರೆಸ್ಸಿಗೆ ಸುಲಭ ಗೆಲುವು ಕಷ್ಟವರುಣ ಕ್ಷೇತ್ರ : ಕಾಂಗ್ರೆಸ್ಸಿಗೆ ಸುಲಭ ಗೆಲುವು ಕಷ್ಟ

"ಮುಖ್ಯಮಂತ್ರಿ ಸಿದ್ದರಾಮಯ್ಯ ವಚನ ಭ್ರಷ್ಟರು. ನನಗೆ ಟಿಕೆಟ್‌ ಕೊಡ್ತೀನಿ ಅಂತಾ ಹೇಳಿ ಮಾತು ತಪ್ಪಿದ್ದಾರೆ. ವರುಣಾ ಕ್ಷೇತ್ರ ನಿಮಗೆ ಅನುವಂಶೀಯವಾಗಿ ಬಂದಿದೆಯೇ?" ಎಂದು ಪ್ರಶ್ನಿಸಿದ್ದಾರೆ. "ನಾನು ನನ್ನ ರಾಜೀನಾಮೆ ಪತ್ರವನ್ನು ಶನಿವಾರ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಅವರಿಗೆ ಕಳುಹಿಸಿದ್ದೇನೆ," ಎಂದು ಅವರು ತಿಳಿಸಿದರು.

Revana siddaiah quits congress and slams Siddaramaiah

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಜಿ.ಟಿ.ದೇವೇಗೌಡ ಅವರನ್ನು ಬೆಂಬಲಿಸುತ್ತೇನೆ. ವರುಣಾದಲ್ಲಿ ಯಾರನ್ನು ಬೆಂಬಲಿಸಬೇಕು ಎಂಬುದನ್ನು ಶೀಘ್ರದಲ್ಲಿ ನಿರ್ಧರಿಸುವುದಾಗಿ ಅವರು ಮಾಹಿತಿ ನೀಡಿದರು.

ಸಿದ್ದರಾಮಯ್ಯ ನನ್ನನ್ನು ಸಾಕು ಪ್ರಾಣಿ ರೀತಿ ನಡೆಸಿಕೊಂಡರು. ಚುನಾವಣೆ ಹೊಸ್ತಿಲಲ್ಲಿ ಸಿದ್ದರಾಮಯ್ಯ ನಮ್ಮ ಮನೆಗೆ‌ ಬಂದಿದ್ದರು. ನಮ್ಮ ಮನೆಯ ಸಾಕು ಪ್ರಾಣಿಗಳನ್ನು ನಾವು ಏನಾದರೂ ಕೊಟ್ಟು ಸಮಾಧಾನ ಮಾಡುತ್ತೇವೆ. ಅದೇ ರೀತಿ ನನ್ನ ಬಳಿಯೂ ನಡೆದುಕೊಂಡರು ಎಂಬುದಾಗಿ ಅವರು ಹೇಳಿದ್ದಾರೆ.

ಸಿದ್ದುವನ್ನು ಸೋಲಿಸಲು ಜೆಡಿಎಸ್ ಬಳಿಯಿದೆ ರೇವಣಾಸ್ತ್ರ! ಸಿದ್ದುವನ್ನು ಸೋಲಿಸಲು ಜೆಡಿಎಸ್ ಬಳಿಯಿದೆ ರೇವಣಾಸ್ತ್ರ!

"ಕಾಂಗ್ರೆಸ್ ನಲ್ಲಿ ವ್ಯಕ್ತಿ ಸಾಮರ್ಥ್ಯ ಅಧಿಕವಾಗಿರುವುದನ್ನು ಖಂಡಿಸಿ ಹೊರ ಬಂದಿದ್ದೇನೆ. ಸಿದ್ದರಾಮಯ್ಯ ವೀರಶೈವ ಲಿಂಗಾಯತ ಸಮುದಾಯವನ್ನ ಒಡೆದು ನಿರ್ನಾಮ ಮಾಡಲು ಹೊರಟಿದ್ದಾರೆ. ಆದರೆ ಜಗತ್ತಿನಲ್ಲಿ ಯಾರು ಲಿಂಗಾಯತ, ಯಾರು ವೀರಶೈವ ಎಂದು ಹೇಳಲಾಗದಷ್ಟು ಹೊಂದಾಣಿಕೆ ಇದೆ. ನಮ್ಮ ಕುಟುಂದಲ್ಲೂ ಇದೇ ಪರಿಸ್ಥಿತಿ ಇದೆ. ಲಿಂಗಾಯತ ಸಮುದಾಯ ಒಡೆದು ಅಧಿಕಾರ ಏರುತ್ತೇನೆ ಎಂಬಂತೆ ನಾಳೆ ಇತರ ಸಮುದಾಯವನ್ನು ಒಡೆಯಲು ಮುಂದಾಗುತ್ತಾರೆ. ಇದನ್ನ ನಾವು ಖಂಡಿಸಬೇಕು. ಮನೆ ಮನೆಗೆ ಹೋಗಿ ತಿಳಿಸಬೇಕು," ಎಂದು ತಿಳಿಸಿದರು.

ಕುತೂಹಲದ ಕೇಂದ್ರಬಿಂದು 'ವರುಣಾ'ದಲ್ಲಿ ಗೆಲ್ಲುವವರ್ಯಾರು..?ಕುತೂಹಲದ ಕೇಂದ್ರಬಿಂದು 'ವರುಣಾ'ದಲ್ಲಿ ಗೆಲ್ಲುವವರ್ಯಾರು..?

"ವರುಣ ನಿಮ್ಮ ಆಸ್ತಿಯಾ? ಚಾಮುಂಡೇಶ್ವರಿ ಕ್ಷೇತ್ರ ಏನು ಮಾಡಿತ್ತು? ತಮ್ಮ ಮಗನಿಗಾಗಿ ವರುಣ ಕ್ಷೇತ್ರಕ್ಕೆ ಅಷ್ಟು ಹಣ ಸುರಿದ್ರಾ? ವರುಣಾದಲ್ಲೂ ನಾನು ಪ್ರಚಾರ ಮಾಡುತ್ತೇನೆ" ಎಂದು ಅವರು ಆಕ್ರೋಶಿತರಾಗಿ ನುಡಿದರು.

ಕಾಂಗ್ರೆಸ್ ಅಂತಿಮ ಪಟ್ಟಿ ಪ್ರಕಟ, ಬಾದಾಮಿಯಿಂದ ಸಿದ್ದರಾಮಯ್ಯ ಸ್ಪರ್ಧೆಕಾಂಗ್ರೆಸ್ ಅಂತಿಮ ಪಟ್ಟಿ ಪ್ರಕಟ, ಬಾದಾಮಿಯಿಂದ ಸಿದ್ದರಾಮಯ್ಯ ಸ್ಪರ್ಧೆ

"ಲಿಂಗಾಯತ ಸಮುದಾಯ ಒಡೆಯಲು ಯತ್ನಿಸಿದ್ದು ನನಗೆ ಬಹಳ ಬೇಸರ ತಂದಿದೆ. ಇದು ಕುಟುಂಬಗಳಲ್ಲೇ ಭಿನ್ನಾಭಿಪ್ರಾಯ ಮೂಡಿಸಿದೆ. ಸಮುದಾಯವನ್ನು ವಿಂಗಡಿಸಿ ನೋಡುವುದು ಒಳ್ಳೆಯ ಬೆಳವಣಿಗೆಯಲ್ಲ. ಈಗಾಗಲೇ ಸಿದ್ದಗಂಗಾ ಶ್ರೀಗಳು ಬಿಡಿಸಿ ಹೇಳಿ ಸಂದೇಶ ನೀಡಿದ್ದಾರೆ. ಶ್ರೀಗಳ ಸಂದೇಶ ಮೀರಿ ತರಾತುರಿಯಲ್ಲಿ ಸಮಿತಿ ವರದಿ ಪಡೆದು ಸಮುದಾಯ ಒಡೆವ ಯತ್ನ ಮಾಡಿದ್ದಾರೆ. ಸದಾಶಿವ ಆಯೋಗದ ವರದಿ ಬಳಸಿ ಇನ್ನೊಂದು ಸಮುದಾಯಕ್ಕೂ ಹೊಡೆತ ಬೀಳುವ ಸಾಧ್ಯತೆ ಇದೆ," ಎಂದವರು ಆತಂಕ ವ್ಯಕ್ತಪಡಿಸಿದರು.

English summary
Karnataka assembly elections 2018: Former police officer and influential leader of Varuna, Revana Siddaiah quits Congress and said that he will support GT Deve Gowda in Chamundeshwari.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X