ಆರ್ ಕೆ ನಾರಾಯಣ್ ಅವರ ಮನೆ ಪಾರಂಪರಿಕ ಕಟ್ಟಡ: ಸಿಎಂ

Posted By:
Subscribe to Oneindia Kannada

ಮೈಸೂರು, ಜುಲೈ 24: ಪ್ರಸಿದ್ಧ ಕಾದಂಬರಿಕಾರ ದಿವಂಗತ ಆರ್ ಕೆ ನಾರಾಯಣ್ ಅವರ ಮೈಸೂರಿನ ಮನೆಯನ್ನು ಪಾರಂಪರಿಕ ಕಟ್ಟಡ ಎಂದು ಘೋಷಿಸಲಾಗಿದ್ದು ಅದನ್ನು ನವೀಕರಿಸಲಾಗಿದೆ. ಈ ಮೂಲಕ ದೇಶದ ಒಬ್ಬ ಮಹಾನ್ ಲೇಖಕನಿಗೆ ಗೌರವ ಸಲ್ಲಿಸಲಾಗಿದೆ ಎಂದು ನವೀಕೃತ ಕಟ್ಟಡದ ಉದ್ಘಾಟನೆ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸಿದರು.

ಮೈಸೂರಿನ ಯಾದವಗಿರಿ ಬಡಾವಣೆಯ ವಿವೇಕಾನಂದ ರಸ್ತೆಯಲ್ಲಿರುವ 15ನೇ ನಂಬರಿನ ಈ ನಿವಾಸವನ್ನು ಲಂಡನ್‌ನಲ್ಲಿರುವ ವಿಲಿಯಂ ಷೇಕ್ಸ್‌ಪಿಯರ್‌ ಮನೆಯ ಮಾದರಿಯಲ್ಲಿ 30 ಲಕ್ಷ ರು ವೆಚ್ಚದಲ್ಲಿ ನವೀಕರಿಸಲಾಗಿದೆ. ನಿವಾಸದ ಸುತ್ತಮುತ್ತ 5 ಲಕ್ಷ ರು ವೆಚ್ಚದಲ್ಲಿ ಉದ್ಯಾನ ನಿರ್ಮಿಸುವ ಕಾಮಗಾರಿ ನಡೆಯುತ್ತಿದೆ ಎಂದು ಮುಖ್ಯಮಂತ್ರಿಗಳು ಶನಿವಾರ ಹೇಳಿದರು. [ಆರ್ ಕೆ ನಾರಾಯಣ್ ಮನೆ ಇನ್ಮುಂದೆ ನಮ್ಮೆಲ್ಲರ ಆಸ್ತಿ]

421 ಚದರ ಮೀಟರ್‌ ವಿಸ್ತೀರ್ಣದ ಈ ಕಟ್ಟಡವನ್ನು 62 ವರ್ಷಗಳ ಹಿಂದೆ ನಿರ್ಮಿಸಲಾಗಿತ್ತು. 'ಮಾಲ್ಗುಡಿ' ಎಂಬ ಕಾಲ್ಪನಿಕ ಊರಿನ ಸೃಷ್ಟಿಕರ್ತ ನಾರಾಯಣ್ ಅವರು 1990ರ ವರೆಗೆ ಈ ನಿವಾಸದಲ್ಲಿ ನೆಲೆಸಿದ್ದರು. ಅನಾರೋಗ್ಯದ ಕಾರಣ ಚೆನ್ನೈನಲ್ಲಿರುವ ಪುತ್ರಿ ನಿವಾಸದಲ್ಲಿ ವಾಸ್ತವ್ಯ ಹೂಡಿದರು. 2001ರ ಮೇ 13ರಂದು ಅವರು ನಿಧನರಾಗಿದ್ದರು.

ಯಾದಗಿರಿಯಲ್ಲಿದ್ದ ಮನೆ ಸಮಸ್ಯೆ ಗೂಡಾಗಿತ್ತು

ಯಾದಗಿರಿಯಲ್ಲಿದ್ದ ಮನೆ ಸಮಸ್ಯೆ ಗೂಡಾಗಿತ್ತು

100x120 ಅಡಿ ಇರುವ ಈ ಸ್ಥಳ ಸಿಎಸ್ ಚಂದ್ರಶೇಖರ್, ಭುವನೇಶ್ವರಿ ಮತ್ತು ಶ್ರೀನಿವಾಸ ಎಂಬುವವರ ಹೆಸರಲ್ಲಿ ನೊಂದಾವಣಿಯಾಗಿದೆ. ಮನೆ ಒಡೆದು ಬಹುಮಹಡಿ ಕಟ್ಟಡ ನಿರ್ಮಾಣ ಮಾಡಲು ಕೂಡ ಕಾರ್ಪೊರೇಷನ್ ಅನುಮತಿಯನ್ನೂ ನೀಡಿತ್ತು.

ಹೊಸ ಕಟ್ಟಡ ನಿರ್ಮಾಣದ ಲೈಸೆನ್ಸ್ ಅನ್ನು ರದ್ದುಪಡಿಸಲಾಗಿತ್ತು

ಹೊಸ ಕಟ್ಟಡ ನಿರ್ಮಾಣದ ಲೈಸೆನ್ಸ್ ಅನ್ನು ರದ್ದುಪಡಿಸಲಾಗಿತ್ತು

ಹೊಸ ಕಟ್ಟಡ ನಿರ್ಮಾಣದ ಲೈಸೆನ್ಸ್ ಅನ್ನು ರದ್ದುಪಡಿಸಲಾಗಿತ್ತು. ನಂತರ ಸುಮಾರು 2.4 ಕೋಟಿ ರು ವೆಚ್ಚ ಮಾಡಿ ಈ ಮನೆಯನ್ನು ಸರ್ಕಾರದ ವಶಕ್ಕೆ ಪಡೆಯಲಾಯಿತು.

ಪುನರ್ ನಿರ್ಮಾಣ ಕಾರ್ಯ ಕೈಗೊಳ್ಳಲಾಯಿತು

ಪುನರ್ ನಿರ್ಮಾಣ ಕಾರ್ಯ ಕೈಗೊಳ್ಳಲಾಯಿತು

ಸುಮಾರು 24.1 ಲಕ್ಷ ರು ವೆಚ್ಚದಲ್ಲಿ ಈ ಮನೆಯ ಮೂಲ ಸ್ವರೂಪಕ್ಕೆ ಧಕ್ಕೆ ಬರದಂತೆ ರಿಪೇರಿ ಹಾಗೂ ಪುನರ್ ನಿರ್ಮಾಣ ಕಾರ್ಯ ಕೈಗೊಳ್ಳಲಾಯಿತು. ಈಗ ಖರ್ಚು ವೆಚ್ಚ 35 ಲಕ್ಷ ರು ಮೀರಿದೆ.

ಮೈಸೂರು ನಗರ ಪಾಲಿಕೆಯಿಂದ ಕಾಮಗಾರಿ

ಮೈಸೂರು ನಗರ ಪಾಲಿಕೆಯಿಂದ ಕಾಮಗಾರಿ

ಈ ಮನೆಯೊಂದಿಗೆ ಸಾಹಿತ್ಯ ಲೋಕ ಹಾಗೂ ಆರ್ ಕೆ ನಾರಾಯಣ್ ಅವರಿಗಿದ್ದ ಭಾವನಾತ್ಮಕ ಸಂಬಂಧಕ್ಕೆ ನಾವು ಬೆಲೆ ಕೊಡಬೇಕಿದೆ ಎಂದು ಮೈಸೂರು ನಗರ ಪಾಲಿಕೆ ಆಯುಕ್ತ ಸಿ.ಜಿ ಬೆಟ್ಸೂರು ಮಠ್ ಹೇಳಿದ್ದರು.

ಇದ್ದ ರೂಪದಲ್ಲೇ ಉಳಿಸಿಕೊಳ್ಳಬೇಕೆಂಬ ಬೇಡಿಕೆ

ಇದ್ದ ರೂಪದಲ್ಲೇ ಉಳಿಸಿಕೊಳ್ಳಬೇಕೆಂಬ ಬೇಡಿಕೆ

2006ರಲ್ಲಿ ನಾರಾಯಣ್ ಜನ್ಮಶತಾಬ್ದಿಯ ಸಂದರ್ಭದಲ್ಲಿ ಈ ಮನೆಯನ್ನು ಇದ್ದ ರೂಪದಲ್ಲೇ ಉಳಿಸಿಕೊಳ್ಳಬೇಕೆಂಬ ಬೇಡಿಕೆಯೂ ಎದ್ದಿತ್ತು. ಆದರೆ, ಸಂಬಂಧಪಟ್ಟವರು ಈ ಬೇಡಿಕೆಯನ್ನು ಕಿವಿಗೇ ಹಾಕಿಕೊಂಡಿರಲಿಲ್ಲ. ಮನೆಬಾಗಿಲು ಸೇರಿದಂತೆ ಕೆಲ ಭಾಗಗಳನ್ನು ಒಡೆದುಹಾಕಲಾಗಿದೆಯಾದರೂ ನೆಲಸಮ ಮಾಡಲು ತಡೆ ಒಡ್ಡಲಾಯಿತು

ಅಮೂಲ್ಯ ವಸ್ತುಗಳ ಸಂಗ್ರಹಾಲಯ

ಅಮೂಲ್ಯ ವಸ್ತುಗಳ ಸಂಗ್ರಹಾಲಯ

ಆರ್ ಕೆ ನಾರಾಯಣ್ ಮನೆಯಲ್ಲಿ ಅಮೂಲ್ಯ ವಸ್ತುಗಳ ಸಂಗ್ರಹಾಲಯ ಸ್ಥಾಪಿಸಲಾಗಿದೆ. ಮಾಲ್ಗುಡಿ ಡೇಸ್ ಧಾರಾವಹಿಯ ದೃಶ್ಯಗಳು, ಚಿತ್ರಗಳು, ಆರ್ ಕೆ ನಾರಾಯಣ್ ಅವರ ಲೇಖನಿ, ಕನ್ನಡಕ ಸೇರಿದಂತೆ ಬಳಕೆ ವಸ್ತುಗಳನ್ನು ಇರಿಸಲಾಗಿದೆ.


ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Chief Minister Siddharamaiah inaugurated R.K. Narayan Museum cum Memorial. Mysuru City Corporation (MCC) restored renowned novelist R.K. Narayan’s residence on Vivekananda Road in Yadavagiri to its original glory
Please Wait while comments are loading...