ಮೈಸೂರು ಮುಕ್ತವಿವಿಯಲ್ಲಿ ಬಹಿರಂಗಯಾಯ್ತು ನಕಲಿ ಅಂಕಪಟ್ಟಿ ಜಾಲ

Posted By:
Subscribe to Oneindia Kannada

ಮೈಸೂರು, ಆಗಸ್ಟ್ 1: ಕಳೆದ ಕೆಲವು ದಿನಗಳ ಕೆಳಗೆ ಕೆಎಸ್ಓಯುನ ನಕಲಿ ಅಂಕಪಟ್ಟಿ ಮಾರಾಟ ಮಾಡುತ್ತಿದ್ದ ಓರ್ವ ಮಹಿಳೆಯನ್ನು ಬಂಧಿಸಿ ವಿಚಾರಣೆ ನಡೆಸಿದ ಬೆನ್ನಲ್ಲೇ, ವಿವಿಯ ಹಗರಣದ ಕುರಿತಾಗಿ ಹೊಸ - ಹೊಸ ಟ್ವಿಸ್ಟ್ ಗಳು ಹೊರಬರುತ್ತಲೇ ಇದೆ. ಇನ್ನು ನಕಲಿ ಅಂಕಪಟ್ಟಿ ಹಗರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಕೆಎಸ್​ಓಯು ಮೇಲೆ ಇಂದು ದಾಳಿ ನಡೆಸಿದ್ದಾರೆ.

ಮೈಸೂರಿನ ನಕಲಿ ಅಂಕಪಟ್ಟಿ ಜಾಲಕ್ಕೆ ಮಹಿಳೆಯೇ ಕಿಂಗ್ ಪಿನ್!

ದಿಡೀರ್ ಎಂದು ದಾಳಿ ನಡೆಸಿದ್ದರಿಂದ ಕಂಗಾಲಾಗಿರುವ ಮುಕ್ತ ವಿವಿಯ ಅಧಿಕಾರಿಗಳು ಪೊಲೀಸರಿಂದ ತಪ್ಪಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ. ನೇರವಾಗಿ ಕುಲಸಚಿವ ಚಂದ್ರಶೇಖರ್ ಅವರ ಕಚೇರಿ ಮೇಲೆ ದಾಳಿ ನಡೆಸಿರುವ ಸಿಸಿಬಿ ಅಧಿಕಾರಿಗಳು ಮಹತ್ತರ ದಾಖಲೆಗಳನ್ನ ವಶಕ್ಕೆ ಪಡೆದಿದ್ದಾರೆ.

Registrar Dr K G Chandrashekhar confirms fake marks card scam in KSOU as true

ಕೆಎಸ್​ಓಯುನ ವಿಜ್ಞಾನ ಭವನದಲ್ಲಿರುವ ಅಂಕಪಟ್ಟಿ ಮುದ್ರಿತ ಕೊಠಡಿಯನ್ನ ಸೀಜ್ ಮಾಡಿದ್ದಾರೆ. ಇದರ ಜೊತೆಗೆ ಅಲ್ಲಿದ್ದಂತಹ ಪ್ರಿಂಟರ್​ಗಳು, ಮೆಷಿನ್​ಗಳನ್ನ ವಶಕ್ಕೆ ಪಡೆದು ತಪಾಸಣೆ ನಡೆಸುತ್ತಿದ್ದಾರೆ. ಇದೇ ಪ್ರಿಂಟರ್​ಗಳಿಂದ ಲಕ್ಷಾಂತರ ನಕಲಿ ಅಂಕಪಟ್ಟಿಗಳನ್ನ ಮುದ್ರಿಸಿ ಕಾಳಸಂತೆಯಲ್ಲಿ ಮಾರಾಟ ಮಾಡಿದ್ದಾರೆ ಅಂತ ಹೇಳಲಾಗುತ್ತಿದೆ. ಸದ್ಯ, ಈ ಸಂಬಂಧ ಈಗಾಗಲೇ ಮೂವರನ್ನ ಸಿಸಿಬಿ ಪೊಲೀಸರು ಬಂಧಿಸಿದ್ದು, ಮಾಹಿತಿ ಕಲೆ ಹಾಕಲಾಗುತ್ತಿದೆ.

ವಿವಿಯ ನೌಕರರನ್ನು ವಜಾಗೊಳಿಸಿದ ಅಧಿಕಾರಿಗಳು:
ನಕಲಿ ಅಂಕಪಟ್ಟಿ ಹಗರಣಕ್ಕೆ ಸಂಬಂಧಿಸಿದಂತೆ ಇಬ್ಬರ ತಲೆದಂಡವಾಗಿದೆ. ಪರೀಕ್ಷಾಂಗ ಕುಲಸಚಿವ ಸಿದ್ದರಾಜು ಹಾಗು ಹಂಗಾಮಿ ನೌಕರ ಶಿವಣ್ಣ ಅವರನ್ನು ಕೆಲಸದಿಂದ ವಜಾ ಮಾಡಿ ಕೆಎಸ್​ಓಯು ಅಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

ಅಷ್ಟೇ ಅಲ್ಲದೇ ನಿನ್ನೆ ಹಗರಣಕ್ಕೆ ಸಂಬಂಧಿಸಿದಂತೆ ಮೈಸೂರಿನ ಜಯಲಕ್ಷ್ಮಿಪುರಂ ಠಾಣಾ ಪೊಲೀಸರು ಸದ್ಯ ಮತ್ತಿಬ್ಬರನ್ನ ಅರೆಸ್ಟ್​ ಮಾಡಿದ್ದಾರೆ. ಹುಬ್ಬಳ್ಳಿಯ ದೂರ ಶಿಕ್ಷಣ ಸಂಸ್ಥೆಯ ಕೋ ಆರ್ಡಿನೇಟರ್​ ಸೇರಿ ಇಬ್ಬರನ್ನ ವಶಕ್ಕೆ ಪಡೆದಿರುವ ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಕೋ ಆರ್ಡಿನೇಟರ್​ ಮಂಜುನಾಥ್​ ಕುಲಕರ್ಣಿ ಎಂಬಾತ ಮಲ್ಲಣ್ಣ ಎಂಬವರಿಗೆ ನಕಲಿ ಅಂಕಪಟ್ಟಿ ನೀಡಿದ್ದು, ಆ ಅಂಕಪಟ್ಟಿ ಪಡೆದ ಮಲ್ಲಣ್ಣ ಆರೋಗ್ಯ ಇಲಾಖೆಗೆ ನೀಡಿ ಉದ್ಯೋಗ ಗಿಟ್ಟಿಸಿಕೊಂಡಿದ್ದ. ಈ ಕುರಿತು ತನಿಖೆ ನಡೆಸಿರುವ ಪೊಲೀಸರ ಬಳಿ ಮಲ್ಲಣ್ಣ ಹಾಗು ಮಂಜುನಾಥ್ ತಪ್ಪೊಪ್ಪಿಕೊಂಡಿದ್ದಾರೆ ಎನ್ನಲಾಗುತ್ತಿದೆ.

ಮಾನ್ಯತೆ ಇಲ್ಲದಿದ್ದರೂ ಹೊರಬರುತ್ತಲೇ ಇದೆ ಅಂಕಪಟ್ಟಿ:
ವಿವಿಗೆ ಮಾನ್ಯತೆ ಇಲ್ಲದಿದ್ದರೂ ಇಂದಿಗೂ ಅಂಕಪಟ್ಟಿಗಳು ಹೊರಬರುತ್ತಲೇ ಇದೆ. ವಿವಿಯ ನಿವೃತ್ತ ಹಿರಿಯ ಅಧಿಕಾರಿಗಳು ಸೇರಿ ಹಾಲಿ ಕರ್ತವ್ಯ ನಿರ್ವಹಿಸುವ ಕೆಲವು ಸಿಬ್ಬಂದಿ ಹೇಳುವ ಮಾಹಿತಿ ಪ್ರಕಾರ ದೇಶ- ವಿದೇಶದಲ್ಲಿ 8 ಲಕ್ಷಕ್ಕೂ ಅಧಿಕ ನಕಲಿ ಅಂಕಪಟ್ಟಿಗಳನ್ನ ಇದೇ ರೀತಿ ಮುದ್ರಿಸಿ ಹಂಚಲಾಗಿದೆ ಎಂಬ ಆತಂಕಕಾರಿ ವಿಚಾರ ಸದ್ಯ ಬೆಳಕಿಗೆ ಬರ್ತಿದೆ.

Mysuru Jail :4 Prisoners Shifted From Bengaluru Parappa Jail | Oneindia Kannada

ಇನ್ನು ಇದಕ್ಕೆ ಸಂಬಂಧಪಟ್ಟಂತೆ ಸ್ವತಃ ಅಂಕಪಟ್ಟಿ ಹಗರಣವನ್ನ ರಿಜಿಸ್ಟರ್ಡ್ ಚಂದ್ರಶೇಖರ್ ಒಪ್ಪಿಕೊಂಡಿದ್ದಾರೆ. ಅಂಕಪಟ್ಟಿ ಹಗರಣಕ್ಕೆ ಸಂಬಂಧಿಸಿದಂತೆ ಎರಡು ಪ್ರಿಂಟರ್ ಗಳು, ಪರಿಕರಗಳ ವಶಪಡಿಸಿಕೊಂಡಿದ್ದು, ಹಲವರ ಬಂಧನ ಆಗಿರುವುದು ಸತ್ಯ. ಜತೆಗೆ ಪರೀಕ್ಷಾಂಗ ವಿಭಾಗದ ಕುಲಸಚಿವ ಸಿದ್ದರಾಜು ಬಂಧನವಾಗಿರುವುದು ನಿಜ. ಅವರನ್ನು ಈಗಾಗಲೇ ಕೆಲಸದಿಂದ ಅಮಾನತು ಮಾಡಲಾಗಿದೆ ಎಂದು ರಿಜಿಸ್ಟರ್ಡ್ ಚಂದ್ರಶೇಖರ್ ತಿಳಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Registrar of KSOU (Karnataka State Open University)Mysuru, Dr K G Chandrasekhar has confirmed that the marks card scandal that took place in KSOU is true.
Please Wait while comments are loading...