ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನ ಸ್ವಚ್ಛತಾ ರಾಯಭಾರಿಯಾದ ರೀಫಾ ತಸ್ಕೀನ್ ಯಾರು ?

|
Google Oneindia Kannada News

ಮೈಸೂರು, ಜನವರಿ 19 : ಮೈಸೂರು ಸ್ವಚ್ಛ ನಗರಿಯಾಗಿ ಈ ಬಾರಿ ಪಟ್ಟ ಗಿಟ್ಟಿಸಿಕೊಳ್ಳಲು ಸತತ ಪ್ರಯತ್ನ ಮಾಡುತ್ತಿದೆ. ಅಲ್ಲದೇ ಸ್ವಚ್ಛತೆಯ ಕುರಿತು ರಾಯಭಾರಿಯನ್ನು ಸಹ ಆಯ್ಕೆ ಮಾಡಿದ್ದಾರೆ ಅಧಿಕಾರಿಗಳು. ಅವರೇ ರೀಫಾ ತಸ್ಕೀನ್. ವಿಶ್ವದಾಖಲೆ ಬರೆದ ರೀಫಾ ಸಾಧನೆ ಎಲ್ಲರಲ್ಲೂ ಅಚ್ಚರಿ ಮೂಡಿಸುವಂತಹದ್ದೇ ಸರಿ.

ಮೈಸೂರಿನ 9 ವರ್ಷದ ಬಾಲೆ ರೀಫಾ ಲಾರಿ, ಕಾರು ಸೇರಿದಂತೆ 11 ಬಗೆಯ ವಾಹನಗಳನ್ನು ನಿರಾಯಾಸವಾಗಿ ಚಾಲನೆ ಮಾಡಿ ವಿಶ್ವದಾಖಲೆ ಬರೆದಿದ್ದಾಳೆ. ಲಾರಿ, ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್‌(ಎಸ್‌ಯುವಿ) ಸೇರಿದಂತೆ ವಿವಿಧ ಕಂಪೆನಿಯ ಐಷಾರಾಮಿ ಕಾರುಗಳನ್ನು ಚಾಲನೆ ಮಾಡಿದ ರೀಫಾ ತಸ್ಕೀನ್‌ 'ಗೋಲ್ಡನ್‌ ಬುಕ್‌ ಆಫ್‌ ವರ್ಲ್ಡ್‌ ರೆಕಾರ್ಡ್‌' ಪುಸ್ತಕ ಸೇರಿದ್ದಾಳೆ.

ಫುಟ್‌ಪಾತ್ ಮೇಲೆ ಬೈಕ್ ಸಂಚಾರಕ್ಕೆ ಬಿತ್ತು ಬ್ರೇಕ್ ಫುಟ್‌ಪಾತ್ ಮೇಲೆ ಬೈಕ್ ಸಂಚಾರಕ್ಕೆ ಬಿತ್ತು ಬ್ರೇಕ್

ಮೈಸೂರಿನ ಎನ್‌.ಆರ್‌.ಮೊಹಲ್ಲಾದ ನಿವಾಸಿ ತಾಜುದ್ದೀನ್‌ ಹಾಗೂ ಫಾತಿಮಾ ಅವರ ಪುತ್ರಿ ತಸ್ಕೀನ್‌ ಅತಿ ಕಿರಿಯ ವಯಸ್ಸಿನಲ್ಲಿಯೇ ಹತ್ತುಚಕ್ರದ ಲಾರಿಯಿಂದ ಹಿಡಿದು ಎರಡು ಚಕ್ರದ ಮೊಪೆಡ್‌ವರೆಗೆ ಎಲ್ಲ ರೀತಿಯ ವಾಹನಗಳನ್ನು ಚಲಾಯಿಸುವ ಚಾಕಚಕ್ಯತೆ ಪಡೆದಿದ್ದಾಳೆ.

Reefa taskin selected as a Ambassador to mysuru clan city campaign

ಗೂಡ್ಸ್‌ ವಾಹನ, ಆಂಬ್ಯುಲೆನ್ಸ್‌, ಹೋಂಡಾ ಸಿಟಿ, ಸ್ಕಾರ್ಪಿಯೋ, ಟಾಟಾ ಸಫಾರಿ, ಮಾರುತಿ 800, ಓಮಿನಿ, ಮಾಟ್ಜ್‌ರ್‍ ವಾಹನಗಳನ್ನು ಸರಾಗವಾಗಿ ಓಡಿಸುವ ಈಕೆ ಎಲ್ಲರನ್ನೂ ನಿಬ್ಬೆರಗಾಗುವಂತೆ ಮಾಡಿದ್ದಾರೆ.

ಬೆಂಗಳೂರಿನ ಬಸವಳಿದ ಬೀದಿಗೆ ಐದೂವರೆ ಲಕ್ಷ ಹೊಸ ವಾಹನ ಬೆಂಗಳೂರಿನ ಬಸವಳಿದ ಬೀದಿಗೆ ಐದೂವರೆ ಲಕ್ಷ ಹೊಸ ವಾಹನ

ಹೋಂಡಾ ಸಿಟಿ, ಮಾರುತಿ ಕಾರ್‌ಗಳಲ್ಲಿ ಕುಳಿತಾಗ, ಅತಿ ಉತ್ಸಾಹದ ತರುಣರು ಓಡಿಸುವಂತೆ ವೇಗವಾಗಿ ಕಾರು ಓಡಿಸುವ ಪರಿ ಅಚ್ಚರಿ ಮೂಡಿಸುತ್ತದೆ. ಮೈಸೂರಿನ ತಸ್ಕೀನ್‌ ಗೋಲ್ಡನ್‌ ಬುಕ್‌ ಆಫ್‌ ವರ್ಲ್ಡ್‌ ರೆಕಾರ್ಡ್‌ಗೆ ಸೇರ್ಪಡೆಯಾದ ಎರಡನೆಯವಳು.

ಈ ಹಿಂದೆ ನಿರಾಲಂಬ ಪೂರ್ಣ ಚಕ್ರಾಸನ ಹೋಲುವ ಕಲಾತ್ಮಕ ಯೋಗದ ಒಂದು ಭಂಗಿಯನ್ನು ಒಂದು ನಿಮಿಷಕ್ಕೆ15 ಬಾರಿ ಪೂರ್ಣಗೊಳಿಸುವ ಮೂಲಕ ಮೈಸೂರಿನ ಖುಷಿ ದಾಖಲೆ ಮಾಡಿದ್ದರು. ಈ ದಾಖಲೆ ಮಾಡಲಿಕ್ಕಾಗಿಯೇ, ನಗರ ಪೊಲೀಸ್‌ ಆಯುಕ್ತರಿಂದ ಅನುಮತಿ ಪಡೆಯಲಾಗಿತ್ತು.

ಡ್ರೋಣ್‌ ಬಳಸಿ ಟ್ರಾಫಿಕ್ ಮೇಲೆ ನಿಗಾ ಇಡ್ತಾರಂತೆ ಪೊಲೀಸರು ಡ್ರೋಣ್‌ ಬಳಸಿ ಟ್ರಾಫಿಕ್ ಮೇಲೆ ನಿಗಾ ಇಡ್ತಾರಂತೆ ಪೊಲೀಸರು

ತಾಜುದ್ದೀನ್‌- ಫಾತಿಮಾ ದಂಪತಿಯ ಎರಡನೇ ಪುತ್ರಿ ರೀಫಾ ತಸ್ಕೀನ್‌ ನಗರದ ಸೇಂಟ್‌ ಜೋಸೆಫ್‌ ಶಾಲೆಯಲ್ಲಿ ಎರಡನೇ ತರಗತಿ ಓದುತ್ತಿದ್ದಾಳೆ. ತಾಯಿ ಫಾತಿಮಾ ಶಿಕ್ಷಕಿ, ತಂದೆ ತಾಜುದ್ದೀನ್‌ ಮೆಕ್ಯಾನಿಕಲ್‌.

ತಾಜುದ್ದೀನ್‌ ಮೊದಲಿನಿಂದಲೂ ಕಾರು ಮತ್ತು ಬೈಕ್‌ ರೇಸ್‌ನಲ್ಲಿ ಭಾಗವಹಿಸುತ್ತಿದ್ದು, ಆ ಕ್ಷೇತ್ರದಲ್ಲಿ ಹೆಸರು ಮಾಡಿದ್ದಾರೆ. ಗಂಡು ಮಗುವಾದರೆ ಒಳ್ಳೆ ರೇಸರ್‌ ಮಾಡಬೇಕೆಂಬ ಆಸೆ ಹೊಂದಿದ್ದರು.

ಆದರೆ ಹೆಣ್ಣು ಮಗು ಹುಟ್ಟಿತೆಂದು ಸುಮ್ಮನಾಗಲಿಲ್ಲ. ದಂಗಲ್‌ ಸಿನಿಮಾದ 'ಅಪ್ಪನಂತೆ' ಮಗಳಿಗೆ ತರಬೇತಿ ನೀಡಲು ಮುಂದಾದರು. ತಾವು ರೇಸ್‌ಗಾಗಿ ಪ್ರಾಕ್ಟೀಸ್‌ ಮಾಡುವಾಗ, ಏಳು ತಿಂಗಳ ರೀಫಾಳನ್ನು ತೊಡೆ ಮೇಲೆ ಇಲ್ಲವೇ ಪಕ್ಕದಲ್ಲಿ ಕೂರಿಸಿಕೊಂಡು ಅಭ್ಯಾಸ ಮಾಡುತ್ತಿದ್ದರಂತೆ ರೀಫಾ ತಂದೆ ತಾಜುದ್ದೀನ್.

ಒಟ್ಟಾರೆ ಹೀಗೆ ಸಾಧಕರನ್ನು ಗುರುತಿಸಿ ಈ ಬಾರಿ ಮೈಸೂರು ಮಹಾನಗರ ಪಾಲಿಕೆ ಸ್ವಚ್ಛತಾ ರಾಯಭಾರಿಯನ್ನಾಗಿಸಿರುವುದು ಪ್ರಶಂಸನಾರ್ಹವೇ ಸರಿ.

English summary
Mysuru city corporation officials selected Reefa taskin as a Ambassador to mysuru clan city campaign.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X