ಚಾಮುಂಡಿಗೆ ಆಷಾಢ ಮಾಸದಲ್ಲಿ ದಾಖಲೆಯ ಆದಾಯ

Posted By:
Subscribe to Oneindia Kannada

ಮೈಸೂರು, ಜುಲೈ 28 : ವಿಶ್ವವಿಖ್ಯಾತ ಚಾಮುಂಡೇಶ್ವರಿ ದೇಗುಲ ಮುಂದಿನ ದಿನಗಳಲ್ಲಿ ಕರ್ನಾಟಕದ ಅತೀ ಶ್ರೀಮಂತ ದೇವಸ್ಥಾನಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಡುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ.

ಚಾಮುಂಡಿ ಬೆಟ್ಟದಲ್ಲಿ ಆಷಾಢ ಶುಕ್ರವಾರ 64 ಲಕ್ಷ ರುಪಾಯಿ ಹುಂಡಿ ಹಣ ಸಂಗ್ರಹ

ಕೇವಲ ಆಷಾಢ ಮಾಸದ 4 ಶುಕ್ರವಾರಗಳು ಸೇರಿ ಏಪ್ರಿಲ್‍ನಿಂದ ಜುಲೈ 26ರವರೆಗೆ ದೇವಸ್ಥಾನದ ಪ್ರವೇಶ ಶುಲ್ಕ, ಹುಂಡಿ ಗಳಿಕೆ ಹಾಗೂ ಇತರೆ ಸೇವಾ ಕಾಣಿಕೆಗಳಿಂದ 11.08 ಕೋಟಿ ರೂ.ಗಳ ದಾಖಲೆ ಆದಾಯ ಬಂದಿದೆ.

Record income for Chamundeshwari during Ashadha

ಕಳೆದ ಮೂರು ವರ್ಷಗಳಿಂದ ದೇವಾಲಯದ ಆದಾಯ ಗಣನೀಯವಾಗಿ ಏರಿಕೆಯಾಗಿದ್ದು, ಇದೇ ಮೊದಲ ಬಾರಿಗೆ ಪ್ರವೇಶ ಶುಲ್ಕದ ಮೂಲಕವೇ 1 ಕೋಟಿ ರೂ.ಗಳಿಗೂ ಹೆಚ್ಚು ಸಂಗ್ರಹವಾಗಿ ದಾಖಲೆ ನಿರ್ಮಿಸಿದೆ. ಇದು ಸಾರ್ವಕಾಲಿಕ ದಾಖಲೆಯಾಗಿದೆ.

2015ರಲ್ಲಿ ಇದೇ ಅವಧಿಯಲ್ಲಿ ಹುಂಡಿಯಲ್ಲಿ 1,62,92,707 ರೂ. ಸಂಗ್ರಹವಾಗಿದ್ದರೆ, 2016ರಲ್ಲಿ 3,51,39,248 ರೂ. ಶೇಖರಣೆಯಾಗಿತ್ತು. ಈ ವರ್ಷ ಇದನ್ನು ಮೀರಿ 3,86,30,365 ರೂ. ಸಂಗ್ರಹವಾಗಿದೆ. ಇದೇ ರೀತಿ ಕ್ರಮವಾಗಿ ಸೇವಾ ಕಾಣಿಕೆ ಮತ್ತು ಇತರೆ ಮೂಲಗಳಿಂದ 4,35,29,205 ರೂ., 4,35,08,507 ರೂ. ಹಾಗೂ 7,22,07, 104 ರೂ. ಆದಾಯ ಬಂದಿದ್ದು, ಒಟ್ಟಾರೆ 2017ರಲ್ಲಿ 11,08,37, 469 ರೂ. ಆದಾಯ ಬಂದಿದೆ.

ಆಷಾಡ ಶುಕ್ರವಾರ ಚಾಮುಂಡಿಬೆಟ್ಟಕ್ಕೆ ತೆರಳೋರು ಗಮನಿಸಿ..

ನಾಲ್ಕು ಆಷಾಢ ಶುಕ್ರವಾರ ಹಾಗೂ ಚಾಮುಂಡೇಶ್ವರಿ ವರ್ಧಂತಿ ಅವಧಿಯಲ್ಲಿ ಹುಂಡಿಯಲ್ಲಿ 1,74,32,412 ರೂ. ಸಂಗ್ರಹವಾಗಿದ್ದು, ಇದೂ ದಾಖಲೆಯಾಗಿದೆ. ನೆರೆ ರಾಜ್ಯಗಳ ಹಾಗೂ ರಾಜ್ಯಾದ್ಯಂತ ಸಾವಿರಾರು ಮಂದಿ ಹರಿದು ಬಂದಿದ್ದು, 50 ರೂ ಹಾಗೂ 300 ರೂ. ಟಿಕೆಟ್ ಮೂಲಕ ವಿಶೇಷ ದರ್ಶನ ಪಡೆದಿದ್ದಾರೆ.

ಮೊದಲ ಶುಕ್ರವಾರ 18,21,370ನ ರೂ. ಎರಡನೇ ಶುಕ್ರವಾರ 22,70,410 ರೂ., ಮೂರನೇ ಶುಕ್ರವಾರ 23,78,250 ರೂ., ಚಾಮುಂಡೇಶ್ವರಿ ವರ್ಧಂತಿಯಂದು 15,36,340 ರೂ. ಹಾಗೂ ನಾಲ್ಕನೇ ಶುಕ್ರವಾರ 23,76,660 ರೂ. ಪ್ರವೇಶದ ಮೂಲಕ ಹಣ ಸಂಗ್ರಹವಾಗಿ ದಾಖಲೆ ನಿರ್ಮಾಣವಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
From April to July 26, World famous Chamundeshwari temple in Mysuru has earned record collection. Through entry fees, hundi collection and other offerings it has grossed more than Rs. 11 crores.
Please Wait while comments are loading...