ಮೈಸೂರು : ಚಾಮರಾಜ ಕ್ಷೇತ್ರದಲ್ಲಿ ಜೆಡಿಎಸ್‌ಗೆ ಬಂಡಾಯದ ಬಿಸಿ!

Posted By: Gururaj
Subscribe to Oneindia Kannada
   ಕರ್ನಾಟಕ ಚುನಾವಣೆ 2018 : ಮೈಸೂರಿನ ಚಾಮರಾಜ ಕ್ಷೇತ್ರದಲ್ಲಿ ಜೆಡಿಎಸ್ ಗೆ ಬಂಡಾಯದ ಬಿಸಿ

   ಮೈಸೂರು, ನವೆಂಬರ್ 22 : ಚುನಾವಣೆ ದಿನಾಂಕ ನಿಗದಿಗೂ ಮೊದಲೇ ಅಭ್ಯರ್ಥಿ ಘೋಷಿಸಿದ ಜೆಡಿಎಸ್‌ ಪಕ್ಷಕ್ಕೆ ಅಸಮಾಧಾನದ ಬಿಸಿ ತಟ್ಟಿದೆ. ಮೈಸೂರಿನ ಚಾಮರಾಜ ಕ್ಷೇತ್ರಕ್ಕೆ ಅಭ್ಯರ್ಥಿಯನ್ನು ಪಕ್ಷ ಘೋಷಣೆ ಮಾಡಿತ್ತು.

   ಭಾನುವಾರ ಮೈಸೂರಿನ ಚಾಮರಾಜ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದ 'ಕುಮಾರಪರ್ವ ಸಮಾವೇಶ' ನಡೆಯಿತು. ಸಮಾವೇಶದಲ್ಲಿ ಕ್ಷೇತ್ರದ ಮುಂದಿನ ಚುನಾವಣೆ ಅಭ್ಯರ್ಥಿ ಪ್ರೊ.ಕೆ.ಎಸ್.ರಂಗಪ್ಪ ಎಂದು ಘೋಷಣೆ ಮಾಡಲಾಗಿದೆ.

   ಚಾಮರಾಜ ವಿಧಾನಸಭಾ ಕ್ಷೇತ್ರಕ್ಕೆ ಜೆಡಿಎಸ್ ನಿಂದ ಪ್ರೋ. ರಂಗಪ್ಪ ಕಣಕ್ಕೆ

   ಪಕ್ಷದ ಅಭ್ಯರ್ಥಿ ಘೋಷಣೆಯಾಗುತ್ತಿದ್ದಂತೆಯೇ ಜೆಡಿಎಸ್ ನಗರ ಘಟಕದ ಅಧ್ಯಕ್ಷ ಕೆ.ಹರೀಶ್ ಗೌಡ ಅಸಮಾಧಾನಗೊಂಡಿದ್ದಾರೆ. ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತೇನೆ ಎಂದು ಸವಾಲು ಹಾಕುವ ಮೂಲಕ ಬಂಡಾಯದ ಬಾವುಟ ಹಾರಿಸಿದ್ದಾರೆ.

   'ಹಣಬಲದಿಂದ ಸಿದ್ದರಾಮಯ್ಯ ಗೆಲುವು ಪಡೆಯುವುದು ಸಾಧ್ಯವಿಲ್ಲ'

   ಕೆ.ಜಿ.ಕೊಪ್ಪಲಿನಲ್ಲಿ ಸಭೆ ನಡೆಸಿದ ಹರೀಶ್ ಗೌಡ ಅವರ ಬೆಂಬಲಿಗರು ಹರೀಶ್ ಗೌಡ ಅವರನ್ನು ಅಭ್ಯರ್ಥಿ ಎಂದು ಘೋಷಣೆ ಮಾಡದಿದ್ದರೆ ಸಾಮೂಹಿಕವಾಗಿ ರಾಜೀನಾಮೆ ನೀಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

   ಚಿತ್ರಗಳು : ಕುಮಾರಪರ್ವ ರಾಜ್ಯ ಪ್ರವಾಸ

   'ನಾನು ಯಾವುದೇ ಸಭೆ ಕರೆದಿಲ್ಲ. ನನಗೆ ಆಗಿರುವ ಅನ್ಯಾಯವನ್ನು ಸರಿಪಡಿಸಲು ಸ್ವಯಂ ಪ್ರೇರಿತವಾಗಿ ಬೆಂಬಲಿಗರು ಸಭೆ ಕರೆದಿದ್ದಾರೆ. ನನ್ನ ನಾಯಕರು ನನಗೆ ಚೂರಿ ಹಾಕಿರಬಹುದು. ಆದರೆ, ಜನರು ನನ್ನ ಜೊತೆ ಇದ್ದಾರೆ' ಎಂದು ಕೆ.ಹರೀಶ್ ಗೌಡ ಹೇಳಿದ್ದಾರೆ.

   ವಿಶ್ರಾಂತ ಕುಲಪತಿ ಕೆ.ಎಸ್.ರಂಗಪ್ಪ

   ವಿಶ್ರಾಂತ ಕುಲಪತಿ ಕೆ.ಎಸ್.ರಂಗಪ್ಪ

   2018ರ ವಿಧಾನಸಭೆ ಚುನಾವಣೆಗೆ ಚಾಮರಾಜ ಕ್ಷೇತ್ರದಲ್ಲಿ ಮೈಸೂರು ವಿವಿ ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಜೆಡಿಎಸ್ ಅಭ್ಯರ್ಥಿ ಎಂದು ಎಂದು ಘೋಷಣೆ ಮಾಡಲಾಗಿದೆ.

   ಟಿಕೆಟ್ ಆಕಾಂಕ್ಷಿಯಾಗಿದ್ದರು

   ಟಿಕೆಟ್ ಆಕಾಂಕ್ಷಿಯಾಗಿದ್ದರು

   ಮೈಸೂರು ಜೆಡಿಎಸ್ ನಗರ ಘಟಕದ ಅಧ್ಯಕ್ಷ ಕೆ.ಹರೀಶ್ ಗೌಡ ಬೆಂಬಲಿಗರು ಕೆ.ಜಿ.ಕೊಪ್ಪಲಿನಲ್ಲಿ ಸಭೆ ನಡೆಸಿದ ಹರೀಶ್ ಗೌಡ ಅವರನ್ನು ಅಭ್ಯರ್ಥಿ ಎಂದು ಘೋಷಣೆ ಮಾಡದಿದ್ದರೆ ಸಾಮೂಹಿಕವಾಗಿ ರಾಜೀನಾಮೆ ನೀಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ. ಹರೀಶ್ ಗೌಡ ಅವರು ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದರು.

   'ನಾನು ಸಭೆ ಕರೆದಿಲ್ಲ'

   'ನಾನು ಸಭೆ ಕರೆದಿಲ್ಲ'

   ಕೆ.ಹರೀಶ್ ಗೌಡ ಅವರು ಈ ಬೆಳವಣಿಗೆ ಬಗ್ಗೆ ಮಾತನಾಡಿದ್ದು, 'ನಾನು ಯಾವುದೇ ಸಭೆ ಕರೆದಿಲ್ಲ. ನನಗೆ ಆಗಿರುವ ಅನ್ಯಾಯವನ್ನು ಸರಿಪಡಿಸಲು ಸ್ವಯಂ ಪ್ರೇರಿತವಾಗಿ ಸಭೆ ಕರೆದಿದ್ದಾರೆ. ನನ್ನ ನಾಯಕರು ನನಗೆ ಚೂರಿ ಹಾಕಿರಬಹುದು. ಆದರೆ, ಜನರು ನನ್ನ ಜೊತೆ ಇದ್ದಾರೆ' ಎಂದು ಹೇಳಿದ್ದಾರೆ.

   'ಎಚ್.ಡಿ.ರೇವಣ್ಣ ಅನುಯಾಯಿ'

   'ಎಚ್.ಡಿ.ರೇವಣ್ಣ ಅನುಯಾಯಿ'

   'ನಾನು ಎಚ್.ಡಿ.ರೇವಣ್ಣ ಅವರ ಅನುಯಾಯಿ ಎಂಬ ಕಾರಣಕ್ಕೆ ಮೈಸೂರಿನ ಇಬ್ಬರು ನಾಯಕರು ಮಾಡಿದ ವ್ಯವಸ್ಥಿತ ಸಂಚಿನಿಂದಾಗಿ ನನಗೆ ಟಿಕೆಟ್ ಕೈ ತಪ್ಪುವಂತಾಗಿದೆ. ದೇವೇಗವಡರು ನನ್ನ ತಂದೆ ಸಮಾನರು. ಅವರ ಕಾಲಿನ ಧೂಳಿಗೂ ನಾನು ಸಮನಲ್ಲ' ಎಂದು ಹರೀಶ್ ಗೌಡ ಹೇಳಿದ್ದಾರೆ.

   'ಗೆಲ್ಲುತ್ತೀಯಾ ಎಂದು ಹರಸಿದ್ದರು'

   'ಗೆಲ್ಲುತ್ತೀಯಾ ಎಂದು ಹರಸಿದ್ದರು'

   'ದೇವೇಗೌಡರು 9 ಬಾರಿ ಕರೆಸಿ ನನ್ನ ಜೊತೆ ಮಾತನಾಡಿದ್ದರು. ನೀನು ಗೆಲ್ಲುತ್ತೀಯಾ ಎಂದು ಹರಸಿದ್ದರು. ಕಡೆಯ ಕ್ಷಣದ ತನಕ ನನ್ನ ಪರವಾಗಿ ನಿಂತಿದ್ದರು. ಪಕ್ಷದಲ್ಲಿರುವ ಇಬ್ಬರು ಶಕುನಿಗಳು ನನ್ನ ವಿರುದ್ಧ ಕುಮಾರಣ್ಣನಿಗೆ ಚಾಡಿ ಹೇಳಿದ್ದಾರೆ. ಅವರಿಗೆ ಉಳಿಗಾಲವಿಲ್ಲ' ಎಂದು ಕೆ.ಹರೀಶ್ ಗೌಡ ಹೇಳಿದ್ದಾರೆ.

   ರಂಗಪ್ಪ ಮನೆಗೆ ಎಚ್.ಡಿ.ಕುಮಾರಸ್ವಾಮಿ ಭೇಟಿ

   ರಂಗಪ್ಪ ಮನೆಗೆ ಎಚ್.ಡಿ.ಕುಮಾರಸ್ವಾಮಿ ಭೇಟಿ

   ಎಚ್.ಡಿ.ಕುಮಾರಸ್ವಾಮಿ ಅವರು ಭಾನುವಾರಪ್ರೊ.ಕೆ.ಎಸ್.ರಂಗಪ್ಪ ಮನೆಗೆ ಭೇಟಿ ನೀಡಿದ್ದರು. ಕಾಂಗ್ರೆಸ್ ಪಕ್ಷದ ವಾಸು ಕ್ಷೇತ್ರದ ಹಾಲಿ ಶಾಸಕರು. 2018ರ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಗೆಲುವು ಸಾಧಿಸಲು ಜೆಡಿಎಸ್ ತಂತ್ರ ರೂಪಿಸಿದೆ.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   JDS is now facing rebel trouble at Chamaraja constituency, Mysuru. Party announced Prof K.S.Rangappa as assembly elections 2018 candidate for constituency. Mysuru city party president K.Harish Gowda opposed for party move.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ