ಮೈಸೂರಿನ ರವೀಶ್ ದ್ವಿತೀಯ ಪಿಯುನಲ್ಲಿ ರಾಜ್ಯಕ್ಕೆ ಪ್ರಥಮ

Posted By:
Subscribe to Oneindia Kannada

ಮೈಸೂರು, ಜೂನ್ 17 : ದ್ವಿತೀಯ ಪಿಯುಸಿ ಫಲಿತಾಂಶದ ಗೊಂದಲ ಬಹಿರಂಗವಾಗಿದೆ. ಮೈಸೂರಿನ ರವೀಶ್ ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ಹಿಂದೆ, ಬೆಂಗಳೂರಿನ ರಕ್ಷಿತಾ ತಮನ್ ಮೊದಲ ಸ್ಥಾನಗಳಿಸಿದ್ದರು.

ಮೈಸೂರಿನ ರಾಮಕೃಷ್ಣ ಆಶ್ರಮದ ವಿದ್ಯಾರ್ಥಿ ರವೀಶ್ 597 ಅಂಕಗಳನ್ನು ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ಮೇ 25ರಂದು ಫಲಿತಾಂಶ ಪ್ರಕಟಗೊಂಡಾಗ ರವೀಶ್ ಅವರಿಗೆ 589 ಅಂಕಗಳು ಬಂದಿದ್ದವು. ಆದ್ದರಿಂದ, ಅವರು ಮರು ಮೌಲ್ಯಮಾಪನಕ್ಕೆ ಅರ್ಜಿ ಹಾಕಿದ್ದರು. [ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ]

ravish

ಮೊದಲು ಇಂಗ್ಲಿಷ್‌ನಲ್ಲಿ ರವೀಶ್ ಅವರಿಗೆ 89 ಅಂಕಗಳು ಬಂದಿದ್ದವು. ಮರು ಮೌಲ್ಯಮಾಪನದ ಬಳಿಕ ಅವರಿಗೆ 8 ಅಂಕ ಬಂದಿದೆ. ಆದ್ದರಿಂದ, ಅವರ ಒಟ್ಟು ಅಂಕಗಳಿಕೆ 597 ಆಗಿದೆ. ಆದ್ದರಿಂದ ವಿಜ್ಞಾನ ವಿಭಾಗದಲ್ಲಿ ಅವರು ರಾಜ್ಯಕ್ಕೆ ಮೊದಲ ಸ್ಥಾನಗಳಿಸಿದಂತಾಗಿದೆ. [ಪಿಯು ಫಲಿತಾಂಶ ಯಾವ ಜಿಲ್ಲೆಗೆ ಯಾವ ಸ್ಥಾನ]

ಫಲಿತಾಂಶ ಪ್ರಕಟಗೊಂಡಾಗ ಬೆಂಗಳೂರಿನ ಸರ್ದಾರ್ ವಲ್ಲಭಬಾಯ್ ಪಟೇಲ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಟಿ. ರಕ್ಷಿತಾ ತಮನ್ 596 ಅಂಕ ಪಡೆಯುವ ಮೂಲಕ ರಾಜ್ಯಕ್ಕೆ ಮೊದಲ ಸ್ಥಾನವನ್ನು ಪಡೆದಿದ್ದರು. ಈ ಫಲಿತಾಂಶ ಈಗ ಬದಲಾವಣೆಯಾಗಿದೆ. [ಬಳ್ಳಾರಿಯ ಯಶ್ವಿತಾ ಸಾಧನೆಗೆ ಅಡ್ಡಿಯಾಗದ ಬಡತನ]

ರವೀಶ್ ಪಡೆದ ಅಂಕಗಳು
ಸಂಸ್ಕೃತ - 100
ಭೌತಶಾಸ್ತ್ರ - 100
ಗಣಿತ - 100
ಜೀವಶಾಸ್ತ್ರ - 100
ರಸಾಯನ ಶಾಸ್ತ್ರ - 99
ಇಂಗ್ಲೀಶ್ - 98

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Mysuru Ramakrishna Ashram PU college student Ravish has bagged the top state rank in 2nd PUC science after revaluation. Exam result announced on May 30, 2016 Bengaluru based Rakshitha bagged top rank.
Please Wait while comments are loading...