ವೈರಲ್ ಆಯ್ತು ಮೈಸೂರಿನಲ್ಲಿ ನಡೆದ ಆ ಅಪಘಾತದ ದೃಶ್ಯ

Posted By:
Subscribe to Oneindia Kannada

ಮೈಸೂರು, ಜೂ. 14: ಖಾಸಗಿ ಬಸ್‌ನವರು ಮಾತ್ರ ಓವರ್ ಟೇಕ್ ಮಾಡುತ್ತಾರೆನ್ನುವುದು ಬಹುತೇಕ ಜನರ ದೂರು. ಆದ್ರೆ ಖಾಸಗಿ ಬಸ್‌ಗಳನ್ನು ಮೀರಿಸುವ ರೀತಿ ಕೆಎಸ್‌ಆರ್‌ಟಿಸಿ ಚಾಲಕನೋರ್ವ ನಡೆದುಕೊಂಡಿದ್ದು, ನಿರ್ಲಕ್ಷ್ಯದಿಂದ ಓರ್ವನ ಪ್ರಾಣವನ್ನೇ ತೆಗೆದಿದ್ದಾನೆ. ಈ ಅಪಘಾತ ಮಂಗಳವಾರವೇ ನಡೆದಿದ್ದರೂ ಗುರುವಾರ ಈ ವಿಡಿಯೋ ವೈರಲ್ ಆಗಿದೆ.

ಬಸ್ ಒಂದು ಮುಂದೆ ಸಾಗುತ್ತಿದ್ದ ಬೈಕ್ ಗೆ ಡಿಕ್ಕಿ ಹೊಡೆಯೊಡೆಯುವುದನ್ನು ತಪ್ಪಿಸುವ ಭರದಲ್ಲಿ ಏಕಾಏಕಿ ಬಲಬದಿಗೆ ಸಂಚರಿಸಿದ ಪರಿಣಾಮ ಎದುರಿನಿಂದ ಬರುತ್ತಿದ್ದ ಬೈಕ್ ಗೆ ಗುದ್ದಿದ್ದಾನೆ. ಈ ಹಿನ್ನೆಲೆ ಬೈಕ್ ನಲ್ಲಿ ಸಾಗುತ್ತಿದ್ದ ಇಬ್ಬರ ಪೈಕಿ ಓರ್ವ ಸ್ಥಳದಲ್ಲೇ ಸಾವನ್ನಪ್ಪಿ ಮತ್ತೋರ್ವ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಿಸಿದ ಘಟನೆ ಮೈಸೂರು ಜಿಲ್ಲೆಯ ಹುಣಸೂರು ಪಟ್ಟಣದಲ್ಲಿ ನಡೆದಿದೆ.

Rash Driving: KSRTC bus driver kills biker and other crime news from Mysore

ಮೃತನನ್ನು ಮಾಗಳಿ ಗ್ರಾಮದ ನಿವಾಸಿ ಮಂಜುನಾಥ್ ( 35 ) ಎಂದು ಗುರುತಿಸಲಾಗಿದೆ. ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಮಾಗಳಿ ಗ್ರಾಮದ ನಿವಾಸಿಗಳಾದ ಮಂಜುನಾಥ್ ಹಾಗೂ ರವಿಕುಮಾರ್ ತಮ್ಮ ದ್ವಿಚಕ್ರ ವಾಹನದಲ್ಲಿ ಸಾಗುತ್ತಿದ್ದ ಸಂದರ್ಭದಲ್ಲಿ ಎದುರಿನಿಂದ ವೇಗವಾಗಿ ಬಂದ ಸಾರಿಗೆ ಬಸ್ ಮುಂದೆ ಸಾಗುತ್ತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿಯೊಡೆಯುವುದನ್ನು ತಪ್ಪಿಸಲು ಹೋಗಿ ಏಕಾಏಕಿ ಬಲ ಬದಿಗೆ ಸರಿದ ಪರಿಣಾಮ ಈ ಅವಘಡ ಸಂಭವಿಸಿದೆ.

ಬಸ್ ಗುದ್ದಿದ ರಭಸಕ್ಕೆ ಬೈಕ್ ಸವಾರ ಮಂಜುನಾಥ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಹಿಂಬದಿ ಸವಾರ ರವಿಕುಮಾರ್ ತೀವ್ರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಭಯಾನಕ ಅಪಘಾತದ ದೃಶ್ಯ ಸಮೀಪದಲ್ಲಿ ಅಳವಡಿಸಿರುವ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಸಂಬಂಧ ಹುಣಸೂರು ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Rash Driving: KSRTC bus driver kills biker and other crime news from Mysore

---

ಅಪಘಾತ: ಚಾಲಕನ ವಿರುದ್ಧ ಪುತ್ತೂರು ಡಿಸಿ ಕ್ರಮ

ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಬಸ್ ಚಾಲಕ ಪುನೀತ್ ವಿರುದ್ಧ ಹುಣಸೂರು ಡಿಪೋ ಮ್ಯಾನೇಜರ್ ಪ್ರಾಥಮಿಕ ವರದಿ ನೀಡಿದ್ದಾರೆ. ಅಪಘಾತಕ್ಕೆ ಬಸ್ ಚಾಲಕನ ಅತಿವೇಗ ಹಾಗೂ ಅಜಾಗರೂಕತೆಯ ಚಾಲನೆಯೇ ಕಾರಣ ಎಂದು ವರದಿಯಲ್ಲಿ ಅಧಿಕಾರಿ ನಮೂದಿಸಿದ್ದು, ಮೈಸೂರು ವಿಭಾಗೀಯ ನಿಯಂತ್ರಣಾಧಿಕಾರಿ ಮಹೇಶ್ ಗೆ ಈ ವರದಿ ಸಲ್ಲಿಸಿದ್ದಾರೆ.

---

2 ಲಕ್ಷ ರು. ಮೌಲ್ಯದ ಸ್ವತ್ತು ಕಳುವು: ದೂರು

ಬೀಗ ಹಾಕಿದ್ದ ಮನೆಯ ಮುಂಬಾಗಿಲಿನ ಬೀಗ ಒಡೆದು ಯಾರೋ ಕಳ್ಳರು ಲ್ಯಾಪ್ ಟಾಪ್ ಹಾಗೂ ಬೆಳ್ಳಿಯ ಆಭರಣಗಳನ್ನು ಕಳುವು ಮಾಡಿದ್ದಾರೆಂದು ಆರೋಪಿಸಿ ಮಹಿಳೆಯೋರ್ವರು ವಿಜಯನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಅಶ್ವಿನಿ ಎಂಬವರೇ ದೂರು ದಾಖಲಿಸಿದವರಾಗಿದ್ದಾರೆ. ಜೂ.13 ರಂದು ಬೆಳಿಗ್ಗೆ 8.30 ರಿಂದ ಸಂಜೆ 6ರ ನಡುವೆ #485, 21 ನೇ ಕ್ರಾಸ್, ರೈಲ್ವೇ ಬಡಾವಣೆ, 02 ನೇ ಹಂತ ವಿಜಯನಗರ ರವರ ಬೀಗ ಹಾಕಿದ್ದ ಮನೆಯ ಮುಂಬಾಗಿಲಿನ ಬೀಗವನ್ನು ಯಾರೋ ತೆಗೆದು ಮನೆಯೊಳಗೆ ಪ್ರವೇಶಿಸಿ ಬೆಡ್‌ರೂಂನ ಗೋದ್ರೆಜ್‌ ಬೀರುವಿನಲ್ಲಿಟ್ಟಿದ್ದ ಒಟ್ಟು 110 ಗ್ರಾಂ ತೂಕದ ಚಿನ್ನದ ಒಡವೆಗಳು, 01 ಹೆಚ್‌‌.ಪಿ. ಲ್ಯಾಪ್‌ಟಾಪ್‌ ಮತ್ತು ಬೆಳ್ಳಿಯ ಪದಾರ್ಥಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ಸುಮಾರು 2,00,000ರೂ.ಮೌಲ್ಯದ ವಸ್ತು ಕಳ್ಳತನವಾಗಿದೆ ಪದಾರ್ಥಗಳನ್ನು ಪತ್ತೆ ಮಾಡಿಕೊಟ್ಟು ಕಳ್ಳತನ ಮಾಡಿದವರ ವಿರುದ್ಧ ಸೂಕ್ತ ಕ್ರಮ ಜರುಗಿಸಿ ಎಂದು ದೂರು ನೀಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
The accident in Mysore when a KSRTC bus went wrong side his hit bike raider which lead to biker's death. The incident happened on Tuesday, but the video gone viral on Wednesday.
Please Wait while comments are loading...