ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಕೇಶ್‌ ಸಿದ್ದರಾಮಯ್ಯ ಇನ್ನು ನೆನೆಪು ಮಾತ್ರ

|
Google Oneindia Kannada News

ಮೈಸೂರು, ಆಗಸ್ಟ್ 01 : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಣ್ಣೀರು, ಸಾವಿರಾರು ಜನರ ಅಶ್ರುತರ್ಪಣದೊಂದಿಗೆ ರಾಕೇಶ್ ಸಿದ್ದರಾಮಯ್ಯ ಅವರ ಅಂತ್ಯಕ್ರಿಯೆ ಹಾಲುಮತ ವಿಧಿವಿಧಾನದಂತೆ ಸಂಪ್ರದಾಯಿಕವಾಗಿ ಟಿ.ಕಾಟೂರಿನ ಫಾರಂ ಹೌಸ್‍ನಲ್ಲಿ ಸೋಮವಾರ ಸಂಜೆ ನಡೆಯಿತು.

ಕಾಗಿನೆಲೆ ಮಠದ ಪೀಠಾಧ್ಯಕ್ಷರಾದ ನಿರಂಜನಮಹಾಸ್ವಾಮೀಜಿ ಅವರ ನೇತೃತ್ವದಲ್ಲಿ ಅಂತ್ಯ ಸಂಸ್ಕಾರ ನಡೆಯಿತು. ರಾಕೇಶ್ ಸಿದ್ದರಾಮಯ್ಯ ಪುತ್ರ ಧವನ್ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿದರು. ಕುಟುಂಬದವರು, ಸಿದ್ದರಾಮಯ್ಯ ಅವರ ಆಪ್ತರಿಗೆ ಮಾತ್ರ ಫಾರಂ ಹೌಸ್‌ಗೆ ಪ್ರವೇಶ ನೀಡಲಾಗಿತ್ತು.[ಚಿತ್ರಗಳು : ರಾಕೇಶ್ ಸಿದ್ದರಾಮಯ್ಯಗೆ ಅಂತಿಮ ನಮನ]

Rakesh Siiddaramaiah last rites take place in Mysuru

ಧಾರ್ಮಿಕ ವಿಧಿ-ವಿಧಾನಗಳ ಅನ್ವಯ, ಕಾಗಿನೆಲೆ ಪೀಠದ ಕನಕಗುರು ನಿರಂಜನಾನಂದಪುರಿ ಸ್ವಾಮೀಜಿ, ಕನಕಗುರು ಪೀಠದ ಮಹಾಸ್ವಾಮೀಜಿ ಹಾಗೂ ಡಾ.ಭಾನುಪ್ರಕಾಶ್ ನೇತೃತ್ವದ ಪುರೋಹಿತರ ತಂಡ ಹಾಲುಮತ ಸಂಪ್ರದಾಯದಂತೆ ತಾಮ್ರದ ತಗಡಿನ ಮೇಲೆ 8 ದೀಪಗಳನ್ನಿಟ್ಟು, ವಿಭೂತಿ, ಬಿಲ್ವಪತ್ರೆ, ಭಂಡಾರ ಧಾರಣೆ ಮಾಡಿ ಸಕಲ ಪೂಜೆಗಳೊಂದಿಗೆ ಅಂತ್ಯಸಂಸ್ಕಾರ ನಡೆಸಿಕೊಟ್ಟರು.

ಕಣ್ಣೀರಿಟ್ಟ ಸಿದ್ದರಾಮಯ್ಯ : ಕಣ್ಣೀರಿಡುತ್ತಿದ್ದ ಸಿದ್ದರಾಮಯ್ಯ..ಸಂತೈಸುತ್ತಿದ್ದ ಸಚಿವರು..ದುಃಖದ ಕಟ್ಟೆಯೊಡೆದು ಅಪ್ಪಿಕೊಂಡು ಸಾಂತ್ವನ ಹೇಳಿದ ಡಿ.ವಿ.ಸದಾನಂದಗೌಡ, ಡಿ.ಕೆ.ಶಿವಕುಮಾರ್..ಹರಿದು ಬಂದ ಜನಸ್ತೋಮ..ಮುಗಿಲು ಮುಟ್ಟಿದ ರಾಕೇಶಣ್ಣ ಅಮರಾಗಲಿ ಘೋಷಣೆ.['ರಾಕೇಶ್ ಜತೆಗಿನ ಗ್ರೂಪ್ ಫೋಟೋ ರಹಸ್ಯ ಬಯಲು']

ಇದು ಮೈಸೂರಿನ ದಸರಾ ವಸ್ತುಪ್ರದರ್ಶನ ಮೈದಾನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ರಾಕೇಶ್ ಸಿದ್ದರಾಮಯ್ಯ ಅವರ ಪಾರ್ಥೀವ ಶರೀರ ವೀಕ್ಷಣೆಗಿಟ್ಟ ಸ್ಥಳದಲ್ಲಿ ಕಂಡು ಬಂದ ಹೃದಯವಿದ್ರಾವಕ ಕ್ಷಣಗಳು.

yeddyurappa

ಸೋಮವಾರ ಮುಂಜಾನೆಯಿಂದಲೇ ನಗರ ಸೇರಿದಂತೆ ಜಿಲ್ಲೆ, ರಾಜ್ಯದ ವಿವಿಧ ಕಡೆಗಳಿಂದ ರಾಕೇಶ್ ಸಿದ್ದರಾಮಯ್ಯ ಅವರ ಪಾರ್ಥೀವ ಶರೀರವನ್ನು ವೀಕ್ಷಿಸಿ, ಅಂತಿಮ ನಮನ ಸಲ್ಲಿಸಲು, ರಾಜಕೀಯ ನಾಯಕರು, ಅಭಿಮಾನಿಗಳು, ಸ್ನೇಹಿತರ ದೊಡ್ಡ ದಂಡೇ ದಸರಾ ವಸ್ತುಪ್ರದರ್ಶನ ಮೈದಾನದತ್ತ ಧಾವಿಸಿ ಬಂದಿತ್ತು.

ಮಂಡಕಳ್ಳಿ ವಿಮಾನ ನಿಲ್ದಾಣದಿಂದ ವಿಶೇಷ ವಾಹನದಲ್ಲಿ ಸಾರ್ವಜನಿಕ ವೀಕ್ಷಣೆಗೆ ಸಿದ್ಧತೆ ಮಾಡಿದ್ದ ದಸರಾ ವಸ್ತುಪ್ರದರ್ಶನ ಮೈದಾನಕ್ಕೆ ಸುಮಾರು 12.45ರ ವೇಳೆಗೆ ಪಾರ್ಥೀವ ಶರೀರ ತರಲಾಯಿತು. ಪಾರ್ಥೀವ ಶರೀರ ವಸ್ತು ಪ್ರದರ್ಶನದ ಆವರಣಕ್ಕೆ ಪ್ರವೇಶಿಸುತ್ತಿದ್ದಂತೆಯೇ ಅಭಿಮಾನಿಗಳು ರಾಕೇಶಣ್ಣನಿಗೆ ಜಯವಾಗಲಿ ಎಂದು ಘೋಷಣೆ ಕೂಗಿದರು. ಮಗನ ಅಂತಿಮ ದರ್ಶನಕ್ಕೆ ಹರಿದು ಬಂದ ಜನಸ್ತೋಮವನ್ನು ಕಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ಕಣ್ಣೀರಾದರು.

siddaramaiah

ಪಾರ್ಥೀವ ಶರೀರಕ್ಕೆ ಮೊದಲಿಗೆ ಸ್ವಾಮೀಜಿಗಳು ಪುಷ್ಪಾರ್ಚನೆ ಮಾಡಿದರು. ಆ ನಂತರ ಮೊದಲಿಗೆ ವಾಟಾಳ್ ನಾಗರಾಜ್, ಸಾ.ರಾ.ಗೋವಿಂದು ಮೊದಲಾದವರು ದರ್ಶನ ಪಡೆದರು. ಆ ನಂತರ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಕಣ್ಣೀರು ಸುರಿಸುತ್ತಲೇ ಸಿಎಂಗೆ ಸಾಂತ್ವನ ಹೇಳಿದರು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ವಿರೋಧಪಕ್ಷದ ನಾಯಕ ಜಗದೀಶ್ ಶೆಟ್ಟರ್, ವಿಧಾನಪರಿಷತ್ ವಿರೋಧಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಸೇರಿದಂತೆ ಬಿಜೆಪಿಯ ವಿವಿಧ ನಾಯಕರು ಅಂತಿಮ ನಮನ ಸಲ್ಲಿಸಿದರು.

ಲೋಕಸಭೆಯ ವಿರೋಧಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಮಾಜಿ ಕೇಂದ್ರ ಸಚಿವ ವೀರಪ್ಪ ಮೊಯ್ಲಿ, ಕೆ.ಎಚ್.ಮುನಿಯಪ್ಪ, ಮಾಜಿ ಸಚಿವ ಶ್ರೀನಿವಾಸ ಪ್ರಸಾದ್, ರಾಜ್ಯಪಾಲ ವಜುಭಾಯಿ ವಾಲ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರ ಸ್ವಾಮಿ, ನಟ ದರ್ಶನ್ ಸೇರಿದಂತೆ ಹಲವು ನಾಯಕರು ಅಂತಿಮ ದರ್ಶನ ಪಡೆದರು.

mallikarjua karge

ಎಲ್ಲವನ್ನೂ ಮಗನ ಪಾರ್ಥೀವ ಶರೀರದ ಮುಂದೆ ನಿಂತು ನೋಡುತ್ತಿದ್ದ ಸಿದ್ದರಾಮಯ್ಯ ಅವರ ಕಣ್ಣುಗಳು ನೀರಾಗುತ್ತಿದ್ದವು. ಅಂತಿಮ ನಮನ ಸಲ್ಲಿಸಿ ಗಣ್ಯರು ಸಂತೈಸುತ್ತಿದ್ದರೆ ಅವರು ತಲೆಯಾಡಿಸುತ್ತಾ ಕಣ್ಣೀರು ಒರೆಸಿಕೊಳ್ಳುತ್ತಿದ್ದ ದೃಶ್ಯ ಹೃದಯ ಕರಗಿಸುವಂತಿತ್ತು.

ಮಧ್ಯಾಹ್ನ ಮೂರು ಗಂಟೆ ನಂತರ ದಸರಾ ವಸ್ತುಪ್ರದರ್ಶನ ಮೈದಾನದಿಂದ ಪಾರ್ಥೀವ ಶರೀರವನ್ನು ಅಂತ್ಯಕ್ರಿಯೆ ನಡೆಯುವ ಟಿ.ಕಾಟೂರು ಫಾರಂ ಹೌಸ್‍ಗೆ ತೆಗೆದುಕೊಂಡು ಹೋಗಲಾಯಿತು. ಈ ಸಂದರ್ಭ ಅಂತಿಮ ದರ್ಶನ ಸಿಗದ ಅಭಿಮಾನಿಗಳ ಆಕ್ರೋಶವೂ ಕಂಡು ಬಂದಿತು.

English summary
Thousands paid homage to Rakesh (39), elder son of Siddaramaiah - chief minister of Karnataka, on 1st August in Mysuru. He was laid to rest in T Katur at his farm house.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X