ರಾಕೇಶ್ ಸಿದ್ದರಾಮಯ್ಯ ಪಾರ್ಥೀವ ಶರೀರದ ನಿರೀಕ್ಷೆಯಲ್ಲಿ

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮೈಸೂರು, ಆಗಸ್ಟ್ 01 : ಎಚ್.ಡಿ.ಕೋಟೆ ರಸ್ತೆಯಲ್ಲಿರುವ ಟಿ.ಕಾಟೂರಿನ ಫಾರಂ ಹೌಸ್‍ನಲ್ಲಿ ರಾಕೇಶ್ ಸಿದ್ದರಾಮಯ್ಯ ಅವರ ಅಂತ್ಯಕ್ರಿಯೆ ನಡೆಯಲಿದೆ. ಹಾಲು ಮತದ ವಿಧಿವಿಧಾನ, ಸಂಪ್ರದಾಯಗಳಂತೆ ಅಂತ್ಯಕ್ರಿಯೆ ನಡೆಯಲಿದ್ದು, ಕಾಗಿನೆಲೆ ಮಠದ ಫೀಠಾಧ್ಯಕ್ಷರಾದ ನಿರಂಜನಮಹಾಸ್ವಾಮೀಜಿ ಸೇರಿದಂತೆ ಹಲವು ಮಠಗಳ ಸ್ವಾಮೀಜಿಗಳು ಅಂತ್ಯಕ್ರಿಯೆಯಲ್ಲಿ ಭಾಗವಹಿಸಲಿದ್ದಾರೆ.

ಹಿಂದಿನ ಸುದ್ದಿ : ಬಹು ಅಂಗಾಂಗ ವೈಫಲ್ಯದಿಂದ ಬೆಲ್ಜಿಯಂನಲ್ಲಿ ನಿಧನರಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ರಾಕೇಶ್ ಸಿದ್ದರಾಮಯ್ಯ ಅವರ ಪಾರ್ಥೀವ ಶರೀರ ಆಗಮನದ ನಿರೀಕ್ಷೆಯಲ್ಲಿ ಜನರಿದ್ದಾರೆ. ಮೈಸೂರು ಹಾಗೂ ಹುಟ್ಟೂರಾದ ಸಿದ್ದರಾಮಯ್ಯನಹುಂಡಿಯಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.['ರಾಕೇಶ್ ಜತೆಗಿನ ಗ್ರೂಪ್ ಫೋಟೋ ರಹಸ್ಯ ಬಯಲು']

ಈಗಾಗಲೇ ಮೈಸೂರಿನ ಶಾರದಾದೇವಿನಗರದಲ್ಲಿರುವ ಮುಖ್ಯಮಂತ್ರಿಗಳ ನಿವಾಸದ ಬಳಿ ಜಮಾಯಿಸಿರುವ ಅಭಿಮಾನಿಗಳು ಕಂಬನಿ ಮಿಡಿಯುತ್ತಿದ್ದಾರೆ. ಸಂಬಂಧಿಕರು ಹುಟ್ಟೂರಿನಲ್ಲಿ ಜಮಾಯಿಸಿದ್ದಾರೆ. ಜಿಲ್ಲೆಯಾದ್ಯಂತ ಶ್ರದ್ಧಾಂಜಲಿ ಕಾರ್ಯಕ್ರಮಗಳು ನಡೆಯುತ್ತಿವೆ.[ರಾಕೇಶ್ ನನ್ನು ರಾಜಕೀಯಕ್ಕೆ ಕರೆತರುವುದು ಸಿದ್ದರಾಮಯ್ಯ ಕನಸಾಗಿತ್ತು]

rakesh siddaramaiah

ತಂದೆಯ ಅನುಪಸ್ಥಿತಿಯಲ್ಲಿ ತಮ್ಮ ಕ್ಷೇತ್ರದ ಜನರ ನೋವು, ನಲಿವು, ಕಷ್ಟ ಸುಖಗಳನ್ನು ವಿಚಾರಿಸಿ ಸಾಂತ್ವಾನ, ಸಹಾಯ ಮಾಡುತ್ತಿದ್ದ ರಾಕೇಶ್ ಗ್ರಾಮೀಣ ಭಾಗದಲ್ಲಿ ಅದರಲ್ಲೂ ವರುಣ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಹೊಂದಿದ್ದರು. ಈಗ ಜನ ಕೂಡ ಅದನ್ನೇ ಹೇಳುತ್ತಾ ಕಣ್ಣೀರಿಡುತ್ತಿದ್ದಾರೆ. ಕೊನೆಗೊಮ್ಮೆ ಅವರ ಮುಖ ನೋಡಿ ಬಿಡುತ್ತೇನೆಂದು ಜನ ಕಾಯುತ್ತಿದ್ದಾರೆ.[ಕರಳು ಬೇನೆ ಕಾಯಿಲೆಗೆ ಬಲಿಯಾದ ರಾಕೇಶ್ ಸಿದ್ದರಾಮಯ್ಯ]

ರಾಕೇಶ್ ಸಿದ್ದರಾಮಯ್ಯ ಮೃತದೇಹವನ್ನು ಬೆಲ್ಜಿಯಂನಿಂದ ಎಮರೈಟ್ಸ್ ಏರ್‌ಲೈನ್ಸ್‌ ವಿಮಾನದಲ್ಲಿ ತೆಗೆದುಕೊಂಡು ಬರಲಾಗುತ್ತಿದೆ. ಸೋಮವಾರ ಬೆಳಗ್ಗೆ 9.05ಕ್ಕೆ ವಿಮಾನ ಬೆಂಗಳೂರು ತಲುಪಲಿದೆ. ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದಲ್ಲಿ ಮೈಸೂರಿಗೆ ಮೃತದೇಹವನ್ನು ತೆಗೆದುಕೊಂಡು ಹೋಗಲಾಗುತ್ತದೆ.

ರಾಕೇಶ್ ಸಿದ್ದರಾಮಯ್ಯ ಅವರ ಪಾರ್ಥೀವ ಶರೀರವನ್ನು ಸಾರ್ವಜನಿಕರ ಅಂತಿಮ ದರ್ಶನಕ್ಕಾಗಿ ಸೋಮವಾರ ಬೆಳಗ್ಗೆ ನಗರದ ದಸರಾ ವಸ್ತುಪ್ರದರ್ಶನ ಮೈದಾನದಲ್ಲಿ ಇಡಲಾಗುತ್ತದೆ. ಈಗಾಗಲೇ ನಗರದ ವಸ್ತು ಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ವ್ಯವಸ್ಥೆ ಮಾಡಲಾಗಿದೆ. ಆ ಬಳಿಕ ಹೆಚ್.ಡಿ.ಕೋಟೆ ರಸ್ತೆಯಲ್ಲಿರುವ ಟಿ.ಕಾಟೂರುನಲ್ಲಿರುವ ಫಾರಂ ಹೌಸ್‌ನಲ್ಲಿ ಅಂತ್ಯಕ್ರಿಯೆ ನಡೆಸಲಾಗುತ್ತದೆ.

mysuru

ಫಾರಂ ಹೌಸ್‍ನಲ್ಲಿ ನಡೆಯಲಿರುವ ಅಂತ್ಯ ಸಂಸ್ಕಾರದಲ್ಲಿ ಕೇವಲ ಕುಟುಂಬದ ಸದಸ್ಯರು ಮಾತ್ರ ಭಾಗವಹಿಸಲಿದ್ದಾರೆ. ಮಾಧ್ಯಮದವರು ಸೇರಿದಂತೆ ಸಾರ್ವಜನಿಕರಿಗೆ ಅಂತ್ಯ ಸಂಸ್ಕಾರದ ಸ್ಥಳಕ್ಕೆ ಪ್ರವೇಶ ನಿರ್ಬಂಧಿಸಲು ಕುಟುಂಬದವರು ತೀರ್ಮಾನಿಸಿದ್ದಾರೆ ಎಂದು ತಿಳಿದುಬಂದಿದೆ.

ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಸಿ.ಮಹದೇವಪ್ಪ ಅವರೇ ಮುಂದೆ ನಿಂತು ಎಲ್ಲ ವ್ಯವಸ್ಥೆಗಳನ್ನು ಮಾಡುತ್ತಿದ್ದಾರೆ. ಎಲ್ಲರೂ ಸೋಮವಾರ ಬರಲಿರುವ ಪಾರ್ಥೀವ ಶರೀರಕ್ಕಾಗಿ ಕಾಯುತ್ತಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Thousands paid homage to Rakesh (39), elder son of Siddaramaiah - chief minister of Karnataka, on 1st August in Mysuru. Rakesh died due to multi-organ failure on Saturday at Antwerp University Hospital in Brussels. He was laid to rest in T Katur at his farm house.
Please Wait while comments are loading...