ಮೈಸೂರು : ರಾಜು ಹತ್ಯೆ, ಬಿಜೆಪಿಯವರು ರಾಜಕೀಯ ಮಾಡುತ್ತಿದ್ದಾರೆ

Posted By:
Subscribe to Oneindia Kannada

ಮೈಸೂರು, ಮಾರ್ಚ್ 18 : ಬಿಜೆಪಿ ಕಾರ್ಯಕರ್ತ ರಾಜು ಅವರ ಹತ್ಯೆ ಕುರಿತು ಸಂಸದ ಪ್ರತಾಪ್ ಸಿಂಹ ಮತ್ತು ಮಾಜಿ ಸಚಿವ ಎಸ್.ಎ.ರಾಮದಾಸ್ ನೀಡಿರುವ ಹೇಳಿಕೆಯನ್ನು ಪಾಲಿಕೆ ಸದಸ್ಯ ರಾಘುರಾಜೇ ಅರಸ್ ಖಂಡಿಸಿದ್ದಾರೆ. ಉಭಯ ನಾಯಕರು ಹೇಳಿಕೆಯನ್ನು ವಾಪಸ್ ಪಡೆಯಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಮತ್ತು ಮಾಜಿ ಸಚಿವ ಎಸ್.ಎ.ರಾಮದಾಸ್ ಅವರು, ರಾಜು ಅವರ ಹತ್ಯೆ ಪ್ರಕರಣದ ವಿಚಾರವನ್ನು ರಾಜಕೀಯಗೊಳಿಸಿ ಅಣ್ಣ-ತಮ್ಮಂದಿರಂತೆ ಸಹಬಾಳ್ವೆ ನಡೆಸುತ್ತಿರುವ ಹಿಂದೂ ಮುಸ್ಲಿಂಮರದಲ್ಲಿ ಒಡಕು ಉಂಟು ಮಾಡಲು ಪ್ರಯತ್ನ ನಡೆಸುತ್ತಿದ್ದಾರೆ ಎಂದು ರಾಘುರಾಜೇ ಅರಸ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. [ಮೈಸೂರು : ರಾಜು ಕೊಲೆ ಪ್ರಕರಣದ ತನಿಖೆ ಸಿಸಿಬಿಗೆ]

raju

ರಾಜು ಹತ್ಯೆ ಬಗ್ಗೆ ವಿಷಾದ ವ್ಯಕ್ತಪಡಿಸಿರುವ ಅವರು, ಹತ್ಯೆಯನ್ನು ನಾವು ಖಂಡಿಸುತ್ತೇವೆ. ಅವರ ಸಾವಿನ ದುಖಃ ಭರಿಸುವ ಶಕ್ತಿಯನ್ನು ಕುಟುಂಬಕ್ಕೆ ನೀಡುವಂತೆ ದೇವರಲ್ಲಿ ಪ್ರಾರ್ಥಿಸುತ್ತೇವೆ. ಸಂಸದರು ಮತ್ತು ಮಾಜಿ ಸಚಿವರು ಈ ವಿಚಾರದಲ್ಲಿ ರಾಜಕೀಯ ಲಾಭ ಪಡೆಯಲು ಉದ್ದೇಶಿಸಿರುವುದನ್ನು ಖಂಡಿಸುತ್ತೇವೆ ಎಂದು ಹೇಳಿದ್ದಾರೆ. [ಮೈಸೂರಲ್ಲಿ ರಾಜು ಹತ್ಯೆ : ಯಾರು, ಏನು ಹೇಳಿದರು?]

ಶಾಂತಿಯ ನಗರದಲ್ಲಿ ಮೈಸೂರಿನಲ್ಲಿ ಕೋಮು ದ್ವೇಷ ಹರಡಲು ಪ್ರಯತ್ನ ನಡೆಸಲಾಗುತ್ತಿದೆ. ಅರಮನೆ ನಗರಿ ಮೈಸೂರಲ್ಲಿ ತಾಲಿಬಾನ್‌ಗೆ ಹೋಲಿಕೆ ಮಾಡಿರುವುದು ಖಂಡನೀಯ. ಪ್ರಚೋದನಾಕಾರಿ ಭಾಷಣಗಳ ಮೂಲಕ ಹಿಂದೂ ಮುಸ್ಲಿಂಮರಲ್ಲಿ ಒಡಕು ಉಂಟು ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ನಗರದಲ್ಲಿ ಶಾಂತಿ ಕದಡುವ ಪ್ರಯತ್ನ ಮಾಡಬಾರದು ಎಂದು ತಿಳಿಸಿದ್ದಾರೆ.[ಕರ್ನಾಟಕದಲ್ಲಿ ಹಿಂದೂಗಳು ಸುರಕ್ಷಿತವಾಗಿಲ್ಲ: ಪ್ರತಾಪ್ ಸಿಂಹ]

ಗೂಂಡಾ ಎಂದು ಹೇಳಿಲ್ಲ : ಶಾಸಕರಾದ ತನ್ವೀರ್ ಸೇಠ್ ಅವರು ರಾಜುವನ್ನು ಗೂಂಡಾ ಎಂದು ಹೇಳಿಲ್ಲ. ರಾಜು ಮತ್ತು ತನ್ವೀರ್ ಸೇಠ್ ಅವರ ನಡುವೆ ಉತ್ತಮ ಒಡನಾಟವಿತ್ತು. ಆದರೂ, ಸಂಸದರು ಮತ್ತು ಮಾಜಿ ಸಚಿವರು ಸುಳ್ಳು ಹೇಳಿಕೆ ನೀಡಿದ್ದಾರೆ ಎಂದು ರಾಘುರಾಜೇ ಅರಸ್ ದೂರಿದ್ದಾರೆ.

ಸಂಸದ ಪ್ರತಾಪ್ ಸಿಂಹ ಮತ್ತು ಎಸ್.ಎ.ರಾಮದಾಸ್ ಅವರ ಹೇಳಿಕೆಯನ್ನು ಖಂಡಿಸುತ್ತೇವೆ.ಉಭಯ ನಾಯಕರು ತಮ್ಮ ಹೇಳಿಕೆಯನ್ನು ವಾಪಸ್ ಪಡೆಯಬೇಕು ಎಂದು ರಾಘುರಾಜೇ ಅರಸ್ ಆಗ್ರಹಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Mysore City Corporation corporator Raghu Raje Urs condemned the statement of Mysuru-Kodagu MP Pratap Simha and Former minister S.A.Ramadas in the murder case of Vishwa Hindu Parishad (VHP), BJP worker Raju. Raju murdered in Udaygiri police station limits on Sunday, March 13, 2016.
Please Wait while comments are loading...