'ಹಿಂದೂಗಳೇ ಅಬೀದ್ ಪಾಷಾ ಟಾರ್ಗೆಟ್‌ ಆಗಿದ್ದರು'

Posted By:
Subscribe to Oneindia Kannada

ಮೈಸೂರು, ಆಗಸ್ಟ್ 20 : ಮೈಸೂರು ಬಿಜೆಪಿ ಕಾರ್ಯಕರ್ತ ರಾಜು ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಅಬೀದ್ ಪಾಷಾ ಹಿಂದೂಗಳನ್ನು ಟಾರ್ಗೆಟ್ ಮಾಡಿದ್ದ. ಏಳು ಕೊಲೆ ಪ್ರಕರಣದಲ್ಲಿ ಆತ ಭಾಗಿಯಾಗಿದ್ದು, ಕೊಲೆಯಾದವರೆಲ್ಲರೂ ಹಿಂದೂಪರ ಸಂಘಟನೆಗೆ ಸೇರಿದವರಾಗಿದ್ದಾರೆ.

ಶನಿವಾರ ಮೈಸೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಪೊಲೀಸ್ ಆಯುಕ್ತ ಬಿ.ದಯಾನಂದ ಅವರು ರಾಜು ಹತ್ಯೆ ಪ್ರಕರಣದ ಬಗ್ಗೆ ವಿವರ ನೀಡಿದರು. 'ಪ್ರಕರಣದ ತನಿಖೆ ನಡೆಸುತ್ತಿರುವ ಸಿಸಿಬಿ ಪೊಲೀಸರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಅಬೀದ್ ಪಾಷಾ ಪ್ರಮುಖ ಆರೋಪಿಯಾಗಿದ್ದಾನೆ' ಎಂದು ಹೇಳಿದರು.[ಮೈಸೂರು : ಬಿಜೆಪಿ ಕಾರ್ಯಕರ್ತ ರಾಜು ಹತ್ಯೆ ರಹಸ್ಯ ಬಯಲು]

B.Dayanand

'ಆಗಸ್ಟ್ 7ರಂದು ರಾಜು ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಅಬೀದ್ ಪಾಷಾ ಬಂಧಿಸಲಾಗಿತ್ತು. ಮೈಸೂರಿನಲ್ಲಿ ನಡೆದ 2 ಕೊಲೆ ಪ್ರಕರಣ ಸೇರಿದಂತೆ ಒಟ್ಟು ಏಳು ಪ್ರಕರಣದಲ್ಲಿ ಆತ ಭಾಗಿಯಾಗಿದ್ದ ಎಂದರು. ಸಿಸಿಬಿ ಪೊಲೀಸರು ಅಬೀದ್ ಸಹಚರರಾದ ಅಯೂಬ್ ಖಾನ್ (27), ಮಹಮದ್ ಹನೀಫ್ (36), ಹಮೀದ್ ಖಾನ್ (27) ಎಂಬುವವರನ್ನು ಬಂಧಿಸಲಾಗಿದೆ' ಎಂದರು.[ಮೈಸೂರಲ್ಲಿ ರಾಜು ಹತ್ಯೆ : ಯಾರು, ಏನು ಹೇಳಿದರು?]

'ಅಬೀದ್ ಪಾಷಾ ಸಹಚರರ ಜೊತೆ ಸೇರಿ ಕೊಲೆಗಳನ್ನು ಮಾಡುತ್ತಿದ್ದ. ಕೋಮುಭಾವನೆಯಿಂದ ಹಿಂದೂಗಳನ್ನು ಟಾರ್ಗೆಟ್ ಮಾಡುತ್ತಿದ್ದ. ಅಬೀದ್ 7 ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದು ಹತ್ಯೆಯಾದವರೆಲ್ಲ ಹಿಂದೂ ಸಂಘಟನೆಯವರು' ಎಂದು ದಯಾನಂದ ಅವರು ಹೇಳಿದರು.

ಅಬೀದ್ ಬಂಧನ : ಮಾರ್ಚ್ 13ರಂದು ನಡೆದ ರಾಜ್ಯ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಬೀದ್ ಬಂಧಿಸಿದ್ದ ಪೊಲೀಸರು ವಿಚಾರಣೆ ನಡೆಸಿದಾಗ ಉಳಿದ ಕೊಲೆಯ ವಿವರಗಳು ಬಹಿರಂಗವಾಗಿವೆ. ಅಪಹರಣ, ಕೊಲೆ ಪ್ರಕರಣದಲ್ಲಿ ಸಾಕ್ಷಿಯಾಗಿದ್ದ ರಾಜು ವಿರುದ್ಧ ಅಬೀದ್‌ಗೆ ದ್ವೇಷವಿತ್ತು. ಉದಯಗಿರಿಯ ಮಸೀದಿಯಲ್ಲಿ ಹಂದಿ ಮಾಂಸ ಹಾಕಿದ ಘಟನೆಯಲ್ಲಿಯೂ ರಾಜು ಪಾತ್ರವಿದೆ ಎಂದು ಅಬೀದ್ ರಾಜು ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದ.

ಆದ್ದರಿಂದ, ದ್ವೇಷದ ಹಿನ್ನಲೆಯಲ್ಲಿ ಅಬೀದ್ ಸಹಚರರ ಜೊತೆ ಸೇರಿ ರಾಜು ಹತ್ಯೆ ಸಂಚು ರೂಪಿಸಿದ್ದರು. ಅದರಂತೆ 2016ರ ಮಾರ್ಚ್ 13ರಂದು ರಾಜು ಅವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Mysuru police commissioner B.Dayanand said that, BJP worker Raju murder case main accused Abid Pasha (34) targeted hindu leaders and he involved in 7 murder case.
Please Wait while comments are loading...