ಮೈಸೂರಿನಲ್ಲಿ ಮಂಡ್ಯರಮೇಶ್ ರಿಂದ ಬೇಸಿಗೆ ಶಿಬಿರ

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮೈಸೂರು, ಮಾರ್ಚ್ 20: ನಟನರಂಗ ಶಾಲೆಯು ಕಳೆದ ಅನೇಕ ವರ್ಷಗಳಿಂದ ರಂಗಭೂಮಿಯಲ್ಲಿ ನಿರಂತರ ಕ್ರಿಯಾಶೀಲವಾಗಿದ್ದು ರಂಗಭೂಮಿಯ ಅಧ್ಯಯನ, ಪ್ರಾತ್ಯಕ್ಷಿಕೆ, ಪ್ರಯೋಗ, ಪ್ರದರ್ಶನಗಳ ಮೂಲಕ ಶ್ರೇಷ್ಠತೆಯನ್ನು ಸಾಧಿಸುವುದರತ್ತ ಸತತವಾಗಿ ಪ್ರಯತ್ನ ಶೀಲವಾಗಿದೆ. ತನ್ನಚಟುವಟಿಕೆಯ ಭಾಗವಾಗಿ 15ನೇ ವರ್ಷದರಜಾ-ಮಜಾ' ಮಕ್ಕಳ ಬೇಸಿಗೆ ಶಿಬಿರವನ್ನು ಏಪ್ರಿಲ್ 12ರಿಂದ ಮೇ 07ರ ವರೆಗೆ ಸರಸ್ವತಿಪುರಂನಲ್ಲಿರುವ ಜ್ಞಾನೋದಯ ಪದವಿ ಪೂರ್ವಕಾಲೇಜು ಮತ್ತು ವಿಜಯ ವಿಠ್ಠಲ ವಿದ್ಯಾಸಂಸ್ಥೆಯ ಆವರಣದಲ್ಲಿ ಆಯೋಜಿಸಿದೆ.

ಈ ಶಿಬಿರದಲ್ಲಿ ಸತತ 25 ದಿನಗಳ ಕಾಲ ನಾಟಕ ಕಲೆಯನ್ನು ಕೇಂದ್ರವಾಗಿರಿಸಿಕೊಂಡು ಕರ್ನಾಟಕದ ದೇಸಿ ಜಾನಪದ ಕಲಾ ಪ್ರಕಾರಗಳು, ಹಾಡುಗಾರಿಕೆ, ಕರಕುಶಲ ಕಲೆ, ಸಂವಹನ ಕೌಶಲ, ಅಭಿನಯ, ಸಾಧಕರೊಂದಿಗೆ ಸಂವಾದ, ಕಂಪೆನಿ ಮತ್ತು ಆಧುನಿಕ ನಾಟಕಗಳ ಕುರಿತು ಮಕ್ಕಳಿಗೆ ಸಂಪೂರ್ಣ ಮನೋರಂಜನೆಯೊಂದಿಗೆ ವಿಶಿಷ್ಟ ಪ್ರಾತ್ಯಕ್ಷಿಕೆಗಳ ಮೂಲಕ ರಂಗಭೂಮಿಯಲ್ಲಿ ಪ್ರಖ್ಯಾತರಾದ ಸಾಧಕರನೇಕರು ಮಕ್ಕಳನ್ನು ತರಬೇತಿಗೊಳಿಸಲಿದ್ದಾರೆ.[ನಾಮಪತ್ರ ಸಲ್ಲಿಕೆ: ಚಿತ್ರಗಳಲ್ಲಿ ಉಪಚುನಾವಣೆ ರಂಗು]

Raja Maja Summer camp in Mysuru

ಏಪ್ರಿಲ್ 1 ರಂದು ಬೆಳಿಗ್ಗೆ 9.30ರಿಂದ ಸಂಜೆ 06ರ ವರೆಗೆ ರಾಮಕೃಷ್ಣ ನಗರದಲ್ಲಿರುವ ನಟನರಂಗಶಾಲೆಯಲ್ಲಿ 'ರಜಾ ಮಜಾ'ದ ಅರ್ಜಿ ವಿತರಣೆ ಮತ್ತು ಪ್ರವೇಶ ಪ್ರಕ್ರಿಯೆ ನಡೆಯಲಿದ್ದು, ತಡವಾಗಿ ಬಂದವರಿಗೆ ಯಾವುದೇ ಕಾರಣಕ್ಕೂ ಅವಕಾಶವಿರುವುದಿಲ್ಲ. ಕಡ್ಡಾಯವಾಗಿ 8 ವರ್ಷದಿಂದ 14 ವರ್ಷದ ಮಕ್ಕಳಿಗೆ ಮಾತ್ರ ಪ್ರವೇಶವಿದ್ದು, ಏಪ್ರಿಲ್ 1 ರಂದು ಪ್ರವೇಶಾತಿಗೆ ಬರುವಾಗ ಪೋಷಕರು ಮಗುವಿನ ಭಾವಚಿತ್ರದೊಂದಿಗೆ ಜನನ ಪ್ರಮಾಣ ಪತ್ರಅಥವಾ ಮಾರ್ಕ್ಸಕಾರ್ಡ್ ನ ಪ್ರತಿಯನ್ನು ತರತಕ್ಕದ್ದು. ಮೊದಲು ಬಂದವರಿಗೆ ಆದ್ಯತೆ ನೀಡಲಾಗಿದ್ದು, ಸೀಮಿತ ಅವಕಾಶವಿದೆ.[ನಾಮಪತ್ರ ಸಲ್ಲಿಕೆ ವೇಳೆ ಮಾತಿನ ಚಕಮಕಿ-ಲಘುಲಾಠಿ ಪ್ರಹಾರ]

ಹೆಚ್ಚಿನ ವಿವರಗಳಿಗೆ ಮೊ.ಸಂ. 9945555570, 9480468327,9945518452, 9845595505, ಸಂಪರ್ಕಿಸಬಹುದು

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Summer camp will be started from April 12th to May 7th in Natanaranga school Mysuru. Kannada Actor Mandya Ramesh is organising the summer camp.
Please Wait while comments are loading...