ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಷ್ಟ್ರಮಟ್ಟದಲ್ಲಿ ರೈತಕ್ರಾಂತಿ ಯಾತ್ರೆ ನಡೆಸಲು ರೈತ ಸಂಘ, ಹಸಿರು ಸೇನೆ ನಿರ್ಧಾರ

|
Google Oneindia Kannada News

ಮೈಸೂರು, ಸೆಪ್ಟೆಂಬರ್ 17 : ರಾಷ್ಟ್ರೀಕೃತ ಬ್ಯಾಂಕ್ ಗಳ ಸಾಲ ಮನ್ನಾ, ಉದ್ಯೋಗ, ಶಿಕ್ಷಣ ಖಾತರಿ ಯೋಜನೆ ಜಾರಿ ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಸೆ.23ರಿಂದ ಅ.2ರವರೆಗೆ ರಾಷ್ಟ್ರಮಟ್ಟದಲ್ಲಿ ರೈತಕ್ರಾಂತಿ ಯಾತ್ರೆ ನಡೆಸಲು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ನಿರ್ಧರಿಸಿವೆ.

ರಾಜ್ಯದ 16 ಜಿಲ್ಲೆಗಳಲ್ಲಿ ಕೈಕೊಡಲಿದೆ ಹಿಂಗಾರು, ಬೆಳೆಗೆ ಭೀತಿ!ರಾಜ್ಯದ 16 ಜಿಲ್ಲೆಗಳಲ್ಲಿ ಕೈಕೊಡಲಿದೆ ಹಿಂಗಾರು, ಬೆಳೆಗೆ ಭೀತಿ!

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೈತ ಸಂಘದ ರಾಜ್ಯಾಧ್ಯಕ್ಷ ಕೆ.ಟಿ.ಗಂಗಾಧರ್ ಅವರು, ರೈತರ ಬೆಳೆಗಳಿಗೆ ಮಿನಿಮಮ್ ಸಪೋರ್ಟ್ ಪ್ರೈಸ್(ಕನಿಷ್ಠ ಬೆಂಬಲ ಬೆಲೆ), ಸಿಟುಸಿ ಸೂತ ಜಾರಿ, ಮುಖ್ಯವಾಗಿ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿನ ರೈತರ ಸಾಲ ಮನ್ನಾ ಮಾಡುವಂತೆ ಆಗ್ರಹಿಸಿ ಸೆ.23ರಿಂದ ಅ.2ರವರೆಗೆ ಬೃಹತ್ ರೈತಕ್ರಾಂತಿ ಯಾತ್ರೆ ಹಮ್ಮಿಕೊಳ್ಳಲಾಗಿದೆ.

 ಲಾಭದ ನಿರೀಕ್ಷೆಯಲ್ಲಿ ಸಾಲಗಾರನಾಗುತ್ತಿರುವ ತಂಬಾಕು ಬೆಳೆಗಾರ ಲಾಭದ ನಿರೀಕ್ಷೆಯಲ್ಲಿ ಸಾಲಗಾರನಾಗುತ್ತಿರುವ ತಂಬಾಕು ಬೆಳೆಗಾರ

ಕರ್ನಾಟಕ, ಹರಿಯಾಣ, ಕೇರಳ, ತಮಿಳುನಾಡು, ಆಂಧ್ರ ಪ್ರದೇಶದ ವಿವಿಧ ರೈತ ಸಂಘಟನೆಗಳೆಲ್ಲವೂ ಒಟ್ಟಾಗಿ ನಡೆಸುತ್ತಿರುವ ಈ ಯಾತ್ರೆ ಹರಿದ್ವಾರದಿಂದ ದಿಲ್ಲಿಯ ಕಿಸಾನ್ ಘಾಟ್ ವರೆಗೂ ನಡೆಯಲಿದೆ ಎಂದು ಹೇಳಿದರು.

Raitha Kranti Yatra will held from September 23 to April 2

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ತಪ್ಪು ನೀತಿಯಿಂದಾಗಿ ರೈತರು ಸಾಲಕ್ಕೆ ಸಿಲುಕಬೇಕಿದೆಯೇ ವಿನಃ, ರೈತರು ಯಾವುದೇ ಕಾರಣಕ್ಕೂ ಸಾಲಗಾರರಾಗುವುದಿಲ್ಲ. ಈಗ ಜಾರಿಗೊಳಿಸಿರುವ ಬೆಳೆವಿಮೆ ಪದ್ಧತಿ ಖಾಸಗಿ ನಿರ್ವಹಣೆಯಲ್ಲಿರುವುದರಿಂದ ಪರಿಹಾರ ದೊರೆಯುವುದು ವಿಳಂಬವಾಗುತ್ತಿದೆ. ಸರ್ಕಾರವೇ ಇದರ ಹೊಣೆ ಹೊರಬೇಕು ಎಂದರು.

 ಜೆಡಿಎಸ್ ಗೆ ತಲೆ ಬಿಸಿ ತಂದ ಮಂಡ್ಯ ರೈತರ ಪ್ರತಿಭಟನೆಗಳು ಜೆಡಿಎಸ್ ಗೆ ತಲೆ ಬಿಸಿ ತಂದ ಮಂಡ್ಯ ರೈತರ ಪ್ರತಿಭಟನೆಗಳು

ರಾಜ್ಯ ಸರ್ಕಾರ ಸಾಲ ಮನ್ನಾ ಘೋಷಿಸಿದ್ದರೂ ಬ್ಯಾಂಕ್ ಗಳು ರೈತರಿಗೆ ನೋಟಿಸ್ ನೀಡುತ್ತಿವೆ. ಪರಿಣಾಮ ಮಂಡ್ಯದಲ್ಲಿಯೇ ಕಳೆದ 3 ದಿನಗಳಿಂದ ಮೂವರು ರೈತರು ಸಾವನ್ನಪ್ಪಿದ್ದಾರೆ. ರೈತರಿಗೆ ನೋಟಿಸ್ ನೀಡದಂತೆ ರಾಷ್ಟ್ರೀಕೃತ ಬ್ಯಾಂಕ್ ಗಳಿಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕಟ್ಟಪ್ಪಣೆ ಮಾಡಬೇಕಿದೆ.

ಆ ಮೂಲಕ ತಮ್ಮದು ಗಾಳಿ ಮಾತಲ್ಲ ಎಂಬುದನ್ನು ತೋರಿಸಿಕೊಡಬೇಕಿದೆ ಎಂದು ಒತ್ತಾಯಿಸಿದರು.

English summary
Raitha Kranti Yatra will held from September 23 to April 2 demanding a loan waiver of farmers in nationalized banks.Karnataka State Farmer Association and Hasiru Sene have decided to conduct a yatra.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X