ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು: ಚಾಮುಂಡಿ ಬೆಟ್ಟ ಮೆಟ್ಟಿಲ ಮೇಲೆ ತೊರೆ; ಒಡೆದು ಹೋದ ತಾವರೆಕೆರೆ

By Yashaswini
|
Google Oneindia Kannada News

ಮೈಸೂರು, ಸೆಪ್ಟೆಂಬರ್ 27: ಮೈಸೂರಿನಲ್ಲಿ ಸೆ. 26ರ ರಾತ್ರಿಯಿಂದ ಸುರಿದ ಧಾರಾಕಾರ ಮಳೆಯಿಂದಾಗಿ, ನಗರದ ಬಹುತೇಕ ತಗ್ಗು ಪ್ರದೇಶಗಳು ಜಲಾವೃತವಾಗಿವೆ. ತಾವರೆಕೆರೆ ಒಡೆದು ಹೋಗಿ ಪಕ್ಕದಲ್ಲಿರುವ ಜೆಸಿ ನಗರಕ್ಕೆ ನೀರು ನುಗ್ಗಿದೆ.

ಬೆಂಗಳೂರಲ್ಲಿ ಮಳೆ: ಎಲೆಲ್ಲಿ, ಎಷ್ಟೆಷ್ಟು ವರ್ಷಧಾರೆ?ಬೆಂಗಳೂರಲ್ಲಿ ಮಳೆ: ಎಲೆಲ್ಲಿ, ಎಷ್ಟೆಷ್ಟು ವರ್ಷಧಾರೆ?

ಮಳೆಯ ಪರಿಣಾಮವಾಗಿ, ಚಾಮುಂಡಿ ಬೆಟ್ಟದಲ್ಲಿ ಸಣ್ಣ ಪುಟ್ಟ ತೊರೆಗಳು ಹರಿಯುತ್ತಿದ್ದು ಚಾಮುಂಡೇಶ್ವರಿ ಸನ್ನಿಧಾನಕ್ಕೆ ಹೋಗುವ ಮೆಟ್ಟಿಲುಗಳ ಮೇಲೆ ನೀರು ಹರಿಯುತ್ತಿದೆ. ಸಣ್ಣ ಝರಿಯಂತೆ ನೀರು ಹರಿಯುತ್ತಿದ್ದು ಮೆಟ್ಟಿಲಗಳನ್ನು ಸರಾಗವಾಗಿ ಹತ್ತಿ ಹೋಗದ ಪರಿಸ್ಥಿತಿ ನಿರ್ಮಾಣವಾಗಿದೆ.

Rain Havoc in Mysuru; Tavarekere lake breaks-up

ಚಾಮುಂಡಿ ಬೆಟ್ಟದ ಮೇಲ್ಭಾಗದಿಂದ ಹರಿದುಬಂದ ಭಾರೀ ಪ್ರಮಾಣದ ನೀರು ಬೆಟ್ಟದ ತಪ್ಪಲಿನಲ್ಲಿರುವ ತಾವರೆಕೆರೆ ತಲುಪಿ ಭರ್ತಿಯಾದ ಪರಿಣಾಮ ಕೆರೆ ಕೋಡಿ ಬಿದ್ದ ನೀರು ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಜೆ.ಸಿ ನಗರ ಬಡಾವಣೆಗೆ ಹರಿದು ಬರುತ್ತಿರುವುದರಿಂದ ಈ ಪ್ರದೇಶ ಜಲಾವೃತವಾಗಿದೆ. ಇಲ್ಲಿನ ರಸ್ತೆಗಳಲ್ಲಿ ನೀರು ಉಕ್ಕಿ ಹರಿಯುತ್ತಿದೆ.

ಮೈಸೂರು, ತುಮಕೂರುಗಳಲ್ಲೂ ಮಳೆಯ ಅವಾಂತರಮೈಸೂರು, ತುಮಕೂರುಗಳಲ್ಲೂ ಮಳೆಯ ಅವಾಂತರ

English summary
Over-night rain in Mysuru disturbes normal life. Due to rain, streams of water are flowing from Chamundi hills which lead to overflow and breaking of Tavarekere which is at the base of Chamundi hills. It lead to the floods in nearby JC Nagar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X