ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆರ್.ಕೆ. ಲಕ್ಷ್ಮಣರ ವ್ಯಂಗ್ಯಚಿತ್ರ ಕೌಶಲ್ಯ ಅರಳಿದ್ದು ಮೈಸೂರಲ್ಲಿ

By Kiran B Hegde
|
Google Oneindia Kannada News

ಮೈಸೂರು, ಜ. 27: ಮಹಾರಾಷ್ಟ್ರದ ಪುಣೆಯಲ್ಲಿ ಸೋಮವಾರ ಮೃತಪಟ್ಟ ಖ್ಯಾತ ವ್ಯಂಗ್ಯಚಿತ್ರಕಾರ ಆರ್.ಕೆ. ಲಕ್ಷ್ಮಣ (94) ತವರೂರು ಮೈಸೂರು. ಅವರು ಹುಟ್ಟಿದ್ದು, ಬೆಳೆದಿದ್ದು ಹಾಗೂ ವಿದ್ಯಾರ್ಜನೆ ಮಾಡಿದ್ದು ಮೈಸೂರಿನಲ್ಲಿಯೇ.

ಮೈಸೂರು ಮಹಾರಾಜ ಕಾಲೇಜಿನಲ್ಲಿಯೇ ಡಿಗ್ರಿಯನ್ನೂ ಪಡೆದರು. ಇಲ್ಲಿಯೇ ಅವರ ವ್ಯಂಗ್ಯಚಿತ್ರ ಕೌಶಲ್ಯ ಅರಳಲು ಆರಂಭವಾಗಿತ್ತು. ಅವರ ಸಹೋದರ ಖ್ಯಾತ ಲೇಖಕ ಆರ್.ಕೆ. ನಾರಾಯಣ್ ಸಹೋದರನ ಪ್ರಯತ್ನಕ್ಕೆ ಪ್ರೋತ್ಸಾಹ ನೀಡಿದರು. [ವ್ಯಂಗ್ಯಚಿತ್ರಕಾರ ಆರ್.ಕೆ. ಲಕ್ಷ್ಮಣನ್ ವಿಧಿವಶ]

laxman

ಆದರೆ, ಶೀಘ್ರ ಮೈಸೂರು ತೊರೆದ ಆರ್.ಕೆ. ಲಕ್ಷ್ಮಣ ಆಗಾಗ ಭೇಟಿ ನೀಡುವುದನ್ನು ಎಂದಿಗೂ ಮರೆಯುತ್ತಿರಲಿಲ್ಲ. ಖ್ಯಾತ ಛಾಯಾಗ್ರಾಹಕ ದಿ. ಟಿ.ಎಸ್. ಸತ್ಯನ್ ಹಾಗೂ ಆರ್.ಕೆ. ಲಕ್ಷ್ಮಣ ಉತ್ತಮ ಸ್ನೇಹಿತರಾಗಿದ್ದರು. ಅಚ್ಚರಿಯ ವಿಷಯವೆಂದರೆ ಆರ್.ಕೆ. ಲಕ್ಷ್ಮಣ್ ಮೈಸೂರಿಗೆ ಕೊನೆಯ ಭೇಟಿ ನೀಡಿದ್ದು 2009ರ ನವೆಂಬರ್‌ನಲ್ಲಿ. 2009ರ ಡಿಸೆಂಬರ್‌ನಲ್ಲಿ ಟಿ.ಎಸ್. ಸತ್ಯನ್ ದೈವಾಧೀನರಾದರು. [ಸರ್ಕಾರಿ ಗೌರವದೊಂದಿಗೆ ಆರ್.ಕೆ. ಲಕ್ಷ್ಮಣ ಅಂತ್ಯಕ್ರಿಯೆ]

English summary
Cartoonist R.K. Laxman (94) was born and brought up in Mysuru and completed his education in the city. His last visit to Mysuru was in November 2009 by when he was of frail health.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X