ಶ್ರೀಕಂಠದತ್ತ ಒಡೆಯರ್ ಪುಣ್ಯ ಸ್ಮರಣೆ ಆಚರಣೆ

Posted By:
Subscribe to Oneindia Kannada

ಮೈಸೂರು, ಡಿಸೆಂಬರ್ 10: ಮೈಸೂರಿನ ರಾಜಮನೆತನದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ 3ನೇ ಪುಣ್ಯಸ್ಮರಣೆಯನ್ನು ಶನಿವಾರ ಆಚರಿಸಲಾಯಿತು.

ಡಿಸೆಂಬರ್ 10, 2013ರಂದು ಇಹಲೋಕ ತ್ಯಜಿಸಿದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಮೂರನೇ ಪುಣ್ಯಸ್ಮರಣೆಯನ್ನು ಡಿಸೆಂಬರ್ 10ರಂದು ಆಚರಿಸಲಾಗಿದ್ದು, ಮಧುವನದಲ್ಲಿ ಅವರ ಸ್ಮಾರಕಕ್ಕೆ ಪೂಜೆ-ಪುನಸ್ಕಾರಗಳನ್ನು ರಾಜಮನೆತನದ ಪುರೋಹಿತರು ನೆರವೇರಿಸಿದರು. ಇನ್ನು ಈ ಕಾರ್ಯಕ್ರಮಕ್ಕೆ ಒಡೆಯರ್ ಬಂಧುಗಳು, ಸ್ನೇಹಿತರು, ಆಪ್ತರು ಕೂಡ ಭಾಗವಹಿಸಿದ್ದರು.[ಮೈಸೂರಿನಲ್ಲಿ ಒಡೆಯರ್ ಪುಣ್ಯಾರಾಧನೆ]

Punya smarane celebration Srikantadatta Wodeyar in mysore

ಇನ್ನು ಸಂಪ್ರದಾಯದಂತೆ ರಾಣಿ ಪ್ರಮೋದಾದೇವಿ ಹಾಗೂ ಯದುವೀರ್ ಪಾಲ್ಗೊಂಡಿರಲಿಲ್ಲ. ಇದೇ ವೇಳೆ ಅರಮನೆ ಆಡಳಿತ ಮಂಡಳಿ ವತಿಯಿಂದ ಅನ್ನಸಂತರ್ಪಣೆಯನ್ನು ನಡೆಸಲಾಯಿತು.

3000ಕ್ಕೂ ಅಧಿಕ ಜನರಿಗೆ ಅನ್ನದಾನ ಮಾಡಲಾಯಿತು. ವಿವಿಧ ಸಂಘ ಸಂಸ್ಥೆಗಳ ವತಿಯಿಂದಲೂ ಶ್ರೀಕಂಠದತ್ತ ಒಡೆಯರ್ ಅವರ ಪುಣ್ಯಸ್ಮರಣೆಯನ್ನು ಆಚರಿಸಲಾಯಿತು.[ಮೈಸೂರು: ಫೆ. 23 ರಂದು ಯದುರಾಜ್ ಗೆ ಪಟ್ಟಾಭಿಷೇಕ]

Punya smarane celebration Srikantadatta Wodeyar in mysore

ಮುಂದಿನ ದಿನಗಳಲ್ಲಿ ಶ್ರೀಕಂಠದತ್ತ ಒಡೆಯರ್ ರವರ ನೆಚ್ಚಿನ ಆಟ ಕ್ರಿಕೆಟ್ ಆಗಿರುವುದರಿಂದ ಕ್ರಿಕೆಟ್ ಟೂರ್ನಮೆಂಟ್ ಆಯೋಜಿಸಲಾಗುವುದು ಎಂದು ಅರಮನೆ ಆಡಳಿತ ಮಂಡಳಿ ತಿಳಿಸಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Punya smarane celebration Srikantadatta Wodeyar in Madhuvana in mysore
Please Wait while comments are loading...