ಮೈಸೂರಿನಲ್ಲಿ ಜಯಲಲಿತಾ ಪ್ರತಿಕೃತಿ ನೇಣಿಗೆ ಹಾಕಿ ಪ್ರತಿಭಟನೆ

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮೈಸೂರು, ಸೆಪ್ಟೆಂಬರ್ 3: ಕಾವೇರಿ ಕಣಿವೆಯಲ್ಲಿ ಮಳೆಯಾಗದೆ ಬರ ಪರಿಸ್ಥಿತಿ ತಲೆದೋರಿದ್ದು, ಕೆಆರ್‍ಎಸ್ ಮತ್ತು ಕಬಿನಿ ಭರ್ತಿಯಾಗದೆ ಆತಂಕದ ಸ್ಥಿತಿ ತಲೆದೋರಿದೆ. ಇಂಥ ಸಂದರ್ಭದಲ್ಲಿ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಸುಪ್ರೀಂಕೋರ್ಟ್ ಮೊರೆ ಹೋಗಿ ತಮ್ಮ ರಾಜ್ಯದ ಪಾಲಿನ ನೀರು ಕೇಳುತ್ತಿರುವುದಕ್ಕೆ ಕನ್ನಡ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ.

Mysuru protest

ಕಾವೇರಿ ಮತ್ತು ಕಬಿನಿ ಜಲಾಶಯಗಳಲ್ಲಿ ರಾಜ್ಯದ ಜನತೆಗೆ ಕುಡಿಯಲು ನೀರಿಲ್ಲ. ಆದರೆ ಇಲ್ಲಿನ ಸ್ಥಿತಿ ಅರಿಯದೆ ಸುಪ್ರೀಂ ಕೋರ್ಟ್ ಮೂಲಕ ನೀರು ಕೇಳುವುದು ಅಮಾನವೀಯ ವರ್ತನೆ ಎಂದು ಕಿಡಿಕಾರಿರುವ ಮೈಸೂರು ಜಿಲ್ಲಾ ಕನ್ನಡ ಚಳವಳಿಗಾರರು ಈ ಸಂಬಂಧ ನಗರದ ಕಾಡಾ ಕಚೇರಿ ಬಳಿ ಪ್ರತಿಭಟನೆ ನಡೆಸಿ, ಜಯಲಲಿತಾ ಅವರ ಪ್ರತಿಕೃತಿಯನ್ನು ನೇಣಿಗೆ ಹಾಕಿ ಆಕ್ರೋಶ ಹೊರಹಾಕಿದ್ದಾರೆ.[ತಮಿಳ್ನಾಡಿಗೆ ಕಾವೇರಿ ಬಿಡಲೇಬೇಕು : ಸುಪ್ರೀಂಕೋರ್ಟ್ ಆಜ್ಞೆ!]

ತಮಿಳುನಾಡಿನ ಏಜೆಂಟರಂತೆ ಕಾಡಾ ಕೆಲಸ ಮಾಡುತ್ತಿದೆ. ರಾಜ್ಯದ ಸಂಸದರು ಕೈಕಟ್ಟಿ ಕೂರದೆ ಪ್ರಧಾನಿ ಮೋದಿ ಮೇಲೆ ಒತ್ತಡ ತರಬೇಕು. ಈ ಸಂಬಂಧ ಪ್ರಧಾನಿ ಮಧ್ಯಸ್ಥಿಕೆ ವಹಿಸಿ, ಕರ್ನಾಟಕ ರಾಜ್ಯಕ್ಕೆ ನ್ಯಾಯ ಒದಗಿಸಬೇಕಾಗಿದೆ ಎಂದು ಹೇಳಿದ ಪ್ರತಿಭಟನಾಕಾರರು, ಪರಿಸ್ಥಿತಿ ಅರಿತು ರಾಷ್ಟ್ರೀಯ ಜಲ ನೀತಿಯನ್ನು ಜಾರಿಗೆ ತರಬೇಕು. ಈ ವಿಚಾರದಲ್ಲಿ ಕೇಂದ್ರದ ಮಲತಾಯಿ ಧೋರಣೆ ಸಲ್ಲದು ಎಂದು ಹೇಳಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Pro Kannada organisation members protest against Tamilnadu chief minister Jayalalithaa in Mysuru. Jayalalithaa went to Supreme court to get the Kaveri water share of Tamilnadu, without considering that Karnataka itself facing water crisis, said by protesters.
Please Wait while comments are loading...