ಮೈಸೂರಿನಲ್ಲಿ ವೇಶ್ಯಾವಾಟಿಕೆ: ಯುವತಿಯರ ರಕ್ಷಣೆ

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮೈಸೂರು, ಡಿಸೆಂಬರ್ 13: ಹೊರ ರಾಜ್ಯದ ಯುವತಿಯರನ್ನಿಟ್ಟುಕೊಂಡು ವೇಶ್ಯಾವಾಟಿಕೆ ನಡೆಸುತ್ತಿದ್ದ ಮನೆಯ ಮೇಲೆ ದಾಳಿ ಮಾಡಿದ ಸಿಸಿಬಿ ಪೊಲೀಸರು ವ್ಯಕ್ತಿಯೊಬ್ಬನನ್ನು ಬಂಧಿಸಿ ನಾಲ್ವರು ಯುವತಿಯರನ್ನು ರಕ್ಷಿಸಿದ್ದಾರೆ.

ಮಹಾರಾಷ್ಟ್ರದವನು ಎನ್ನಲಾದ ರಾಸಲ್ ಮಂಡಲ್(28) ಎಂಬಾತ ಸಿಕ್ಕಿ ಬಿದ್ದಿದ್ದು, ಇನ್ನಿಬ್ಬರು ಆರೋಪಿಗಳಾದ ರೋಖೀಬ್ ಹಸನ್ ಅಲಿಯಾಸ್ ರಾಣಾ, ಸಲ್ಮಾನ್ ಮಂಡಲ್ ಎಂಬುವರು ತಪ್ಪಿಸಿಕೊಂಡಿದ್ದಾರೆ.[ಹುಡುಗಿ ಇಟ್ಟುಕೊಂಡು ವೇಶ್ಯಾವಾಟಿಕೆ ನಡೆಸುತ್ತಿದ್ದವರ ಬಂಧನ]

Prostitution: one arrested 2 escape, 4 women safe

ನಗರದ ಕುವೆಂಪುನಗರ ಪೊಲೀಸ್ ಠಾಣಾ ವ್ಯಾಪ್ತಿಯ ಶ್ರೀರಾಂಪುರ 2ನೇ ಹಂತ ಎಲ್‍ಐಸಿ ಕಾಲೋನಿ 13 ನೇ ಕ್ರಾಸ್ ಮನೆ ನಂ:484ರಲ್ಲಿನ 1ನೇ ಮಹಡಿಯ ವೇಶ್ಯಾವಾಟಿಕೆ ನಡೆಸಲಾಗುತ್ತಿತ್ತು.
ಈ ಮನೆಯಲ್ಲಿ ಕೆಲವು ಸಮಯಗಳಿಂದ ವೇಶ್ಯಾವಾಟಿಕೆ ನಡೆಯುತ್ತಿರುವ ಗುಮಾನಿ ಬಂದಿತ್ತು. ದೂರದ ಊರಿನ ಕೆಲವು ಹೆಣ್ಣು ಮಕ್ಕಳು ಮನೆಯಲ್ಲಿ ಓಡಾಡುತ್ತಿದ್ದದ್ದು ಮತ್ತು ಅಲ್ಲಿಗೆ ಆಗಾಗ್ಗೆ ಗಂಡಸರು ಬಂದು ಹೋಗುತ್ತಿದ್ದದ್ದು ಕಂಡು ಬಂದಿತ್ತು. ಇದು ಸುತ್ತಮುತ್ತಲಿನವರ ಅನುಮಾನಕ್ಕೆ ಕಾರಣವಾಗಿತ್ತು.[ಬೆಂಗಳೂರಿನ ಮಸಾಜ್ ಪಾರ್ಲರಲ್ಲಿ ಹೈಟೆಕ್ ವೇಶ್ಯಾವಾಟಿಕೆ : ಐವರ ಬಂಧನ, ಐವರ ರಕ್ಷಣೆ]

ಇದೆಲ್ಲವನ್ನು ಸೂಕ್ಷ್ಮವಾಗಿ ಗಮನಿಸಿದ ಸ್ಥಳೀಯರು ಪೊಲೀಸರ ಗಮನಕ್ಕೆ ತಂದಿದ್ದರು. ಹಾಗಾಗಿ ಸಿಸಿಬಿಯ ಎಸಿಪಿ ಸಿ. ಗೋಪಾಲ್ ಅವರ ನೇತೃತ್ವದಲ್ಲಿ ರವಿ, ಅಸ್ಗರ್ ಖಾನ್, ಹಿರಣ್ಣಯ್ಯ, ಎನ್.ಜೀವನ್, ಬಿ.ರಾಧೇಶ, ಮಹಿಳಾ ಸಿಬ್ಬಂದಿ ಪಾರ್ವತಮ್ಮ, ಮಂಜುಳ ಮತ್ತು ಕುವೆಂಪುನಗರ ಠಾಣೆಯ ಸಿಬ್ಬಂದಿ ದಾಳಿ ಮಾಡಿದ್ದಾರೆ. ವೇಶ್ಯಾವಾಟಿಕೆಯಲ್ಲಿ ಸಿಲುಕಿದ್ದ ಮುಂಬೈನ ಇಬ್ಬರು ಮತ್ತು ಕಲ್ಕತ್ತಾದ ಇಬ್ಬರು ಯುವತಿಯರನ್ನು ರಕ್ಷಿಸಲಾಗಿದೆ.

ವೇಶ್ಯಾವಾಟಿಕೆಗೆ ಬಳಕೆಯಾಗಿದ್ದ 25,850/- ನಗದು ಹಣ, ಎರಡು ಸ್ಕೂಟರ್, 2 ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಈ ಸಂಬಂಧ ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
CCB police have arrested one and 2 escaped. who kept out state women of prostitution. The four women are protected in mysore.
Please Wait while comments are loading...