ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನಲ್ಲಿ ಯೋಗ ಕೋರ್ಸ್ ಸೆಂಟರ್‌ ಹೆಸರಿನಲ್ಲಿ ವೇಶ್ಯವಾಟಿಕೆ ದಂಧೆ

By ಮೈಸೂರು ಪ್ರತಿನಿಧಿ
|
Google Oneindia Kannada News

Recommended Video

ಮೈಸೂರಿನಲ್ಲಿ ಯೋಗ ಕೋರ್ಸ್ ಸೆಂಟರ್‌ ಹೆಸರಿನಲ್ಲಿ ವೇಶ್ಯವಾಟಿಕೆ ದಂಧೆ | Oneindia Kannada

ಮೈಸೂರು, ಜುಲೈ.27: ನಗರದಲ್ಲಿ ಯೋಗ ಕೋರ್ಸ್ ಸೆಂಟರ್‌ ಹೆಸರಿನಲ್ಲಿ ವೇಶ್ಯವಾಟಿಕೆ ದಂಧೆ ನಡೆಸುತ್ತಿರುವುದು ಬೆಳಕಿಗೆ ಬಂದಿದೆ. ಮೈಸೂರಿನ ರಮಾವಿಲಾಸ ರಸ್ತೆಯ ಮನೆಯೊಂದರಲ್ಲಿ ಈ ದಂಧೆ ನಡೆಯುತ್ತಿತ್ತು.

ಒಡನಾಡಿ ಸಂಸ್ಥೆ ಸಹಯೋಗದಲ್ಲಿ ನಿಖರ ಮಾಹಿತಿಯೊಂದಿಗೆ ಪೊಲೀಸರು ಅಡ್ಡೆ ಮೇಲೆ ದಾಳಿ ಮಾಡಿದ್ದಾರೆ. ದಾಳಿಯಲ್ಲಿ ಒಟ್ಟು 7 ಯುವತಿಯರ ರಕ್ಷಣೆ ಮಾಡಾಗಿದ್ದು, ನಾಲ್ವರು ಯುವಕರನ್ನು ಬಂಧಿಸಲಾಗಿದೆ.

ಮಂಗಳೂರಿನ ಬಾಡಿಗೆ ಮನೆಯಲ್ಲಿ ಹೈಟೆಕ್ ವೇಶ್ಯಾವಾಟಿಕೆ: ಇಬ್ಬರ ಸೆರೆಮಂಗಳೂರಿನ ಬಾಡಿಗೆ ಮನೆಯಲ್ಲಿ ಹೈಟೆಕ್ ವೇಶ್ಯಾವಾಟಿಕೆ: ಇಬ್ಬರ ಸೆರೆ

ಯುವತಿಯರು ಬಾಂಗ್ಲಾ ಮೂಲದವರು ಎಂದು ತಿಳಿದು ಬಂದಿದೆ. ಹೊರಗೆ ಯೋಗ ಸೆಂಟರ್ ಬೋರ್ಡ್‌ ಹಾಕಿಕೊಂಡು, ಒಳಗೆ ಬಾಡಿ ಮಸಾಜ್ ಆಫರ್ ಹಾಕಿಕೊಂಡು ಇಷ್ಟು ದಿನ ದಂಧೆ ನಡೆಸುತ್ತಿದ್ದನ್ನು ಕಂಡು ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.

Prostitution is underway in the name of yoga course center

ನಿತ್ಯ ಸಾವಿರಾರು ಮಂದಿ ಓಡಾಡುವ ರಸ್ತೆಯಲ್ಲೇ ವೇಶ್ಯವಾಟಿಕೆ ದಂಧೆ ನಡೆಸಿಕೊಂಡು ಬಂದಿದ್ದು, ಮೈಸೂರಿನ ದೇವರಾಜ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಈ ಹಿಂದೆ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದಲ್ಲಿ ಶ್ರೀಹರಿಪ್ಯಾಲೇಸ್ ಅನ್ನು ಬಾಡಿಗೆ ಪಡೆದು ಸಚ್ಚಿದಾನಂದ ಎಂಬಾತ ವೇಶ್ಯಾವಾಟಿಕೆ ನಡೆಸುತ್ತಿದ್ದ. ಡಿವೈ ಎಸ್ ಪಿ ಹರೀಶ್ ಪಾಂಡೆ, ಪಿರಿಯಾಪಟ್ಟಣ ಇನ್ಸ್ ಪೆಕ್ಟರ್ ಚೇತನ್ ದಾಳಿ ನಡೆಸಿ ಪಶ್ಚಿಮ ಬಂಗಾಳ ಮೂಲದ ಮೂವರು ಯುವತಿಯರ ರಕ್ಷಣೆ ಮಾಡಿ, ಇಬ್ಬರನ್ನು ಬಂಧಿಸಿದ್ದರು.

English summary
Prostitution is underway in the name of yoga course center in Mysuru. Police raided with accurate information and 7 women have been protected.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X