ಮೈಸೂರಿನಲ್ಲಿ ತಲೆಯೆತ್ತುತ್ತಿದೆ ಹೈಟೆಕ್ ವೇಶ್ಯಾವಾಟಿಕೆ

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮೈಸೂರು, ಜುಲೈ 15 : ಮೈಸೂರಿನಲ್ಲಿ ಇತ್ತೀಚೆಗೆ ಹೈಟೆಕ್ ವೇಶ್ಯಾವಾಟಿಕೆ ದಂಧೆ ಜಾಲಗಳು ನಾಯಿ ಕೊಡೆಯಂತೆ ತಲೆ ಎತ್ತುತ್ತಿದ್ದು, ಅದಕ್ಕೆ ತಾಜಾ ಉದಾಹರಣೆ ಎಂಬಂತೆ ಇಂದು(ಜು.15) ವೇಶ್ಯಾವಾಟಿಕೆ ಪ್ರಕರಣವೊಂದು ಪತ್ತೆಯಾಗಿದೆ.

ಮೈಸೂರಿನ ಮನೆಯಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ದಂಪತಿ ಬಂಧನ

ಬಿದರಿ ಬ್ರಿಗೇಡ್ ರಾಜ್ಯಾಧ್ಯಕ್ಷ, ವೇಶ್ಯಾವಾಟಿಕೆ ಜಾಲದ ಕಿಂಗ್ ಪಿನ್ ಸಚ್ಚಿದಾನಂದ ಅಲಿಯಾಸ್ ಸುಚಿತ್ರಕುಮಾರ್, ಸುರೇಶ್ ನನ್ನು ಬಂಧಿಸಲಾಗಿದೆ. ಮೈಸೂರು ಜಿಲ್ಲೆ ಪಿರಿಯಾಪಟ್ಟಣ ಶ್ರೀಹರಿಪ್ಯಾಲೇಸ್ ಬಾಡಿಗೆ ಪಡೆದು ಸಚ್ಚಿದಾನಂದ ವೇಶ್ಯಾವಾಟಿಕೆ ನಡೆಸುತ್ತಿದ್ದ. ತಡ ರಾತ್ರಿ ಡಿವೈಎಸ್ ಪಿ ಹರೀಶ್ ಪಾಂಡೆ, ಪಿರಿಯಾಪಟ್ಟಣ ಇನ್ಸ್ ಪೆಕ್ಟರ್ ಚೇತನ್ ದಾಳಿ ನಡೆಸಿ ಪಶ್ಚಿಮ ಬಂಗಾಳ ಮೂಲದ ಮೂವರು ಯುವತಿಯರ ರಕ್ಷಣೆ ಮಾಡಿ ಇಬ್ಬರನ್ನು ಬಂಧಿಸಿದ್ದಾರೆ.

Prostitution: 3 women from West Bengal have rescued by Mysuru police

ದಾಳಿ ವೇಳೆ ಶ್ರೀಹರಿ ಪ್ಯಾಲೇಸ್ ಮ್ಯಾನೇಜರ್ ಮೋಹನ್, ಪರಂಗಿ ನಾಗರಾಜ್ ವಶಕ್ಕೆ ಪಡೆಯಲಾಗಿದ್ದು, ಬಂಧಿತರಿಂದ ಒಂದು ಪಿಸ್ತೂಲ್, ಇನೋವಾ ಕ್ರಿಸ್ಟಾ ಕಾರು ವಶಕ್ಕೆ ಪಡೆಯಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
3 women from West Bengal have rescued by Mysuru police from hi tech prostitution which took place in Mysuru city.
Please Wait while comments are loading...