ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪ್ರಗತಿಪರರು ಸ್ಮಶಾನದಲ್ಲಿ ಮಾಂಸಾಹಾರ ತಿಂದರೆ ಮೌಢ್ಯ ತೊಲಗುವುದೆ?

By ಯಶಸ್ವಿನಿ ಎಂ.ಕೆ
|
Google Oneindia Kannada News

ಮೈಸೂರು, ಜುಲೈ 28 : ಖಗ್ರಾಸ ಚಂದ್ರಗ್ರಹಣದ ಬಗ್ಗೆ ಜನರಲ್ಲಿ ಮನೆ ಮಾಡಿರುವ ಮೌಢ್ಯವನ್ನು ದೂರ ಮಾಡಲು ಭೀಮಪುತ್ರಿ ಸಂಘಟನೆಯ ಮಹಿಳೆಯರು ಕಳೆದ ರಾತ್ರಿ ಆನೇಕಲ್ ನ ಚಂದಾಪುರ ಸ್ಮಶಾನದಲ್ಲಿ ಮಾಸಂಹಾರ ಸೇವಿಸಿ ಆಚರಿಸಿದರು.

ಇನ್ನು ಗ್ರಹಣದ ಸಂರ್ಯಾವ ಗ್ರಹಣಗಳು ಸಂಭವಿಸಿದಾಗಲುಆ ದಿನದಂದು ಮಾಡಿಟ್ಟಿದ್ದ ಎಲ್ಲಾ ಅಡುಗೆಗಳನ್ನು ಹೊರಗಡೆ ಎಸೆಯಬೇಕು, ಇನ್ನು ಚಂದ್ರಗ್ರಹಣ ಸಂಭವಿಸಿದರೆ ಮನೆಯಿಂದ ಹೊರಗಡೆ ಬರಬಾರದು.

ಸಣ್ಣಕಥೆ : ಗ್ರಹಣಸಣ್ಣಕಥೆ : ಗ್ರಹಣ

ವಿಶೇಷ ಪೂಜೆ ಪುನಸ್ಕಾರಗಳನ್ನು ನಿರ್ವಹಿಸಬೇಕು ಹಾಗೂ ಮಹಿಳೆಯರಂತೂ ಮನೆಯಿಂದ ಹೊರಗೆ ಬರಬಾರದು ಎಂಬೆಲ್ಲಾ ಕಟ್ಟಳೆಗಳನ್ನು ವಿರೋಧಿಸಿ ಇದೀಗ ಭೀಮಪುತ್ರಿಯರು ಸಂಘಟನೆಯ ಕಾರ್ಯಕರ್ತರು ಸ್ಮಶಾನದಲ್ಲಿ ಮಾಂಸಾಹಾರ ಮತ್ತು ಫಲಾಹಾರಗಳನ್ನು ಸೇವಿಸುತ್ತಾ ಗ್ರಹಣ ವೀಕ್ಷಿಸುವ ಹೊಸ ಸಾಹಸಕ್ಕೆ ಕೈ ಹಾಕಿದರು.

ಈ ಕುರಿತಾದಂತೆ ಸಂಘಟನೆಯ ನಾಯಕಿ ಭೀಮಪುತ್ರಿ ರೇವತಿ ರಾಜ್ ತಿಳಿಸಿ, ಮೌಡ್ಯಕ್ಕೆ ಸಡ್ಡುಹೊಡೆದು ಗ್ರಹಣಕಾಲದಲ್ಲಿ ಪುಣ್ಯಭೂಮಿಯಾದ ರುದ್ರಭೂಮಿಯಲ್ಲಿ ಸಾಮೂಹಿಕವಾಗಿ ಆಹಾರ ಸೇವನೆ ಹಾಗೂ ಪ್ರಕೃತಿಯ ಹಬ್ಬವಾದ ಗ್ರಹಣ ವೀಕ್ಷಣೆಯನ್ನು ಮಾಡಿದ್ದೇವೆ.

ವೈರಲ್ ವಿಡಿಯೋ: ರಾತ್ರಿಯೆಲ್ಲ ಆಗಸದಿ ಮೋಡಿ ಮಾಡಿದ ರಕ್ತಚಂದ್ರವೈರಲ್ ವಿಡಿಯೋ: ರಾತ್ರಿಯೆಲ್ಲ ಆಗಸದಿ ಮೋಡಿ ಮಾಡಿದ ರಕ್ತಚಂದ್ರ

ಮೌಢ್ಯಚಾರಣೆಯನ್ನು ಹೆಚ್ಚು ಮೈಗೂಢಿಸಿಕೊಂಡಿರುವ ಮಹಿಳೆಯಯರನ್ನು ಎಚ್ಚರಿಸಿ ಬುದ್ಧ ಬಸವ ಅಂಬೇಡ್ಕರ್ ಮಾರ್ಗವನ್ನು ಅನುಸರಿಸಲು ಪ್ರಮಾಣ ಸ್ವೀಕರಿಸುವ ಮೂಲಕ ಮೌಢ್ಯಮುಕ್ತ ಕರ್ನಾಟಕಕ್ಕೆ ಭೀಮಪುತ್ರಿಯರು ನಾಂದಿ ಹಾಡಿದ್ದಾರೆ ಎಂದು ತಿಳಿಸಿದರು.

ಇದೇ ವೇಳೆ ನಂಜರಾಜೇ ಅರಸ್ ಮಾತನಾಡಿ, ಚಂದ್ರಗ್ರಹಣ ಬಗ್ಗೆ ಜನರಲ್ಲಿ ಸಾಕಷ್ಟು ಮೌಢ್ಯ ಬೇರೂರಿದೆ. ಮನೆಯಲ್ಲಿರುವ ನೀರನ್ನು ಚೆಲ್ಲುತ್ತಾರೆ. ರಾತ್ರಿಯೇ ಹೊಳೆಯಲ್ಲಿ ಸ್ನಾನ ಮಾಡಿ ಹಸಿ ಬಟ್ಟೆಯಲ್ಲೇ ಮಲಗುತ್ತಾರೆ. ಸುಡುಗಾಡಿನಲ್ಲಿ ಕುರಿ, ಕೋಳಿ ಬಲಿ ಕೊಡುತ್ತಾರೆ.

In Pics: ವಿಶ್ವದೆಲ್ಲೆಡೆ ರಕ್ತವರ್ಣದಲ್ಲಿ ಕಂಡ ಚಂದಿರನ ಕಣ್ತುಂಬಿಸಿಕೊಳ್ಳಿ

ಅದಕ್ಕೆ ಭಿನ್ನವೆಂಬಂತೆ ಸ್ಮಶಾನದಲ್ಲೇ ಆಹಾರ ಸೇವಿಸಿ, ಅಲ್ಲೇ ಮಲಗಿದ್ದೇವೆ. ಚಂದ್ರ ಗ್ರಹಣದಿಂದ ಯಾವುದೇ ತೊಂದರೆ ಉಂಟಾಗುವುದಿಲ್ಲ ಎಂದು ಜನಸಾಮಾನ್ಯರಿಗೆ ತಿಳಿಸುವುದು ಇದರ ಉದ್ದೇಶ. ಚಂದ್ರಗ್ರಹಣದ ದಿನ ಸ್ಮಶಾನದಲ್ಲಿ ದೆವ್ವಗಳು ಸಂಚರಿಸುತ್ತವೆ. ಯಾರೂ ಗ್ರಹಣ ನೋಡಬಾರದು ಎಂದು ಕೆಲ ಪಟ್ಟಭದ್ರ ಹಿತಾಸಕ್ತಿಗಳು ಜನರಲ್ಲಿ ಮೌಢ್ಯ ಬಿತ್ತಿವೆ. ಅದು ದೂರವಾಗಬೇಕು ಎಂದರು.

ಚಂದ್ರಗ್ರಹಣ: ಸ್ಮಶಾನದಲ್ಲಿ ಮಾಂಸಾಹಾರ ಸೇವಿಸಿದ ಪ್ರಗತಿಪರರು

ಚಂದ್ರಗ್ರಹಣ: ಸ್ಮಶಾನದಲ್ಲಿ ಮಾಂಸಾಹಾರ ಸೇವಿಸಿದ ಪ್ರಗತಿಪರರು

ಕೇತುಗ್ರಸ್ತ ಬಗ್ಗೆ ಜನರಲ್ಲಿ ಮನೆ ಮಾಡಿರುವ ಮೌಢ್ಯವನ್ನು ದೂರ ಮಾಡಲು ಭೀಮಪುತ್ರಿ ಸಂಘಟನೆಯ ಮಹಿಳೆಯರು ಕಳೆದ ರಾತ್ರಿ ಆನೇಕಲ್ ನ ಚಂದಾಪುರ ಸ್ಮಶಾನದಲ್ಲಿ ಮಾಸಂಹಾರ ಸೇವಿಸಿ ಗ್ರಹಣ ಆಚರಿಸಿದರು.

 ಮೌಢ್ಯತೆಯನ್ನು ಮೈಗೂಡಿಸಿಕೊಂಡಿರುವ ಮಹಿಳೆಯರಿಗೆ ಎಚ್ಚರಿಕೆ

ಮೌಢ್ಯತೆಯನ್ನು ಮೈಗೂಡಿಸಿಕೊಂಡಿರುವ ಮಹಿಳೆಯರಿಗೆ ಎಚ್ಚರಿಕೆ

ಮೌಢ್ಯಚಾರಣೆಯನ್ನು ಹೆಚ್ಚು ಮೈಗೂಢಿಸಿಕೊಂಡಿರುವ ಮಹಿಳೆಯಯರನ್ನು ಎಚ್ಚರಿಸಿ ಬುದ್ಧ ಬಸವ ಅಂಬೇಡ್ಕರ್ ಮಾರ್ಗವನ್ನು ಅನುಸರಿಸಲು ಪ್ರಮಾಣ ಸ್ವೀಕರಿಸುವ ಮೂಲಕ ಮೌಢ್ಯಮುಕ್ತ ಕರ್ನಾಟಕಕ್ಕೆ ಭೀಮಪುತ್ರಿಯರು ನಾಂದಿ ಹಾಡಿದ್ದಾರೆ ಎಂದು ತಿಳಿಸಿದ್ದಾರೆ.

ಕಾರ್ಯಕ್ರಮದಲ್ಲಿ 50ಕ್ಕೂ ಹೆಚ್ಚು ಮಹಿಳೆಯರು ತಾವು ಮನೆಯಲ್ಲಿ ಮಾಡಿದ ಸಸ್ಯಾಹಾರ ಹಾಗೂ ಮಾಂಸಾಹಾರ ಅಡುಗೆಗಳನ್ನು ಮಾಡಿ ತಂದು ಸ್ಮಶಾನದಲ್ಲಿಯೇ ಸೇವಿಸಿದ್ದು ವಿಶೇಷವಾಗಿತ್ತು. ಗ್ರಹಣ ವೀಕ್ಷಣೆಗೆ 50 ಕ್ಕೂ ಹೆಚ್ಚು ಮಹಿಳೆಯರು ಭಾಗವಹಿಸಿದ್ದರು.

 ಮೈಸೂರಿನಲ್ಲಿಯೂ ಸ್ಮಶಾನದಲ್ಲಿ ಗ್ರಹಣ ವೀಕ್ಷಣೆ

ಮೈಸೂರಿನಲ್ಲಿಯೂ ಸ್ಮಶಾನದಲ್ಲಿ ಗ್ರಹಣ ವೀಕ್ಷಣೆ

ಗ್ರಹಣಕ್ಕೆ ಸಂಬಂಧಿಸಿದ ಮೂಢನಂಬಿಕೆಗಳ ವಿರುದ್ಧ ಜಾಗೃತಿ ಮೂಡಿಸಲು ಇತಿಹಾಸಗಾರ ಪ್ರೊ. ನಂಜರಾಜೇ ಅರಸ್ ಮತ್ತು ಪ್ರಗತಿಪರ ತಂಡ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಸ್ಮಶಾನದಲ್ಲಿ ಊಟ ಮಾಡಿದರು.

ಗ್ರಹಣ ಕಾಲದಲ್ಲಿ ಸ್ಮಶಾನದಲ್ಲಿಯೇ ವಾಸ ಮಾಡಿ ಸ್ಮಶಾನದಲ್ಲೇ ತಿಂಡಿ ತಿಂದು ಕಾಲಹರಣ ಮಾಡಿದರು. ಗ್ರಹಣದಿಂದ ಯಾವುದೇ ಕೆಡಕು ಆಗುವುದಿಲ್ಲ ಎಂದು ಸಂದೇಶ ಸಾರಲು ಈ ಪ್ರಯತ್ನ ನಡೆಸಲಾಗಿತ್ತು. ಪ್ರಗತಿ ಗೀತೆಗಳನ್ನು ಹಾಡಿ ನಲಿದು ಕಾಲ ಕಳೆದರು.

ವೀರಯೋಧ ಖೇಮ್‌ಚಂದ್‌ ಗೋರಿ ಮುಂದೆ ಕ್ರಾಂತಿ ಗೀತೆ

ವೀರಯೋಧ ಖೇಮ್‌ಚಂದ್‌ ಗೋರಿ ಮುಂದೆ ಕ್ರಾಂತಿ ಗೀತೆ

ನಿತ್ಯ ಎಲ್ಲೆಡೆ ಜ್ಯೋತಿಷಿಗಳ ವೈಭವೀಕರಣ ನಡೆಯುತ್ತಿದ್ದು, ಈ ಕುರಿತು ಜನರಲ್ಲಿರುವ ಮೂಢನಂಬಿಕೆ ಹೊಡೆದೊಡಿಸಲು ವೀರಯೋಧ ಖೇಮ್ ಚಂದ್ ಗೋರಿ ಮುಂದೆ ಕ್ರಾಂತಿಗೀತೆ ಹಾಡಿ ಕುಣಿದು ಸ್ಪಷ್ಟ ಸಂದೇಶ ನೀಡಿದರು. ಗಡಿ ಕಾಯುವ ಯೋಧರಿಗೆ ಯಾವುದೇ ಅಮಾವಾಸ್ಯೆ, ಹುಣ್ಣಿಮೆ, ಪೀಡೆ ಇರುವುದಿಲ್ಲ ಭೂಮಿ ನಿಂತಿರೋದು. ವಿಜ್ಞಾನ ಜ್ಯೋತಿಷ್ಯದಿಂದ ಆಗಿಲ್ಲ . ಗ್ರಹಣದಿಂದ ಏನೂ ಆಗುವುದಿಲ್ಲ. ಅದೊಂದು ಸಹಜ ಪ್ರಕ್ರಿಯೆ ಬರುತ್ತದೆ ಹೋಗುತ್ತದೆ ಎಂದು ಮಾಜಿ ಮೇಯರ್ ಪ್ರಗತಿಪರ ಚಿಂತಕ ಪುರುಷೋತ್ತಮ್ ಇದೇ ಸಂದರ್ಭದಲ್ಲಿ ಹೇಳಿದರು .

English summary
Despite many blind beliefs about lunar eclipse, some progressive thinkers tried to create awareness during lunar eclipse last night in Mysuru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X