ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಸರಾ ಬದಲಿಗೆ ಮಹಿಷ ದಸರೆ ಆಚರಿಸಲು ಮುಂದಾದ ಪ್ರಗತಿಪರರು

By Yashaswini
|
Google Oneindia Kannada News

ಮೈಸೂರು, ಸೆಪ್ಟೆಂಬರ್ 15: ನಾಡಹಬ್ಬ ಮೈಸೂರು ದಸರೆಗೆ ಕೊಕ್ಕೆ ಎಂಬಂತೆ ಈ ಬಾರಿಯೂ ಮಹಿಷ ದಸರೆಯನ್ನು ಆಚರಿಸಲು ಪ್ರಗತಿಪರರು ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ನಿನ್ನೆ(ಸೆ.14) ಸುದ್ದಿಗೋಷ್ಠಿ ನಡೆಸಿದ ದಲಿತ ವೆಲ್ ಫೇರ್ ಟ್ರಸ್ಟ್ ನ ಶಾಂತರಾಜು, ಮಹಿಷಾ ದಸರಾವನ್ನು ಸೆ.18 ರಂದು ಏರ್ಪಡಿಸಲಾಗಿದೆ ಎಂಬ ಮಾಹಿತಿ ನೀಡಿದರು.

ಮೈಸೂರು ದಸರಾ: ಇಲ್ಲಿದೆ ಕಾರ್ಯಕ್ರಮದ ಪಟ್ಟಿಮೈಸೂರು ದಸರಾ: ಇಲ್ಲಿದೆ ಕಾರ್ಯಕ್ರಮದ ಪಟ್ಟಿ

ಈ ಕುರಿತಾಗಿ ಮಾಹಿತಿ ನೀಡಿದ ಅವರು, ದಲಿತ ವೆಲ್ಫೇರ್ ಟ್ರಸ್ಟ್, ಅಶೋಕಪುರಂ ಅಭಿಮಾನಿಗಳ ಬಳಗ, ಗಂಗೋತ್ರಿ ಸಂಶೋಧನಾ ವಿದ್ಯಾರ್ಥಿ ಒಕ್ಕೂಟ ಮೈಸೂರು ಹಾಗೂ ಪ್ರಗತಿ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಮೂರನೇ ವರ್ಷದ ಮಹಿಷಾ ದಸರಾವನ್ನು ಏರ್ಪಡಿಸಲಾಗಿದೆ. ಮೂಲ ನಿವಾಸಿಗಳ ಮಹಿಷ ಸಾಂಸ್ಕೃತಿಕ ಹಬ್ಬವಾದ ಮಹಿಷ ದಸರಾದ ಪ್ರಯುಕ್ತ ಮೂಲ ನಿವಾಸಿ ಶೋಷಿತ ಕೇರಿಗಳಿಂದ ಚಾಮುಂಡಿ ಬೆಟ್ಟಕ್ಕೆ ಬೈಕ್ rally ಹಮ್ಮಿಕೊಂಡಿದ್ದು, ಅಂದು ಮಧ್ಯಾಹ್ನ 12 ಗಂಟೆಗೆ ಬೈಕ್ rallyಯು ಹಾರ್ಡಿಂಜ್ ವೃತ್ತದಿಂದ ಹೊರಟು ಚಾಮುಂಡಿ ಬೆಟ್ಟ ತಲುಪಲಿದೆ. ನಂತರ ಮಹಿಷಾಸುರ ಪ್ರತಿಮೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಮಹಿಷಾ ದಸರಾಗೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.

Progressive organisation in Mysuru decide to celebrate Mahisha Dasara on Sep 18th

ಮೈಸೂರಿನಲ್ಲಿ ಮಹಿಷಾಸುರನ ಇರುವಿಕೆಯನ್ನು ಮರೆಮಾಚಲಾಗಿದೆ, ಅವನ ಮಹತ್ವವನ್ನು ಕಡೆಗಣಿಸಲಾಗಿದೆ. ಉದ್ದೇಶಪೂರ್ವಕವಾಗಿ ಉದಾಸೀನ ಮಾಡಲಾಗಿದೆ. ಯಾವ ಮಹಾಕಾವ್ಯವು ಇಂತಹ ಬೌದ್ಧ ಬಿಕ್ಕುವಿನ ಕುರಿತು ರಚನೆಯಾಗಿಲ್ಲ, ನೆಲದ ಅಸಮಾನತೆಯನ್ನು ವಿರೋಧಿಸುತ್ತಿದ್ದನು. ಇಲ್ಲಿ ದೇವರುಗಳಿಗೆ ಸವಾಲುಗಳನ್ನು ಎಸೆಯುತ್ತಿದ್ದನು, ಪುರೋಹಿತಶಾಹಿಯ ವೈದಿಕ ಪ್ರವೃತ್ತಿಯನ್ನು ಖಂಡಿಸುತ್ತಿದ್ದನ್ನು ಎಂದು ಮಹಿಷನ ಬಗ್ಗೆ ವಿವರಿಸಿದರು.

ಮಹಿಷ ದಸರೆಯ ಹಿನ್ನೆಲೆ ಏನು?
ಮೈಸೂರಿಗೆ ಮೂಲ ಹೆಸರು ಬಂದಿರುವುದೇ ಮಹಿಷಾಸುರನಿಂದ. ಇಂದು ಚಾಮುಂಡಿ ಬೆಟ್ಟ ಎಂದು ಕರೆಯುವ ಸ್ಥಳ ಈ ಹಿಂದೆ ಮಹಾಬಲಗಿರಿ ಎಂದು ಕರೆಯಲಾಗುತ್ತಿತ್ತು. ಎಂಟನೇ ಶತಮಾನದಲ್ಲಿ ಅಂದರೆ ಗಂಗರ ಕಾಲದಲ್ಲಿ ಮಹಾಬಲೇಶ್ವರ ದೇವಾಲಯ ಇಂದಿನ ಚಾಮುಂಡಿಬೆಟ್ಟದಲ್ಲಿ ಪುನರ್ ನಿರ್ಮಾಣಗೊಂಡಿತ್ತು . ಕ್ರಿ.ಶ 950ರಲ್ಲಿ ಹೊಯ್ಸಳರ ವಿಷ್ಣುವರ್ಧನ ಕಾಲದ 1128ರ ಶೀಲಾಶಾಸನದಲ್ಲಿ ಚಾಮುಂಡಿ ಬೆಟ್ಟವನ್ನು 'ಸ್ವಸ್ತಿ ಶ್ರೀ ಮಹಾಬಲ ತೀರ್ಥ'ಎಂದು ಕೆತ್ತಲಾಗಿದೆ. ಜಗಜ್ಯೋತಿ ಬಸವಣ್ಣನವರ ಕಾಲದಲ್ಲೂ ಈ ಬೆಟ್ಟವನ್ನು ಮಹಾಬಲಗಿರಿ ಎಂದೇ ಕರೆಯಲಾಗುತ್ತಿತ್ತು. ಇನ್ನು ಮುಂದುವರೆದು ಮೈಸೂರು ವಾಸ್ತವವಾಗಿ ಮಹಾಮಹಿಷಾ ಕಾಂಡವೇ ಆಗಿತ್ತು ಎಂಬುದು ಹಲವಾರು ಶಾಸನಗಳು, ಐತಿಹಾಸಿಕ ಕೃತಿಗಳು ಮತ್ತು ಸ್ಮಾರಕಗಳಿಂದ ಸ್ಪಷ್ಟವಾಗಿ ತಿಳಿಯುತ್ತದೆ.

ಹಳೆ ಮೈಸೂರು ಪ್ರಾಂತದ ಜನ ಮೂಲತಃ ಮಹಿಳಾ ಮಂಡಳದ ನಾಗರಿಕರು. ಅಲ್ಲಿಗೆ ಮನುಷ್ಯನ ಮೂಲ ನಿವಾಸಿಗಳ ದೊರೆಯಾಗಿದ್ದ ಮಹಿಷ ಎಂಬ ರಾಜ, ಸತ್ಯ , ಪ್ರೀತಿ, ಅಹಿಂಸೆ , ಸಮಾನತೆ ಮತ್ತು ಭ್ರಾತೃತ್ವದ ನಂಬಿಕೆಯಿಟ್ಟು ತನ್ನ ನಾಡು ಹಾಗೂ ಪ್ರಜೆಗಳನ್ನು ಆಳಿದ್ದನು. ಈ ಎಲ್ಲಾ ಐತಿಹಾಸಿಕ ಹಿನ್ನೆಲೆಗಳನ್ನು ಗಮನಿಸಿದರೆ ಮಹಿಷ ದಸರಾ ಆಚರಿಸುವುದರಲ್ಲಿ ತಪ್ಪೇನಿದೆ ಎಂಬ ಪ್ರಶ್ನೆ ಪ್ರಗತಿಪರರದ್ದು.

English summary
Some progressive organisations in Mysuru have decided to celebrate Mahisha Dashara on Sep 18th.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X