ಮೈಸೂರು: ಪೆರೋಲ್ ಮೇಲೆ ಹೊರಬಂದವ ಲಕ್ಷ ರೂಪಾಯಿ ದೋಚಿದ!

Posted By:
Subscribe to Oneindia Kannada

ಮೈಸೂರು, ಜುಲೈ 12 : ಕಳೆದೆರಡು ದಿನಗಳ ಕೆಳಗೆ ಮೈಸೂರು ಪೊಲೀಸರು ಭೇದಿಸಿದ 30 ಲಕ್ಷ ದರೋಡೆ ಪ್ರಕರಣದ ಕೇಸ್ ನಮಗೆ ನೆನಪಿದೆ. ಆದರೆ ಈ ಪ್ರಕರಣದ ಪ್ರಮುಖ ರೋಪಿ ಜೀವವಾಧಿ ಶಿಕ್ಷೆಗೆ ಗುರಿಯಾಗಿ ಪೆರೋಲ್ ಮೇಲೆ ಹೊರ ಬಂದಿದ್ದಾತನೇ ಎನ್ನುವುದು ಆಶ್ಚರ್ಯಕರ ಸಂಗತಿ.

ಹೌದು, ಬೆಂಗಳೂರಿನ ಸಲೀಮ್ ಎಂಬಾತನೇ ದರೋಡೆ ನಡೆಸಿ ಮತ್ತೆ ಜೈಲು ಸೇರಿರುವುದು. ಈತ ತನ್ನದೇ ಆದ ಗ್ಯಾಂಗ್ ಕಟ್ಟಿಕೊಂಡು ನಂತರ ನಗರದ ಖಾಸಗಿ ಕಂಪನಿಯೊಂದಕ್ಕೆ ಹಾಡಹಗಲೇ ನುಗ್ಗಿ 30 ಲಕ್ಷ ದರೋಡೆ ಮಾಡಿ ಪುನಃ ಜೈಲು ಸೇರಿರುವ ರೋಚಕ ಘಟನೆ ಮೈಸೂರಿನಲ್ಲಿ ನಡೆದಿದೆ.

ಮೈಸೂರಿನಲ್ಲಿ 29 ಲಕ್ಷ ರೂ. ದರೋಡೆ ಪ್ರಕರಣ : ಮೂವರ ಸೆರೆ

Prisoner who was on parole robbed Rs.30 lakhs in Mysuru

ಘಟನೆ ಹಿನ್ನೆಲೆ ಏನು?
ನಗರದ ಗೋಕುಲಂನ ಮನೆಯ ಮಹಡಿ ಮೇಲೆ ನಂಜನಗೂಡು ತಾಲೂಕು ತಾಂಡ್ಯ ಕೈಗಾರಿಕಾ ಪ್ರದೇಶದ ಖ್ಯಾತಿ ಸ್ಟೀಲ್ ಕಾರ್ಖಾನೆಗೆ ಸೇರಿದ ಕಂಪನಿಯ ಕಚೇರಿ ತೆರೆಯಲಾಗಿದೆ. ಈ ಕಚೇರಿಗೆ ಜೂನ್ 23ರ ಮಧ್ಯಾಹ್ನ 3 ಗಂಟೆ ಸಮಯದಲ್ಲಿ ಬಂದ 10 ಜನರಿದ್ದ ತಂಡವೊಂದು ಏಕಾಏಕಿ ನುಗ್ಗಿ ಕಚೇರಿ ನೋಡಿಕೊಳ್ಳುತ್ತಿದ್ದ ವಿನೋದ್ ಹಾಗೂ ಇತರರಿಗೆ ಮಾರಕಾಸ್ತ್ರಗಳನ್ನು ತೋರಿಸಿ, ಡ್ರಾನಲ್ಲಿ ಇಟ್ಟಿದ್ದ 30 ಲಕ್ಷ ರೂ. ದೋಚಿ ಪರಾರಿಯಾಗಿತ್ತು.

ಕಚೇರಿಗೆ ಸಿಸಿಟಿವಿ ಕ್ಯಾಮರಾ ಅಳವಡಿಸಿದ್ದನ್ನು ಗಮನಿಸಿದ ತಂಡ, ಕ್ಯಾಮರಾದ ದೃಶ್ಯವನ್ನು ಸೆರೆ ಹಿಡಿಯಲು ಇಟ್ಟಿದ್ದ ಹಾರ್ಡ್‌ಡಿಸ್ಕ್‌ನ್ನು ಕಿತ್ತುಕೊಂಡು ಹೋಗಿತ್ತು. ಈ ಸಂಬಂಧ ವಿವಿ ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣವನ್ನು ನಗರ ಪೊಲೀಸ್ ಕಮಿಷನರ್ ಸಿಸಿಬಿ ತಂಡಕ್ಕೆ ವಹಿಸಿದ್ದರು. ಸಿಸಿಬಿ ತಂಡ ದರೋಡೆ ನಡೆದ ಸ್ಥಳದ ಪರಿಶೀಲನೆ ನಡೆಸಿ, ಅಲ್ಲಿ ಸುತ್ತಮುತ್ತ ದಾಖಲಾಗಿದ್ದ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದೆ. ಬಳಿಕ ಬೆಂಗಳೂರಿನ ಯಶವಂತಪುರದ ಬೇಕರಿಯ ಬಳಿ ಬೆಂಗಳೂರಿನ ಜಬ್ಬೀರ್, ಜಾಕೀರ್ ಪಾಷಾ, ಅಬ್ಸರ್ ಪಾಷಾ ಎಂಬುವವರನ್ನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಈ ಮೂವರು ಬಂಧಿತರನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಈ ದರೋಡೆ ತಂಡದ ನಾಯಕ ಸಲೀಮ್ ಎಂದು ಬಯಲಾಗಿದೆ.

ಹಿಂಡಲಗಾ ಜೈಲಿನಲ್ಲಿದ್ದ ಖದೀಮ ಈತ!
ಈ ದರೋಡೆ ತಂಡದ ನಾಯಕ ಬೆಂಗಳೂರಿನ ಸಲೀಮ್. ಈತ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದು, ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದ. ದರೋಡೆಗೆ ಸ್ಕೆಚ್ ಹಾಕಿ ಪೆರೋಲ್ ಪಡೆದು ಬೆಂಗಳೂರಿಗೆ ಬಂದಿದ್ದ ಈತ, ಅಲ್ಲಿ 9 ಜನರ ಗ್ಯಾಂಗ್ ಜೊತೆ ಸೇರಿಕೊಂಡಿದ್ದಾನೆ. ಮೈಸೂರಿನ ಗೋಕುಲಂನ ಖಾಸಗಿ ಕಂಪನಿಗೆ ಹಾಡಹಗಲೇ ನುಗ್ಗಿ 30 ಲಕ್ಷ ದರೋಡೆ ಮಾಡಿ ಆ ಹಣವನ್ನ ಎಲ್ಲರಿಗೂ ಹಂಚಿ ಸಲೀಮ್ ಹೆಚ್ಚಿನ ಹಣವನ್ನ ಇಟ್ಟುಕೊಂಡಿದ್ದಾನೆ.

ಆ ಹಣವನ್ನ ಮನೆಯವರಿಗೆ ಕೊಟ್ಟು ಪುನಃ ಹಿಂಡಲಗಾ ಜೈಲಿಗೆ ಸೇರಿಕೊಂಡಿದ್ದಾನೆ. ಈ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದ ಮೈಸೂರು ಪೊಲೀಸ್ ಕಮಿಷನರ್, ಒಂದು ಸಿಸಿಬಿ ತಂಡವನ್ನ ನ್ಯಾಯಾಲಯದ ಅನುಮತಿ ಪಡೆದು ಹಿಂಡಲಗಾ ಜೈಲಿನಲ್ಲಿ ಇರುವ ಸಲೀಮ್ ನನ್ನು ಕರೆತರಲು ಬೆಳಗಾವಿಗೆ ಹೋಗಿದೆ. ಮತ್ತೊಂದು ತಂಡ ಉಳಿದ ಆರು ಜನರ ಬಂಧನಕ್ಕೆ ಬಲೆ ಬೀಸಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A shocking revelation is made in the recent gang robbery at VV Puram. Three members of the gang are arrested. One among them is out of jail in parole and has built a team for robbery.
Please Wait while comments are loading...