ವಿವಾಹಿತೆ ಜತೆಗೆ ಸಿಕ್ಕಿಬಿದ್ದ ಪೂಜಾರಿಗೆ ಸಮಾ ಬಡಿದ ಇಮ್ಮಾವು ಗ್ರಾಮಸ್ಥರು

Posted By: ಯಶಸ್ವಿನಿ ಎಂ.ಕೆ
Subscribe to Oneindia Kannada

ಮೈಸೂರು, ಜನವರಿ 2 : ಸಮಸ್ಯೆ ಹೇಳಿಕೊಂಡು ಬರುತ್ತಿದ್ದ ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದ ನಕಲಿ ಪೂಜಾರಿಯೊಬ್ಬ ಗ್ರಾಮಸ್ಥರ ಕೈಗೆ ಸಿಕ್ಕಿ ಬಿದ್ದ ಘಟನೆ ಮೈಸೂರಿನ ಇಮ್ಮಾವು ಬಳಿ ನಡೆದಿದೆ.

ಮಹದೇವಸ್ವಾಮಿ ಗುಡ್ಡಪ್ಪ ಸಿಕ್ಕಿಬಿದ್ದ ವ್ಯಕ್ತಿ. ಮಹದೇವಸ್ವಾಮಿ ತನ್ನ ಮೈಮೇಲೆ ಸಿದ್ದಪ್ಪಾಜಿ ದೇವರು ಬರುತ್ತದೆ ಎಂದು ಎಲ್ಲರನ್ನೂ ನಂಬಿಸಿದ್ದ. 15 ವರ್ಷಗಳಿಂದಲೂ 16 ಗ್ರಾಮಗಳಲ್ಲಿ ದೇವಸ್ಥಾನ ಕಟ್ಟಿಕೊಂಡಿರುವ ಮಹದೇವಸ್ವಾಮಿ, ಐಷಾರಾಮಿ ಮನೆಯಲ್ಲಿ ಜೀವನ ನಡೆಸುತ್ತಿದ್ದ.

Priest caught with married woman by villagers

ಈತ ನೂರಾರು ಜನರಿಗೆ ಮಂಕುಬೂದಿ ಎರಚಿ, ಮಹಿಳೆಯರ ಜತೆ ರಾಸಲೀಲೆ ನಡೆಸುತ್ತಿದ್ದ ಎಂಬುದು ಆರೋಪ. ಸೋಮವಾರ ಸಂಜೆ ವಿವಾಹಿತ ಮಹಿಳೆಯೊಂದಿಗೆ ರಾಸಲೀಲೆಯಲ್ಲಿ ತೊಡಗಿದ್ದಾಗ ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದಿದ್ದಾನೆ. ಆತನ ಜತೆ ರಾಸಲೀಲೆಯಲ್ಲಿ ತೊಡಗಿದ್ದ ಮಹಿಳೆ ವಿವಾಹವಾಗಿ ವರ್ಷ ಕಳೆಯುವುದರ ಒಳಗಾಗಿ ಪತಿಯ ಮನೆಯನ್ನು ಬಿಟ್ಟು ಇಮ್ಮಾವು ಗ್ರಾಮದಲ್ಲಿ ತನ್ನ ತಾಯಿಯ ಜೊತೆ ವಾಸವಾಗಿದ್ದಳು.

ಮೈಸೂರಿನ ಮಂಡಿ ಮೊಹಲ್ಲಾದಲ್ಲಿ ಹಾಡಹಗಲೇ 23 ಲಕ್ಷ ದೋಚಿದ ಖದೀಮರು

ಈ ನಡುವೆ ಗುಡ್ಡಪ್ಪ ಮಹಿಳೆಯ ಮನಸು ಕೆಡಿಸಿ, ಗಂಡನಿಂದ ದೂರವಿರುವಂತೆ‌ ಮಾಡಿದ್ದ. ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದ ಗುಡ್ಡಪ್ಪ ಅಲಿಯಾಸ್ ಮಹದೇವಸ್ವಾಮಿಯನ್ನು ಗ್ರಾಮಸ್ಥರು ಅರೆಬೆತ್ತಲೆ ಮಾಡಿ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಈ ಮಧ್ಯೆ ಯಾವ ಕ್ರಮ ಕೈಗೊಳ್ಳುತ್ತಾರೆ ಎಂದು ಗ್ರಾಮಸ್ಥರಿಗೆ ತಿಳಿಸದೆ ಕರೆದುಕೊಂಡು ಹೋಗಲು ಯತ್ನಿಸಿದ್ದಕ್ಕೆ ಪೊಲೀಸ್ ಜೀಪ್ ಅಡ್ಡಗಟ್ಟಿ ಗ್ರಾಮಸ್ಥರು ಪ್ರತಿಭಟನೆ ಕೂಡ ನಡೆಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Mahadevaswamy Guddappa, priest in Immavu village, Mysuru caught by villagers while he was with married woman. Villagers handed over him to police and urged for serious action.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ