ಚುನಾವಣೆಗೆ ಪ್ರೇಮಕುಮಾರಿ ರೆಡಿ: ರಾಮ್ ದಾಸ್ ವಿರುದ್ಧ ಕಿಡಿ

By: ಯಶಸ್ವಿನಿ ಎಂ.ಕೆ
Subscribe to Oneindia Kannada

ಮೈಸೂರು, ಜನವರಿ 9: ನನಗೆ ಬಂದ ರಾಜಕೀಯ ಮತ್ತು ಸಿನಿಮಾರಂಗದ ಅವಕಾಶಗಳನ್ನು ಮಾಜಿ ಸಚಿವ ರಾಮ್ ದಾಸ್ ಪಿತೂರಿ ಮಾಡಿ ತಪ್ಪಿಸಿದ್ದಾರೆ. ಅಧಿಕಾರ, ಹಣ ದುರುಪಯೋಗ ಪಡಿಸಿಕೊಂಡು ಕಿರುಕುಳ ನೀಡಿದ್ದಾರೆ. ಸಾಮಾಜಿಕ ಹೋರಾಟಕ್ಕಾಗಿ ನಾನು ರಾಜಕೀಯ ಪ್ರವೇಶಿಸುವೆ ಎಂದು ಪ್ರೇಮಕುಮಾರಿ ಮಾಜಿ ಸಚಿವರ ವಿರುದ್ಧ ಬಾಂಬ್ ಸಿಡಿಸಿದರು.[ರಾಮದಾಸ್ ವಿದೇಶಕ್ಕೆ; ಪ್ರೇಮ ಸತ್ಯಾಗ್ರಹಕ್ಕೆ ಸಜ್ಜು]

ಎರಡು ವರ್ಷದ ಹಿಂದೆ ರಾಮ್ ದಾಸ್, ಪ್ರೇಮಕುಮಾರಿ ನಡುವಿನ ಪ್ರೇಮ ಪ್ರಕರಣ ಮಾಸುವ ಮುನ್ನವೇ ಮರುಜೀವ ಪಡೆದಿದೆ. ಪತ್ರಕರ್ತರ ಭವನದಲ್ಲಿ ಪ್ರೇಮಕುಮಾರಿ ಮಾತನಾಡಿ, ರಾಮ್ ದಾಸ್ ಅವರು ತಮ್ಮ ಹಣ, ಅಧಿಕಾರ ದುರುಪಯೋಗ ಪಡಿಸಿಕೊಂಡು ನನಗೆ ಕರುಕುಳ ನೀಡುತ್ತಿದ್ದಾರೆ. ಹಾಲಿ ಇರುವ ಪ್ರಕರಣದ ಸಾಕ್ಷಿಗಳನ್ನು ನಾಶಪಡಿಸಿ ತಾನು ದೋಷಮುಕ್ತವೆಂದು ಬೀಗುತ್ತಿದ್ದಾರೆ ಎಂದರು.

ನಾನು ಸಾಮಾಜಿಕ ಹೋರಾಟ ಮಾಡಲಿದ್ದೇನೆ. ಇದಕ್ಕಾಗಿ ರಾಜಕೀಯ ಪ್ರವೇಶ ಅನಿವಾರ್ಯವಾಗಿದ್ದು, ಯಾವ ಪಕ್ಷವೆಂದು ಇನ್ನೂ ನಿರ್ಧಾರವಾಗಿಲ್ಲ, ಯಾವುದೇ ಪಕ್ಷ ಸರಿಹೊಂದದಿದ್ದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವೆ ಎಂದರು.[ರಾಮದಾಸ್ - ಪ್ರೇಮಕುಮಾರಿ ಪ್ರಕರಣಕ್ಕೆ ಹೊಸಜೀವ!]

Premakumari conducted press conference against former minister ramdas

ಸರ್ಕಾರದಿಂದ ತನಿಖಾ ವರದಿ ಹಾಗೂ ದಾಖಲೆ ಸೋರಿಕೆಯಾಗಿವೆ. ತಮ್ಮ ಪ್ರಭಾವ ಬೀರಿ, ನನಗೆ ರಾಜಕೀಯ ಮತ್ತು ಸಿನಿಮಾರಂಗದಿಂದ ಬಂಧ ಅವಕಾಶಗಳನ್ನು ಪಿತೂರಿ ಮಾಡಿ ತಪ್ಪಿಸಿದ್ದಾರೆ ಎಂದರು. ಅವರ ರಾಜಕೀಯ ಬೆಳವಣಿಗೆಗಾಗಿ ನಾನು ದಾಖಲಿಸಿದ್ದ ಎಲ್ಲ ಪ್ರಕರಣಗಳನ್ನು ಒತ್ತಾಯ ಪೂರ್ವಕವಾಗಿ ಮುಚ್ಚಿಹಾಕಿದ್ದಾರೆ ಎಂದರು. ಈ ಬಗ್ಗೆ ಬಿಜೆಪಿಯ ಯಡಿಯೂರಪ್ಪ ಮುಂತಾದ ಮುಖಂಡರನ್ನು ಕೇಳಿಕೊಂಡರೂ ಅವರೂ ಸಹ ಸ್ಪಂದಿಸಿಲ್ಲ ಎಂದರು.[ರಾಮದಾಸ್ ಅವರೇ ನನ್ನ ಗಂಡ ಎಂದ ಪ್ರೇಮಕುಮಾರಿ!]

Premakumari conducted press conference against former minister ramdas

ಜುಗಲ್'ಬಂದಿಗೆ ಸಿದ್ಧ!
ರಾಮ್ ದಾಸ್ ತಮ್ಮ ವಿರುದ್ಧ ಸಿಐಡಿ ಹಾಗೂ ಇತರೆ ಕ್ರಿಮಿನಲ್ ಆರೋಪಗಳನ್ನು ಸೃಷ್ಟಿಸಿದ್ದಾರೆ. ಬ್ಲಾಕ್ಮೇಲ್ ಮಾಡುತ್ತಿದ್ದೇನೆ ಎಂದು ಆರೋಪಿಸಿದ್ದಾರೆ. ಅವರು ಸಾರ್ವಜನಿಕವಾಗಿ ನನ್ನೆಲ್ಲಾ ಪ್ರಶ್ನೆಗಳಿಗೆ ಉತ್ತರಿಸಬೇಕು ಎಂದರು. ಈ ಹಿನ್ನೆಲೆ ಜುಗಲ್ ಬಂದಗೂ ತಯಾರಿರುವುದಾಗಿ ತಿಳಿಸಿದರು.

ಪ್ರಾಯಶ್ಚಿತ್ತದ ಮನಸ್ಸಿದ್ದರೆ ರಾಮದಾಸ್ ಅವರು ತಮ್ಮ ತಪ್ಪನ್ನು ತಿದ್ದಿಕೊಳ್ಳುತ್ತಿದ್ದರು. ನಿರ್ದೋಷಿಯಾದ ನನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡಿ ವ್ಯವಸ್ಥಿತವಾಗಿ ತುಳಿಯುಲು ಪ್ರಯತ್ನಿಸುತ್ತಿರಲಿಲ್ಲ ಎಂದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Prema Kumari mulls entering politics to seek Social Justice. Talking to media here, She accused former BJP MLA Ramdas for casting a conspiracy to snub her, destroy all evidences to prove that Ramdas was in love with her.
Please Wait while comments are loading...