ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನಲ್ಲಿ 6 ತಿಂಗಳ ಗರ್ಭಿಣಿ-ಮಗು ಸಾವು: ವೈದ್ಯರ ನಿರ್ಲಕ್ಷ್ಯ ಆರೋಪ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಡಿಸೆಂಬರ್ 02:ಮೈಸೂರಿನ ನಾರಾಯಣ ಹೃದಯಾಲಯ ಆಸ್ಪತ್ರೆಯಲ್ಲಿ ಆರು ತಿಂಗಳ ಗರ್ಭಿಣಿ ಹಾಗೂ ಮಗು ಇಬ್ಬರೂ ಸಾವನ್ನಪ್ಪಿರುವ ಘಟನೆ ನಡೆದಿದೆ.

ಸ್ನೇಹಾ (23) ಮೃತಪಟ್ಟ ಗರ್ಭಿಣಿ. ಈಕೆ ವೈದ್ಯರ ನಿರ್ಲಕ್ಷ್ಯದಿಂದ ಸಾವನ್ನಪ್ಪಿರುವುದಾಗಿ ಪೋಷಕರು ಆರೋಪಿಸಿದ್ದಾರೆ. ಸ್ನೇಹಾಗೆ ಕೆಮ್ಮು ಹೆಚ್ಚಾದ ಹಿನ್ನಲೆಯಲ್ಲಿ ಕಳೆದ ತಿಂಗಳು ಅಕ್ಟೋಬರ್ 30 ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ನಾಯಿ ಅಡ್ಡ ಬಂದು ಬೈಕ್ ನಿಂದ ಕೆಳಗೆ ಬಿದ್ದಿದ್ದ ಸವಾರ ಸಾವುನಾಯಿ ಅಡ್ಡ ಬಂದು ಬೈಕ್ ನಿಂದ ಕೆಳಗೆ ಬಿದ್ದಿದ್ದ ಸವಾರ ಸಾವು

ಈ ಹಿನ್ನೆಲೆಯಲ್ಲಿ ಸ್ನೇಹಾಗೆ ಸುಮಾರು ಒಂದೂವರೆ ತಿಂಗಳ ಕಾಲ ವೈದ್ಯರು ಚಿಕಿತ್ಸೆ ನೀಡಿದ್ದರು. ಆದರೆ ಚಿಕಿತ್ಸೆ ವೇಳೆ ಅಂದರೆ ಇಂದು ಭಾನುವಾರ ಆರು ತಿಂಗಳ ಮಗುವನ್ನು ಅಬಾರ್ಷನ್ ಮಾಡಿ ತೆಗೆದಿದ್ದರು.

pregnant women and baby died at hospital in Mysore

ಮಗು ಹೊರ ತೆಗೆದ ಬಳಿಕ ಮೃತಪಟ್ಟಿದೆ ಎಂದು ಬೆಳಗ್ಗೆ ಪೋಷಕರಿಗೆ ಮಾಹಿತಿ ರವಾನಿಸಲಾಗಿತ್ತು. ಬಳಿಕ ಕೆಲವೇ ಗಂಟೆಗಳಲ್ಲಿ ತಾಯಿ ಸ್ನೇಹ ಕೂಡ ಸಾವನ್ನಪ್ಪಿದ್ದಾರೆ ಎಂದು ತಿಳಿಸಲಾಗಿದೆ.

ಇದರಿಂದ ಮನನೊಂದ ಪೋಷಕರು "ತಾಯಿ-ಮಗುವನ್ನು ಉಳಿಸಿಕೊಡದೆ ಇದ್ದರೂ 25 ಲಕ್ಷ ಬಿಲ್ ಮಾಡಿದ್ದಾರೆ. ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಅವಕಾಶ ನೀಡಿಲ್ಲ.ಇಬ್ಬರ ಸಾವಿಗೆ ಆಸ್ಪತ್ರೆ ವೈದ್ಯರೇ ಕಾರಣ. ವೈದ್ಯರ ಮೇಲೆ ಕ್ರಮ ಕೈಗೊಳ್ಳಿ" ಎಂದು ಸಂಬಂಧಿಕರು ಆಗ್ರಹಿಸಿದ್ದಾರೆ.

ಮಡಿಕೇರಿಯಲ್ಲಿ ಭೂಕುಸಿತಕ್ಕೆ ಇಬ್ಬರು ಮಹಿಳೆಯರು ಬಲಿ, ಹೊಣೆಗಾರರು ಯಾರು?ಮಡಿಕೇರಿಯಲ್ಲಿ ಭೂಕುಸಿತಕ್ಕೆ ಇಬ್ಬರು ಮಹಿಳೆಯರು ಬಲಿ, ಹೊಣೆಗಾರರು ಯಾರು?

ಅಂದಹಾಗೆ ಟ್ರೀಟ್ ಮೆಂಟ್ ಗಾಗಿ ಸ್ನೇಹ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಪತ್ರ ಬರೆದಿದ್ದರು. ಸಾವಿಗೂ ಮುನ್ನ ಬರೆದಿದ್ದ ಪತ್ರ ಪೋಷಕರಿಗೆ ಸಿಕ್ಕಿದೆ. ಅಪ್ಪ ,ಅಮ್ಮ, ತಂಗಿಯರು, ಪತಿ ಸೇರಿದಂತೆ ಸಂಬಂಧಿಗಳಿಗೆ ಆರೋಗ್ಯದ ಬಗ್ಗೆ ಮಾಹಿತಿ ನೀಡಲು ಸ್ನೇಹ ಪತ್ರ ಬರೆದಿದ್ದರು.

pregnant women and baby died at hospital in Mysore

"ನಾನು ಆರೋಗ್ಯವಾಗಿದ್ದೇನೆ. ಬೇಗ ಹುಷಾರಾಗಿ ಮನೆಗೆ ಬರುತ್ತೇನೆ. ನೀವ್ಯಾರು ನನ್ನ ಬಗ್ಗೆ ಚಿಂತೆ ಮಾಡಬೇಡಿ. ನನ್ನಿಂದ ನಿಮಗೆ ಕಷ್ಟವಾಗಿದ್ದರೆ ಕ್ಷಮಿಸಿ" ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಇತ್ತ ಕಡೆ ಗರ್ಭಿಣಿ, ಮಗು ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ನಾರಾಯಣ ಹೃದಯಾಲಯದ ವೈದ್ಯಕೀಯ ಅಧೀಕ್ಷಕ ಡಾ.ದಿಲೀಪ್ ಸ್ಪಷ್ಟನೆ ನೀಡಿದ್ದಾರೆ. ಸ್ನೇಹ ಅವರು 36 ದಿವಸಗಳ ಹಿಂದೆ ನಮ್ಮ ಅಸ್ಪತ್ರೆಗೆ ಬಂದು ದಾಖಲಾಗಿದ್ದಾರೆ. ಅವರಿಗೆ ನ್ಯುಮೋನಿಯಾ ಕಾಯಿಲೆ ಇತ್ತು. ಚಿಕಿತ್ಸೆ ನೀಡಿದ ನಂತರದಲ್ಲಿ ಕೊಂಚ ಚೇತರಿಸಿಕೊಂಡಿದ್ದರು.

ಕೊಡಗಿನಲ್ಲಿ ಕಾಡು ಕುರಿ ಎಂದುಕೊಂಡು ತನ್ನ ಜೊತೆಯಲ್ಲಿ ಬಂದವನಿಗೆ ಗುಂಡಿಕ್ಕಿದ!ಕೊಡಗಿನಲ್ಲಿ ಕಾಡು ಕುರಿ ಎಂದುಕೊಂಡು ತನ್ನ ಜೊತೆಯಲ್ಲಿ ಬಂದವನಿಗೆ ಗುಂಡಿಕ್ಕಿದ!

ಆದರೆ ಕೆಲ ದಿನಗಳಿಂದ ಶ್ವಾಸಕೋಶದ ಒಳಭಾಗದಲ್ಲಿ ರಕ್ತಸ್ರಾವ ಕಾಣಿಸಿಕೊಂಡಿತ್ತು. ನೂರರಲ್ಲಿ ಕೇವಲ ಮೂವರಿಗೆ ಕಾಣಿಸಿಕೊಳ್ಳುವ ಕಾಯಿಲೆ ಇದು. ಅದಕ್ಕೆ ಯಾವುದೇ ರೀತಿಯ ಚಿಕಿತ್ಸೆ ಇಲ್ಲ. ಆದ್ದರಿಂದ ನಮ್ಮ ಇತಿಮಿತಿಯಲ್ಲಿ ಸ್ನೇಹ ಅವರನ್ನು ಬದುಕಿಸಿಕೊಳ್ಳಲು ಶಕ್ತಿ ಮೀರಿ ಪ್ರಯತ್ನ ಮಾಡಿದ್ದೇವೆ.

ಅದಾಗಿಯೂ ತಾಯಿ ಮಗುವನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ಆದರೆ ಇದರಲ್ಲಿ ಆಸ್ಪತ್ರೆ ವೈದ್ಯರಿಂದ ಯಾವುದೇ ನಿರ್ಲಕ್ಷ್ಯ ಆಗಿಲ್ಲ ಎಂಬ ಮಾಹಿತಿ ನೀಡಿದ್ದಾರೆ.

English summary
Six months pregnant women and baby died at Narayana Hrudayalaya Hospital in Mysore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X