ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಳೆಗಾಗಿ ಬರಿಗಾಲಲ್ಲಿ ಬೆಟ್ಟ ಏರಿದ ಹಿರೀಕ್ಯಾತನಹಳ್ಳಿ ಗ್ರಾಮಸ್ಥರು

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಜೂನ್ 27: ಗ್ರಾಮೀಣ ಪ್ರದೇಶದ ಜನರು ತಮ್ಮ ಊರಿನ, ಅದರಲ್ಲೂ ಮಳೆ ಕರುಣಿಸುವ ದೇವರ ಪೂಜೆಯನ್ನು ಮಾಡುವುದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ.

ಕೆಲವು ಊರುಗಳಲ್ಲಿ ಮುಂಗಾರು ಆರಂಭದ ಸಮಯದಲ್ಲಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಮಾಡಿ, ಮಳೆ- ಬೆಳೆ ಕರುಣಿಸುವಂತೆ ದೇವರಲ್ಲಿ ಬೇಡಿಕೊಳ್ಳಲಾಗುತ್ತದೆ. ಇದು ಹಿಂದಿನ ಕಾಲದಿಂದಲೂ ನಡೆದುಕೊಂಡು ಬಂದಿದ್ದು, ಈಗಲೂ ಮುಂದುವರಿಯುತ್ತಿದೆ.

ಹುಣಸೂರು ತಾಲೂಕಿನ ಹಿರೀಕ್ಯಾತನಹಳ್ಳಿ ಗ್ರಾಮದ ಜನರು ಪ್ರತಿ ವರ್ಷದಂತೆ ಈ ವರ್ಷವೂ ಸ್ಥಳೀಯ ಕುಂತಿ ಬೆಟ್ಟದಲ್ಲಿ ನೆಲೆಸಿರುವ ಕುಂತಮ್ಮ ದೇವರಿಗೆ ಪೂಜೆ ಮಾಡಿ, ಮಳೆ- ಬೆಳೆ ಆಗುವಂತೆ ಪ್ರಾರ್ಥಿಸಿದ್ದಾರೆ.

Prayer for rain, villagers climb hills with bare foot

ಪುರುಷರು ಮತ್ತು ಮಹಿಳೆಯರು ಬರಿಗಾಲಿನಲ್ಲಿ ಬೆಟ್ಟವನ್ನೇರಿ, ಪೂಜಾ ಕೈಂಕರ್ಯ ಮಾಡಿ, ಕುಂತಮ್ಮ ದೇವಿಯನ್ನು ಪ್ರಾರ್ಥಿಸಿದರೆ ಮಳೆ ಬಂದು ಜನ- ಜಾನುವಾರು ನೆಮ್ಮದಿಯಿಂದ ಬದುಕಲು ಸಾಧ್ಯ ಎಂಬುದು ನಂಬಿಕೆ. ಹೀಗಾಗಿ ಅಲ್ಲಿಗೆ ತೆರಳಿ ಪೂಜೆಯನ್ನು ಮಾಡುತ್ತಾರೆ.

ಹಿಂದಿನಿಂದಲೂ ನಡೆದು ಬಂದ ಸಂಪ್ರದಾಯದಂತೆ ಈ ಬಾರಿಯೂ ಗ್ರಾಮದ ಮಹಿಳೆಯರು ಮತ್ತು ಪುರುಷರು ಸ್ನಾನ ಮಾಡಿ, ಮಡಿಯನ್ನುಟ್ಟು, ಬರಿಗಾಲಿನಿಂದ ತಮಟೆ ವಾದ್ಯದೊಂದಿಗೆ ಮೆರವಣಿಗೆಯಲ್ಲಿ ತೆರಳಿ, ಬೆಟ್ಟ ಹತ್ತಿದರು. ಕುಂತಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.

Prayer for rain, villagers climb hills with bare foot

ಆ ನಂತರ ಅಲ್ಲಿಯೇ ಅಡುಗೆ ಮಾಡಿ, ಹಣ್ಣು- ತುಪ್ಪ ನೈವೇದ್ಯ ಮಾಡಿ, ದೇವರಿಗೆ ಅರ್ಪಿಸಿದರು. ಅಲ್ಲದೆ, ಸಾವಿರಾರು ಮಂದಿಗೆ ಸಿಹಿ ಊಟ ಬಡಿಸಿ, ದೇವರ ದರ್ಶನ ಪಡೆದರು. ಉತ್ತಮ ಮಳೆ ಬೀಳಲಿ ಎಂದು ಬೇಡಿಕೊಂಡರು.

English summary
Prayer for rain in Kunthi hills, Hunsur taluk by Hirekyatanahalli villagers. They climbed the hill with bare foot. This is the custom following by villagers from long time.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X