ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾಂಗ್ರೆಸ್-ಜೆಡಿಎಸ್ ಒಟ್ಟಾಗಿ ನನ್ನ ವಿರುದ್ಧ ಸ್ಪರ್ಧಿಸಲಿ: ಸಿಂಹ ಸವಾಲ್

By Manjunatha
|
Google Oneindia Kannada News

Recommended Video

ಕಾಂಗ್ರೆಸ್ - ಜೆಡಿಎಸ್ ಗೆ ಸವಾಲೆಸೆದ ಮೈಸೂರು ಕೊಡಗು ಸಂಸದ ಪ್ರತಾಪ್ ಸಿಂಹ | Oneindia Kannada

ಮೈಸೂರು, ಸೆಪ್ಟೆಂಬರ್ 05: ಕಾಂಗ್ರೆಸ್ ಹಾಗೂ ಜೆಡಿಎಸ್ ಒಟ್ಟಾಗಿ ನನ್ನ ವಿರುದ್ಧ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲಿ ಮೈಸೂರಿನಲ್ಲಿ ಬಿಜೆಪಿ ಬಲ ಏನೆನ್ನುವುದು ತೋರಿಸುತ್ತೇನೆ ಎಂದು ಸಂಸದ ಪ್ರತಾಪ್ ಸಿಂಹ ಸವಾಲು ಹಾಕಿದ್ದಾರೆ.

ಸ್ಥಳೀಯ ಚುನಾವಣೆಯಲ್ಲಿ ಬಿಜೆಪಿಯ ಪ್ರದರ್ಶನದ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ವಿಶ್ಲೇಷಣಾತ್ಮಕ ವಿಡಿಯೋ ಹಾಕಿದ್ದ ಅವರು, ವಿಡಿಯೋದಲ್ಲಿ ಈ ಸವಾಲು ಹಾಕಿದ್ದಾರೆ.

ಅತಂತ್ರವಾದ ಮೈಸೂರು ಮಹಾನಗರ ಪಾಲಿಕೆ, ಇನ್ನು ಪಕ್ಷಾಂತರ ಪರ್ವ ಶುರು! ಅತಂತ್ರವಾದ ಮೈಸೂರು ಮಹಾನಗರ ಪಾಲಿಕೆ, ಇನ್ನು ಪಕ್ಷಾಂತರ ಪರ್ವ ಶುರು!

ಸಿದ್ದರಾಮಯ್ಯ ಅವರು ಪ್ರತಾಪ್ ಸಿಂಹ ಅವರ ವಿರುದ್ಧ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂಬ ಸುದ್ದಿ ಹರಡಿತ್ತು. ಸಿದ್ದರಾಮಯ್ಯ ಅಲ್ಲಿ ಸ್ಪರ್ಧಿಸಿದರೆ ಜೆಡಿಎಸ್ ಬೆಂಬಲಿಸುತ್ತದೆ ಎಂದು ದೇವೇಗೌಡರು ಹೇಳಿದ್ದರು. ಹಾಗಾಗಿ ಪ್ರತಾಪ್ ಸಿಂಹ ಅವರು ಈಗ ಹಾಕಿರುವ ಸವಾಲು ಕುತೂಹಲ ಕೆರಳಿಸಿದೆ.

ಬಿಜೆಪಿಗೆ ಪೂರಕವಾದ ಫಲಿತಾಂಶ

ಬಿಜೆಪಿಗೆ ಪೂರಕವಾದ ಫಲಿತಾಂಶ

ವಿಡಿಯೋದಲ್ಲಿ, ಈ ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶ ಬಿಜೆಪಿಗೆ ಪೂರಕವಾಗಿಯೇ ಇದೆ ಎಂದಿರುವ ಅವರು, ಬಿಜೆಪಿಯ 69 ಶಾಸಕರಿದ್ದ ಕ್ಷೇತ್ರಗಳಲ್ಲಿ ಮಾತ್ರವೇ ಚುನಾವಣೆ ನಡೆದಿದೆ ಇನ್ನೂ 35 ಶಾಸಕರಿದ್ದ ಕಡೆ ಚುನಾವಣೆ ನಡೆದಿಲ್ಲ ಹಾಗಾಗಿ ಇದನ್ನು ಸಂಪೂರ್ಣ ಕರ್ನಾಟಕದ ಚುನಾವಣೆ ಎನ್ನಲು ಸಾಧ್ಯವಿಲ್ಲ ಎಂಬ ವಾದವನ್ನೇ ಅವರು ಮುಂದಿಟ್ಟಿದ್ದಾರೆ.

ಬಿಜೆಪಿ ಏರುಗತಿಯಲ್ಲಿದೆ

ಬಿಜೆಪಿ ಏರುಗತಿಯಲ್ಲಿದೆ

ಕಳೆದ ಲೋಕಸಭೆ ಚುನಾವಣೆ ನಡೆದಾಗಿಲಿಂದಲೂ ಬಿಜೆಪಿ ಏರುಗತಿಯಲ್ಲಿಯೇ ಸಾಗುತ್ತಿದ್ದು. ಬಿಜೆಪಿಯ ಹೆಸರು ಹೇಳದ ಜಿಲ್ಲೆಗಳಲ್ಲೂ ಇಂದು ನಮ್ಮ ಪಕ್ಷದ ಅಭ್ಯರ್ಥಿಗಳು ಗೆದ್ದುಬಂದಿದ್ದಾರೆ ಎಂದ ಪ್ರತಾಪ್ ಸಿಂಹ ಅದಕ್ಕೆ ಉದಾಹರಣೆಯಾಗಿ ಹಾಸನ ಜಿಲ್ಲೆ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿ ಸೊನ್ನೆಯಿಂದ 13 ಸ್ಥಾನಕ್ಕೇರಿರುವುದನ್ನು ಉದಾಹರಣೆಯಾಗಿ ನೀಡಿದರು.

ಪ್ರಶಾಂತ್ ಕಿಶೋರ್ 'ಐ ಪ್ಯಾಕ್' ಸಮೀಕ್ಷೆಯಲ್ಲಿ ಮೋದಿಗೆ ಜಯಪ್ರಶಾಂತ್ ಕಿಶೋರ್ 'ಐ ಪ್ಯಾಕ್' ಸಮೀಕ್ಷೆಯಲ್ಲಿ ಮೋದಿಗೆ ಜಯ

ಮೈಸೂರು ಪಾಲಿಕೆ ಅತಂತ್ರ

ಮೈಸೂರು ಪಾಲಿಕೆ ಅತಂತ್ರ

ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮೈಸೂರು ಪಾಲಿಕೆಯಲ್ಲಿ ಈ ಬಾರಿ ಅತಂತ್ರ ಸ್ಥಿತಿ ನಿರ್ಮಾಣವಾಗಿ ಆದರೆ 22 ಸೀಟು ಗೆದ್ದಿರುವ ಬಿಜೆಪಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಅಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಮಾಡಿಕೊಂಡು ಅಧಿಕಾರ ಹಿಡಿಯಲಿದ್ದಾರೆ.

ಬಿಜೆಪಿ 22 ಸ್ಥಾನ ಗೆದ್ದಿದೆ

ಬಿಜೆಪಿ 22 ಸ್ಥಾನ ಗೆದ್ದಿದೆ

ಮೈಸೂರು ಪಾಲಿಕೆ ಚುನಾವಣೆ ಫಲಿತಾಂಶದ ಬಗ್ಗೆ ಮಾತನಾಡಿದ ಪ್ರತಾಪ್ ಸಿಂಹ ಈ ಬಾರಿ ಬಿಜೆಪಿ 22 ಸ್ಥಾನ ಗೆದ್ದಿದೆ. ಒಬ್ಬ ಬಿಜೆಪಿಯ ಬಂಡಾಯ ಅಭ್ಯರ್ಥಿ ಗೆದ್ದಿದ್ದಾರೆ. ಆದರೆ ಕಳೆದ ಬಾರಿ 22 ಸ್ಥಾನ ಗೆದ್ದಿದ್ದ ಕಾಂಗ್ರೆಸ್ ಈ ಬಾರಿ 19 ಕ್ಕೆ ಕುಸಿದಿದೆ. ಜೆಡಿಎಸ್‌ 18 ಕ್ಕೆ ಕುಸಿದಿದೆ ಎಂದರು.

ಲೋಕಸಭೆ ಚುನಾವಣೆ 2019: ಪ್ರತಾಪ್ ಸಿಂಹ ಎದುರು ಸಿದ್ದರಾಮಯ್ಯ ಸ್ಪರ್ಧೆ?ಲೋಕಸಭೆ ಚುನಾವಣೆ 2019: ಪ್ರತಾಪ್ ಸಿಂಹ ಎದುರು ಸಿದ್ದರಾಮಯ್ಯ ಸ್ಪರ್ಧೆ?

ಮೋದಿ ಭೇಟಿಗೆ ಸಮಯ ಕೇಳಿದ್ದೇನೆ

ಮೋದಿ ಭೇಟಿಗೆ ಸಮಯ ಕೇಳಿದ್ದೇನೆ

ತಮ್ಮ ವಿಡಿಯೋದಲ್ಲಿ ಕೊಡಗಿನ ಬಗ್ಗೆಯೂ ಮಾತನಾಡಿದ ಸಿಂಹ ಅವರು, ಕೊಡಗಿನಲ್ಲಿ ಆಗಿರುವ ನಷ್ಟದ ಬಗ್ಗೆ ಈಗಾಗಲೇ ವರದಿ ತಯಾರಿಸಿದ್ದೇವೆ, ಮೋದಿ ಅವರ ಭೇಟಿಗೆ ಸಮಯ ಕೇಳಿದ್ದು ಇಂದು ಅಥವಾ ನಾಳೆ ಮೋದಿ ಅವರನ್ನು ಭೇಟಿ ಮಾಡಿ ಅನುದಾನಕ್ಕೆ ಮನವಿ ಮಾಡಲಾಗುವುದು ಎಂದು ಮಾಹಿತಿ ನೀಡಿದರು.

ಮೈಸೂರು ಮಹಾನಗರ ಪಾಲಿಕೆ ಚುನಾವಣೆ : ಪ್ರತಾಪ್ ಸಿಂಹ ಹೇಳಿದ್ದೇನು ?ಮೈಸೂರು ಮಹಾನಗರ ಪಾಲಿಕೆ ಚುನಾವಣೆ : ಪ್ರತಾಪ್ ಸಿಂಹ ಹೇಳಿದ್ದೇನು ?

English summary
Mysuru-Kodagu BJP MP Pratap Simha challenged congress-jds parties to fight jointly election against him in Mysuru. He said local body election result is showing good signs for BJP.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X