ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮುಖ್ಯಮಂತ್ರಿ ಮಾತಿಗೆ ರಾಜ ಮಾತೆ ಪ್ರಮೋದಾದೇವಿ ಎಂಥ ಉತ್ತರ!

By ಯಶಸ್ವಿನಿ ಎಂ.ಕೆ
|
Google Oneindia Kannada News

ಮೈಸೂರು, ಮಾರ್ಚ್ 14 : "ಯಾರ ಆಡಳಿತ ಹೇಗಿತ್ತು ಎಂಬುದು ಜನ ತೀರ್ಮಾನ ಮಾಡುತ್ತಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವ ಅರ್ಥದಲ್ಲಿ, ಯಾವ ಸಂದರ್ಭದಲ್ಲಿ ಇದನ್ನು ಹೇಳಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ಆದರೆ ಆಡಳಿತಗಳ ಬಗ್ಗೆ ಜನ ತೀರ್ಮಾನ ಕೊಡುತ್ತಾರೆ" ಎಂದು ಮೈಸೂರಿನ ರಾಜವಂಶಸ್ಥರಾದ ಪ್ರಮೋದಾ ದೇವಿ ಒಡೆಯರ್ ಹೇಳಿದ್ದಾರೆ.

ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಕಳೆದ ವಾರವಷ್ಟೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರಿನಲ್ಲಿ ಮಹಾರಾಜರ ನಂತರ ನಮ್ಮ ಸರಕಾರವೇ ಹೆಚ್ಚು ಕೆಲಸ ಮಾಡಿದ್ದು ಎಂಬ ಹೇಳಿಕೆ ನೀಡಿದ್ದರು. ಸದ್ಯ ಆ ಹೇಳಿಕೆ ಬಹುಚರ್ಚೆಗೆ ಗ್ರಾಸವಾಗಿದೆ. ಈ ಕುರಿತಾಗಿ ಬುಧವಾರ ರಾಜಮಾತೆ ಪ್ರಮೋದಾ ದೇವಿ ಒಡೆಯರ್ ಪ್ರತಿಕ್ರಿಯಿಸಿದ್ದಾರೆ.

ಯದುವಂಶದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಕೂಡ ಮಂಗಳವಾರ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿ, ಅಂದಿನ ಕಾಲಘಟ್ಟದ ಆಡಳಿತವೇ ಬೇರೆ, ಇವತ್ತಿನ ಕಾಲಘಟ್ಟದ ಆಡಳಿತವೇ ಬೇರೆ. ಯಾರ ಆಡಳಿತ ಹೇಗಿತ್ತು ಎಂಬುದು ಜನರ ತೀರ್ಮಾನಕ್ಕೆ ಬಿಟ್ಟದ್ದು ಎಂದು ಪ್ರತಿಕ್ರಿಯಿಸಿದ್ದರು.

Pramodadevi Wadiyar reaction to CM Siddaramaiah

ಸಿದ್ದರಾಮಯ್ಯ ಅವರ ಈ ಹೇಳಿಕೆ ಬಗ್ಗೆ ಸಂಸದ ಪ್ರತಾಪ್ ಸಿಂಹ, ಮಾಜಿ ಸಚಿವರಾದ ಎಚ್. ವಿಶ್ವನಾಥ್, ವಿ.ಶ್ರೀನಿವಾಸಪ್ರಸಾದ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಮೈಸೂರಿನಲ್ಲಿ ನೂತನವಾಗಿ ನಿರ್ಮಾಣ ಮಾಡಿರುವ ಜಯದೇವ ಆಸ್ಪತ್ರೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಈ ಹೇಳಿಕೆ ನೀಡಿದ್ದರು.

ಮೈಸೂರು ರಾಜರ ನಂತರ ಯಾವುದಾದರೂ ಸರಕಾರ ಮೈಸೂರಿನಲ್ಲಿ ಅಭಿವೃದ್ಧಿ ಕೆಲಸ ಮಾಡಿದೆ ಅಂದರೆ ಅದು ನಮ್ಮ ಸರಕಾರ ಮಾತ್ರ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದರು.

English summary
People will decide about this, Mysuru royal family member Pramodadevi Wadiyar reaction to CM Siddaramaiah about his recent remark about contribution to Mysuru. "After King rule in Mysuru, Congress government contributed a lot" recently Siddarmaiah said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X