ನಂಜನಗೂಡಲ್ಲಿ ಕೋಳಿ ಮೇವು ಕದ್ದವನು ಸಿಕ್ಕಿಬಿದ್ದ!

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮೈಸೂರು, ಡಿಸೆಂಬರ್ 22: ಕೋಳಿ ಫಾರಂವೊಂದರಲ್ಲಿ ಒಂದು ಲಕ್ಷ ರುಪಾಯಿ ಮೌಲ್ಯದ ಮೇವನ್ನು ಕಳ್ಳತನ ಮಾಡಿದ್ದ ಆರೋಪಿಯನ್ನು ನಂಜನಗೂಡು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ. ವಳಗೆರೆ ಗ್ರಾಮದ ಶಿಲ್ಪಶ್ರೀ ಕೋಳಿಫಾರಂನ ಸುಗುಣ ಫುಡ್ಸ್ ಕಂಪನಿಯಲ್ಲಿ ಮೇಲ್ವಿಚಾರಕನಾಗಿ ಕಾರ್ಯ ನಿರ್ವಹಿಸುತ್ತಿದ್ದ ಅಣ್ಣಪ್ಪನಾಯಕ ಬಂಧಿತ.

ಮತ್ತೊಬ್ಬ ನಾಗಮಂಗಲದ ಯೋಗೀಶ್ ನಾಪತ್ತೆಯಾಗಿದ್ದು, ಆತನ ಬಂಧನಕ್ಕಾಗಿ ಬಲೆ ಬೀಸಲಾಗಿದೆ. ಕಳೆದ ಹಲವು ತಿಂಗಳಿನಿಂದ ಸುಗುಣ ಫುಡ್ಸ್ ಕಂಪನಿಯಲ್ಲಿ ಮೇಲ್ವಿಚಾರಕನಾಗಿ ಕೆಲಸ ನಿರ್ವಹಿಸುತ್ತಿದ್ದ ಅಣ್ಣಪ್ಪನಾಯಕ ಮತ್ತು ಆತನ ಸ್ನೇಹಿತ ನಾಗಮಂಗಲದ ಯೋಗೀಶ್ ಸ್ನೇಹಿತರಾಗಿದ್ದು, ಆಗಾಗ ಈ ಕಂಪನಿಗೆ ಬರುತ್ತಿದ್ದ.[ಮೈಸೂರಿನಲ್ಲಿ ಬಂದೂಕು ಸಹಿತ ಜಿಂಕೆ ಮಾಂಸ ವಶ: ಆರೋಪಿ ಪರಾರಿ]

Crime

ಈ ನಡುವೆ ಇವರಿಬ್ಬರು ಸೇರಿ 75 ಕೆ.ಜಿ.ಯ 48 ಮೂಟೆ ಕೋಳಿ ಮೇವನ್ನು ನಾಗಮಂಗಲಕ್ಕೆ ಸಾಗಿಸಿದ್ದಾರೆ. ಸಂಸ್ಥೆಯಲ್ಲಿ ಕೋಳಿಗಳಿಗೆ ಸಂಗ್ರಹಿಸಿಟ್ಟ ಆಹಾರ ಕಳವಾಗಿರುವುದು ಗೋಚರಿಸುತ್ತಿದ್ದಂತೆ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು.
ಎಸ್‍ಐ ಪುನೀತ್, ಎಎಸ್‍ಐ ರಾಮಕುಮಾರ್, ಸಿಬ್ಬಂದಿ ವೆಂಕಟೇಶ್, ರಾಜು, ಚಂದ್ರು, ಕೃಷ್ಣ ರವಿ ಮೊದಲಾದವರ ತಂಡ ರಚಿಸಿ, ಕಾರ್ಯಾಚರಣೆ ಆರಂಭಿಸಲಾಗಿತ್ತು.

ತನಿಖೆ ನಡೆಸಿದ ಎಸ್‍ಐ ಪುನೀತ್ ತಂಡಕ್ಕೆ ಅಣ್ಣಪ್ಪನಾಯಕನ ಮೇಲೆ ಸಂಶಯ ಬಂದಿತ್ತು. ಆತನನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಮಾಡಿದ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ. ಆತ ಮತ್ತು ಸ್ನೇಹಿತ ಯೋಗೀಶ್ ನಾಗಮಂಗಲದಲ್ಲಿ ಒಂದು ಲಕ್ಷ ಮೌಲ್ಯದ 48 ಚೀಲ ಕೋಳಿಗಳ ಮೇವವನ್ನು ಅಡಸಿಗಿಟ್ಟಿದ್ದ ಜಾಗವನ್ನು ಪತ್ತೆ ಹಚ್ಚಿ, ಮಾಲನ್ನು ವಶಪಡಿಸಿಕೊಳ್ಳಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Thief who theft feed from poultry farm in Nanjangud arrested by police. His accomplice also taken into custody.
Please Wait while comments are loading...