ಅ.20ಕ್ಕೆ ಮೈಸೂರು ರಂಗಸಮುದ್ರದಲ್ಲಿ ಅಂಚೆ ಸಂತೆ

Posted By: Prithviraj
Subscribe to Oneindia Kannada

ಮೈಸೂರು, ಅಕ್ಟೋಬರ್, 18: ನಂಜನಗೂಡು ಅಂಚೆ ವಿಭಾಗದ ಅಂಚೆ ಅಧೀಕ್ಷಕರ ಕಚೇರಿ ವತಿಯಿಂದ ಮೈಸೂರು ಜಿಲ್ಲೆಯ ಬನ್ನೂರು ರಂಗಸಮುದ್ರದಲ್ಲಿ ಅಕ್ಟೋಬರ್ 20 ರಂದುಅಂಚೆ ಸಂತೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಅಂಚೆ ವಿಭಾಗದ ಅಧೀಕ್ಷಕ ಜಿ.ಸಿ. ಶ್ರೀನಿವಾಸ್ ತಿಳಿಸಿದ್ದಾರೆ.

Postal Fair at Mysuru Ranga samudra

ಈ ಸಂತೆಯಲ್ಲಿ ಅಂಚೆ ಕಚೇರಿ ಉಳಿತಾಯ ಖಾತೆ, ಅವರ್ತಕ ಖಾತೆ, ಸುಕನ್ಯಾ ಸಮೃದ್ಧಿ ಖಾತೆ, ಸಾರ್ವಜನಿಕ ಭವಿಷ್ಯ ನಿಧಿ ಖಾತೆ, ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ, ಪ್ರಧಾನ ಮಂತ್ರಿ ಜೀವನ ಸುರಕ್ಷಾ ಬಿಮಾ ಯೋಜನೆ, ಅಟಲ್ ಪಿಂಚಣಿ ಯೋಜನೆ, ಗ್ರಾಮೀಣ ಅಂಚೆ, ಜೀವ ವಿಮೆ ಮತ್ತು ಅಂಚೆ ಜೀವಾ ವಿಮೆ ಮುಂತಾದ ಅಂಚೆ ಯೋಜನೆಗಳನ್ನು ಸ್ಥಳದಲ್ಲೇ ಪರಿಶೀಲಿಸಿ ಸ್ವೀಕರಿಸಲಾಗುವುದು. ಎಂದು ಅವರು ತಿಳಿಸಿದರು.

ಮಾಸಾಶನ ಸೌಲಭ್ಯ: ಆಧಾರ್ ಜೋಡಣೆ ಕಡ್ಡಾಯ

ಸಾಮಾಜಿಕ ಭದ್ರತಾ ಯೋಜನೆಯಡಿ ವೃದ್ದಾಪ್ಯ, ಸಂದ್ಯಾಸುರಕ್ಷಾ, ವಿಧವಾ, ಮೈತ್ರಿ, ಮನಸ್ವಿನಿ ಮತ್ತು ಅಂಗವಿಕಲ ಮಾಸಾಶನ ಪಡೆಯುತ್ತಿರುವ ಫಲಾನುಭವಿಗಳು ದಿನಾಂಕ 21-10-2016 ರೊಳಗಾಗಿ ಆಧಾರ್ ಸಂಖ್ಯೆಯನ್ನು ಕಡ್ಡಾಯವಾಗಿ ಮಾಸಾಶನದೊಂದಿಗೆ ಜೋಡಿಸಬೇಕು ಎಂದು ಮೈಸೂರಿನ ಹುಣಸೂರು ತಾಲ್ಲೂಕು ತಹಶೀಲ್ದಾರ್ ಕಚೇರಿ ತಿಳಿಸಿದೆ.

Postal Fair at Mysuru Ranga samudra

ಫಲಾನುಭವಿಗಳು ಆಧಾರ್ ಪ್ರತಿಯೊಂದಿಗೆ ಮಾಸಾಶನ ಮಂಜೂರಾತಿ ಆದೇಶದ ಪ್ರತಿಯನ್ನು ಲಗತ್ತಿಸಿ ಅ. 21 ರೊಳಗೆ ಹುಣಸೂರು ಹಳೆಯ ತಾಲ್ಲೂಕು ಕಚೇರಿಯ ಆವರಣದಲ್ಲಿರುವ ಕಸಬಾ ರಾಜಸ್ವ ನಿರೀಕ್ಷಕರಿಗೆ ಮತ್ತು ಗ್ರಾಮಾಂತರ ಪ್ರದೇಶದವರು ಆಯಾ ಹೋಬಳಿ ನಾಡಕಚೇರಿಗೆ ನೀಡಲು ತಿಳಿಸಲಾಗಿದೆ.

ಆಧಾರ್ ಸಂಖ್ಯೆ ಜೋಡಣೆ ತಪ್ಪಿದಲ್ಲಿ ಮಾಸಾಶನ ಸ್ಥಗಿತಗೊಳ್ಳುತ್ತದೆ ಎಂದು ಹುಣಸೂರು ತಾಲ್ಲೂಕು ತಹಶೀಲ್ದಾರ್ ಅವರು ತಿಳಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Nanjanagudu Postal department division conducting postal fair at Bannuru Ranga samudra village on Oct 20.
Please Wait while comments are loading...