ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಖಾಸಗಿ ವೈದ್ಯರ ಮುಷ್ಕರಕ್ಕೆ ಮೈಸೂರಲ್ಲಿ ನೀರಸ ಪ್ರತಿಕ್ರಿಯೆ

By Yashaswini
|
Google Oneindia Kannada News

ಮೈಸೂರು, ಜುಲೈ 28 : ಕೇಂದ್ರ ಸರ್ಕಾರದ ರಾಷ್ಟ್ರೀಯ ವೈದ್ಯಕೀಯ ಆಯೋಗ ವಿಧೇಯಕ ವಿರೋಧಿಸಿ ಭಾರತೀಯ ವೈದ್ಯ ಪರಿಷತ್‌ ಮುಷ್ಕರ ಆರಂಭಿಸಿದೆ. ಈ ಮುಷ್ಕರಕ್ಕೆ ಮೈಶೂರಿನಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಬೆಳಿಗ್ಗೆ 6 ರಿಂದಲೇ ಪ್ರತಿಭಟನೆ ಆರಂಭವಾಗಿದ್ದು, ಸಂಜೆ 6 ಗಂಟೆವರೆಗೂ ಬಂದ್ ಮಾಡಲಾಗುತ್ತದೆ. ಎನ್‌ಎಂಸಿ ವಿಧೇಯಕವನ್ನು ಭಾರತೀಯ ವೈದ್ಯಕೀಯ ಸಂಘ ತೀವ್ರವಾಗಿ ವಿರೋಧಿಸಿದ್ದು, ದೇಶದೆಲ್ಲೆಡೆ ಮುಷ್ಕರ ಹಮ್ಮಿಕೊಳ್ಳುವ ಮೂಲಕ ಕರಾಳ ದಿನವನ್ನಾಗಿ ಆಚರಿಸುತ್ತಿದೆ. ರಾಜ್ಯದಲ್ಲಿ ಖಾಸಗಿ ಆಸ್ಪತ್ರೆ ವೈದ್ಯರ ಮುಷ್ಕರಕ್ಕೆ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಖಾಸಗಿ ವೈದ್ಯರ ದಿಢೀರ್ ಪ್ರತಿಭಟನೆ: ರೋಗಿಗಳ ಪರದಾಟಖಾಸಗಿ ವೈದ್ಯರ ದಿಢೀರ್ ಪ್ರತಿಭಟನೆ: ರೋಗಿಗಳ ಪರದಾಟ

ಮೈಸೂರಿನ 100 ಕ್ಕೂ ಹೆಚ್ಚು ಖಾಸಗಿ ಆಸ್ಪತ್ರೆಗಳ ಹೊರರೋಗಿ ವಿಭಾಗ ಕಾರ್ಯ ಸ್ಥಗಿತವಾಗಿದ್ದು, ಒಳರೋಗಿಗಳು, ತುರ್ತು ಸೇವೆಗಳಿಗೆ ಅಡ್ಡಿ, ಆತಂಕ ಇಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಎಂದಿನಂತೆ ಸೇವೆ ಸಲ್ಲಿಸಲಿವೆ. ಜಿಲ್ಲೆಯಲ್ಲಿ ಅಪರ ಜಿಲ್ಲಾಧಿಕಾರಿ ಯೋಗೀಶ್ ರವರನ್ನು ಭೇಟಿಯಾಗಿ ಐಎಂಎ ಸದಸ್ಯರು ಕಾಯ್ದೆ ಜಾರಿಯಾಗದಂತೆ ಮನವಿ ಸಲ್ಲಿಸಿದರು.

Poor response for doctors strike in Mysuru

ಭವಿಷ್ಯದ ದೃಷ್ಟಿಯಿಂದ ವೈದ್ಯಕೀಯ ವೃತ್ತಿಗೆ ಸ್ವಾಯತ್ತತೆ ದೊರಕಿಸಿಕೊಡಲು ಹಾಗೂ ಭವಿಷ್ಯದಲ್ಲಿ ಯುವ ವೈದ್ಯರು ವೃತ್ತಿಯನ್ನು ಗೌರವಯುತವಾಗಿ ಜನರಿಗೆ ಸೇವೆ ಸಲ್ಲಿಸುವ ನಿಟ್ಟಿನಲ್ಲಿ ನಡೆಸಿ ಕೊಂಡು ಹೋಗಲು ಭಾರತೀಯ ವೈದ್ಯಕೀಯ ಸಂಘ ಈ ನಿಲುವಿಗೆ ಬಂದಿದ್ದು, ಕೇಂದ್ರ ಸರ್ಕಾರ ನಾಮ ನಿರ್ದೇಶನದ ಮೂಲಕ ಸದಸ್ಯರನ್ನು ನೇಮಕ ಮಾಡಲು ನಿರ್ಧರಿಸಿ, ರಾಜ್ಯದ ಹಕ್ಕನ್ನು ಕಿತ್ತುಕೊಳ್ಳು ತ್ತಿದೆ ಎಂದು ಮೈಸೂರು ಐಎಂಎ ಅಧ್ಯಕ್ಷ ವಿಶ್ವೇಶ್ವರಯ್ಯ ಇದೇ ವೇಳೆ ಆರೋಪಿಸಿದರು.

English summary
All India private hospitals strike called by Indian Medical association has received poor response in Mysuru on Saturday. All most private hospitals were worked as usual in the city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X