ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಖಡ್ಗವಿಟ್ಟು ದಸರಾ ಖಾಸಗಿ ದರ್ಬಾರ್ ಆಚರಣೆ

|
Google Oneindia Kannada News

ಮೈಸೂರು, ಸೆ. 10 : ಈ ಬಾರಿಯ ಮೈಸೂರು ದಸರಾದಲ್ಲಿ ಖಾಸಗಿ ದರ್ಬಾರಿ ನಡೆಯವುದಿಲ್ಲವೇ? ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಸಿಂಹಾಸನದ ಮೇಲೆ ಖಡ್ಗವನ್ನು ಇಟ್ಟು ಅದಕ್ಕೆ ಪೂಜೆ ಮಾಡುವ ಮೂಲಕ ದಸರಾ ಆಚರಣೆ ಮಾಡಲಾಗುತ್ತದೆ ಎಂದು ರಾಣಿ ಪ್ರಮೋದಾ ದೇವಿ ಅವರು ತಿಳಿಸಿದ್ದಾರೆ.

ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಮರಣದ ನಂತರ ಅವರ ಉತ್ತರಾಧಿಕಾರಿಗಳು ಖಾಸಗಿ ದರ್ಬಾರ್ ನಡೆಸಬೇಕಾಗಿತ್ತು. ಆದರೆ, ಅರಮನೆಯ ವಿವಾದಗಳು ಬಗೆಹರಿಯುವ ತನಕ ಉತ್ತರಾಧಿಕಾರಿ ನೇಮಕ ಮಾಡುವುದಿಲ್ಲ ಎಂದು ರಾಣಿ ಪ್ರಮೋದಾ ದೇವಿ ಅವರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ.

Mysore Dasara

ಆದ್ದರಿಂದ ಖಾಸಗಿ ದರ್ಬಾರ್ ಯಾರು ನಡೆಸುತ್ತಾರೆ? ಎಂಬ ಬಗ್ಗೆ ಪ್ರಶ್ನೆ ಎದ್ದಿತ್ತು. ಸದ್ಯ ರಾಣಿ ಪ್ರಮೋದಾ ದೇವಿ ಅವರು ಈ ಕುರಿತ ಗೊಂದಲಗಳಿಗೆ ತೆರೆ ಎಳೆದಿದ್ದು, ಸಿಂಹಾಸನದ ಮೇಲೆ ಖಡ್ಗವನ್ನು ಇಟ್ಟು ದಸರಾ ಆಚರಣೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ. [ಈ ಬಾರಿ ಖಾಸಗಿ ದರ್ಬಾರ್ ಇಲ್ಲ]

ದಸರಾದ ಪ್ರಮುಖ ಆಕರ್ಷಣೆಯಾದ ವಜ್ರಮುಷ್ಟಿ ಕಾಳಗ ನಡೆಯುವ ಬಗ್ಗೆಯೂ ಗೊಂದಲ ಉಂಟಾಗಿತ್ತು. ಆದರೆ, ಮಂಗಳವಾರ ರಾಣಿ ಪ್ರಮೋದಾ ದೇವಿ ಅವರನ್ನು ಭೇಟಿ ಮಾಡಿದ ಕುಸ್ತಿಪಟುಗಳಿಗೆ ರಾಣಿ ಅವರು, ವಜ್ರಮುಷ್ಟಿ ಕಾಳಗ ನಡೆಸುವುದಾಗಿ ಭರವಸೆ ನೀಡಿದ್ದಾರೆ. ಈ ಬಾರಿ ಆಯುಧ ಪೂಜೆ ದಿನದಂದು ವಜ್ರಮುಷ್ಟಿ ಕಾಳಗ ನಡೆಸುವ ಸಾಧ್ಯತೆ ಇದೆ. [ಅರಮನೆ ಸಂಕಷ್ಟ ನೆನೆದು ಕಣ್ಣೀರಿಟ್ಟ ಮೈಸೂರು ರಾಣಿ]

ಇಂದು ಗಜಪಡೆಗಳ ಆಗಮನ : ಮೈಸೂರು ದಸರಾದಲ್ಲಿ ಪಾಲ್ಗೊಳ್ಳುವ ಗಜಪಡೆಗಳ ಎರಡನೇ ತಂಡ ಬುಧವಾರ ಸಂಜೆ ಮೈಸೂರಿಗೆ ಆಗಮಿಸಲಿವೆ. ಶ್ರೀರಾಮ, ಹರ್ಷ, ವಿಕ್ರಮ, ಗೋಪಿ, ಗೋಪಾಲಸ್ವಾಮಿ ಮತ್ತು ದುರ್ಗಾಪರಮೇಶ್ವರಿ ಆನೆಗಳು ಮೈಸೂರಿಗೆ ಎರಡನೇ ತಂಡದಲ್ಲಿ ಆಗಮಿಸಲಿವೆ. [ದಸರಾ ಆನೆಗಳ ಬಯೋಡೇಟಾ]

English summary
Pramoda Devi Wodeyar said, Mysore special pooja will organized for Sword of Wodeyar during private durbar in Mysore Dasara 2014.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X