ಮೈಸೂರಿನ ವಿದ್ಯಾರ್ಥಿನಿಗೆ 9 ಸಾವಿರ ದಂಡ ಜಡಿದ ಪೊಲೀಸರು

By: ಯಶಸ್ವಿನಿ ಎಂ.ಕೆ
Subscribe to Oneindia Kannada

ಮೈಸೂರು, ಫೆಬ್ರವರಿ 7: ಒಂದೇ ದ್ವಿಚಕ್ರ ವಾಹನದಲ್ಲಿ ನಾಲ್ವರು ವಿದ್ಯಾರ್ಥಿನಿಯರು ಹೆಲ್ಮೆಟ್ ಧರಿಸದೆ ಪ್ರಯಾಣಿಸುತ್ತಿದ್ದ ವೇಳೆ ಅವರನ್ನು ತಪಾಸಣೆಗೊಳಪಡಿಸಿದ ಪೊಲೀಸರಿಗೆ ಆಶ್ಚರ್ಯ ಕಾದಿತ್ತು. ಏಕೆಂದರೆ ವಿದ್ಯಾರ್ಥಿನಿ ಚಾಲನೆ ಮಾಡುತ್ತಿದ್ದ ವಾಹನದ ಮೇಲೆ ಬರೋಬ್ಬರಿ 64 ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ದಾಖಲಾಗಿದ್ದವು. ಅದಕ್ಕೆ ವಿದ್ಯಾರ್ಥಿನಿಯ ಪೋಷಕರು ರು.9.100 ದಂಡ ಕಟ್ಟಿರುವ ಘಟನೆ ಮೈಸೂರಿನಲ್ಲಿ ಜರುಗಿದೆ.

ನಗರದ ಮರಿಮಲ್ಲಪ್ಪ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿರುವ ನಾಲ್ವರು ವಿದ್ಯಾರ್ಥಿನಿಯರು ಸಂಖ್ಯಾಫಲಕವಿಲ್ಲದ ಹೋಂಡಾ ಆಕ್ಟೀವಾ ವಾಹನದಲ್ಲಿ ಹೆಲ್ಮೆಟ್ ಧರಿಸದೆ ಮೆಟ್ರೋಪೋಲ್ ಹೋಟೆಲ್ ವೃತ್ತದ ಬಳಿ ತೆರಳುತ್ತಿದ್ದರು. ಇದನ್ನು ಗಮನಿಸಿದ ಸಂಚಾರ ವಿಭಾಗದ ಪೊಲೀಸರು ದಾಸಪ್ಪ ವೃತ್ತದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸರಿಗೆ ತಿಳಿಸಿದರು. ಅದರಂತೆ ದಾಸಪ್ಪ ವೃತ್ತದಲ್ಲಿದ್ದ ಸಂಚಾರ ವಿಭಾಗದ ಪೇದೆ ವಾಹನವನ್ನು ತಡೆದಿದ್ದಾರೆ. ನಂತರ ಅವರನ್ನು ದೇವರಾಜ ಸಂಚಾರ ಪೊಲೀಸ್ ಠಾಣೆಗೆ ಕರೆದೊಯ್ದು ಪೇದೆ ಇನ್‍ಸ್ಪೆಕ್ಟರ್ ಸಂದೇಶ್ ಕುಮಾರ್ ಅವರ ಮುಂದೆ ಹಾಜರು ಪಡಿಸಿದ್ದಾರೆ.[ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣ ಮಾಹಿತಿಗೆ ಆಪ್]

Police impose heavy fine:who violated traffic rules in mysuru

ವಿಚಾರಣೆಗೆ ಮುಂದಾದ ಇನ್ಸ್ ಪೆಕ್ಟರ್, ವಾಹನದ ಸಂಖ್ಯಾ ಫಲಕ ಕೇಳಿದ್ದಾರೆ. ವಿಚಲಿತರಾದ ವಿದ್ಯಾರ್ಥಿನಿ ಸಿಸಿಟಿವಿ ಕ್ಯಾಮೆರಾದಲ್ಲಿ ವಾಹನ ಸಂಖ್ಯೆ ನಮೂದಾಗುವ ಕಾರಣ ವಾಹನದ ಡಿಕ್ಕಿಯಲ್ಲಿ ಇಟ್ಟಿರುವುದಾಗಿ ತಿಳಿಸಿದ್ದಾರೆ.[ಸಂಚಾರಿ ನಿಯಮ ಪಾಲಿಸದಿದ್ರೆ ಕೋರ್ಟ್‌ಗೆ ಹೋಗಿ ದಂಡ ಕಟ್ಟಿ]

ನಂತರ ಪೊಲೀಸರು ಆಕೆಯ ವಾಹನದ ಸಂಖ್ಯೆಯನ್ನು ಪೊಲೀಸ್ ಅಂತರ್ಜಾಲದಲ್ಲಿ ಪರಿಶೀಲನೆ ನಡೆಸಿದಾಗ ಆಕೆ ಕಳೆದ ಆರು ತಿಂಗಳ ಅವಧಿಯಲ್ಲಿ 64 ಬಾರಿ ಸಂಚಾರ ನಿಯಮ ಉಲ್ಲಂಘಿಸಿ ನೋಟಿಸ್ ಕಳುಹಿಸಿರುವ ವಿವರ ಅದರಲ್ಲಿತ್ತು. ಇದರಿಂದಾಗಿ ವಾಹನದ ಮಾಲೀಕರು 6,400 ರೂ. ದಂಡ ಪಾವತಿಸಬೇಕು. ಏಕೆಂದರೆ ವಾಹನ ಕೂಡ ಆಕೆಯ ಹೆಸರಿನಲ್ಲಿರಲಿಲ್ಲ..!

Police impose heavy fine:who violated traffic rules in mysuru

ಕೂಡಲೆ ಪೋಷಕರನ್ನು ಕರೆಸುವಂತೆ ಸೂಚನೆ ನೀಡಿದರು. ಆದರೆ, ವಿದ್ಯಾರ್ಥಿನಿಯು ಪೋಷಕರನ್ನು ಠಾಣೆಗೆ ಕರೆಸಲಿಲ್ಲ. ಬದಲಾಗಿ ತನಗೆ ಪರಿಚಯವಿರುವ ಕೆಲ ಯುವಕರನ್ನು ಠಾಣೆಗೆ ಕರೆಸಿ ಇನ್‍ಸ್ಪೆಕ್ಟರ್ ಅವರ ಮನವೊಲಿಸುವ ಕೆಲಸ ಮಾಡಿದಳು. ಆದರೆ, ಅದಕ್ಕೊಪ್ಪದ ಪೊಲೀಸರು, ವಾಹನದ ಮಾಲೀಕರನ್ನು ನಾವೇ ಹುಡುಕಿ ಕರೆಸುತ್ತೇವೆ ಎಂದು ಕಳುಹಿಸಿದರು.[ಈ ಟ್ರಾಫಿಕ್ ಪೊಲೀಸ್ ತೋರಿದ ಮಾನವೀಯತೆ ಎಂತದ್ದು ನೋಡಿ!]

ಈ ಕುರಿತು ಮಾತನಾಡಿದ ಇನ್‍ಸ್ಪೆಕ್ಟರ್ ಸಂದೇಶ್ ಕುಮಾರ್, ಪೋಷಕರು ತಮ್ಮ ಅಪ್ರಾಪ್ತ ಮಕ್ಕಳಿಗೆ ವಾಹನವನ್ನು ನೀಡುವುದು ಸರಿಯಲ್ಲ. ಕಾಲೇಜಿಗೆ ಕಳುಹಿಸಿದರೆ ಸಾಕು ಎಂಬ ಭಾವನೆಯನ್ನು ಬಿಟ್ಟು, ಆಗಾಗ್ಗೆ ಅವರನ್ನು ಗಮನಿಸುವ ಕೆಲಸ ಮಾಡಬೇಕು. ಕಾಲೇಜಿನಲ್ಲಿ ಪಾಠ ಹೇಳುವ ಗುರುಗಳೂ ಈ ಕುರಿತು ಎಚ್ಚರಿಕೆ ವಹಿಸಬೇಕು ಎಂದರು.

ವಾಹನ ಮಾಲೀಕರಾದ ಹಾಗೂ ಆರ್‍ಎಂಸಿ ಮಾರುಕಟ್ಟೆಯಲ್ಲಿ ತರಕಾರಿ ವ್ಯಾಪಾರಿ ಬಾಲಕಿಯ ತಂದೆ ದೇವರಾಜ ಪೊಲೀಸ್ ಠಾಣೆಗೆ ವಾಹನದ ದಾಖಲೆಗಳೊಡನೆ ಹಾಜರಾದರು. ಅವರೊಂದಿಗೆ ಮಾತನಾಡಿದ ಇನ್‍ಸ್ಪೆಕ್ಟರ್ ಸಂದೇಶ್, ನಿಮ್ಮ ಮಗಳು ಅಪ್ರಾಪ್ತಳು ಎಂದು ತಿಳಿದಿದ್ದರೂ ವಾಹನ ಚಾಲನೆ ಮಾಡಲು ಅನುಮತಿ ಏಕೆ ನೀಡಿದಿರಿ ಎಂದರು.

Police impose heavy fine:who violated traffic rules in mysuru

ಚಾಲನ ಪರವಾನಗಿ ಹೊಂದಿರದ ಮಗಳಿಗೆ ವಾಹನ ನೀಡಿದ ತಪ್ಪಿಗೆ ರು.2 ಸಾವಿರ ದಂಡ ಪಾವತಿಸುವಂತೆ ಸೂಚನೆ ನೀಡಿದ್ದಾರೆ. ನಂತರ ವಾಹನದಲ್ಲಿ ನಾಲ್ಕು ಮಂದಿ ಕುಳಿತಿದ್ದ ತಪ್ಪಿಗೆ 100 ರೂ, ಹೆಲ್ಮೆಟ್ ಧರಿಸದಿರುವುದಕ್ಕಾಗಿ ರು.200, ಅತಿ ವೇಗ ಚಾಲನೆಗಾಗಿ ರು.100 ಚಾಲನ ಪರವಾನಗಿ ಹೊಂದಿಲ್ಲದಿರುವುದಕ್ಕಾಗಿ ರು.300 ದಂಡ ಹಾಗೂ ಹಿಂದಿನ ಸಂಚಾರ ನಿಯಮ ಉಲ್ಲಂಘನೆಯ ಕಾರಣಕ್ಕಾಗಿ 6.400 ದಂಡ ಸೇರಿದಂತೆ ಒಟ್ಟು ರು. 9.100 ದಂಡ ಪಾವತಿಸಿಕೊಂಡು ವಾಹನವನ್ನು ಅವರ ಸುಪರ್ದಿಗೆ ನೀಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Police impose heavy fine on the parents of those students who violated traffic rules in Mysuru.
Please Wait while comments are loading...