• search
For mysuru Updates
Allow Notification  

  ಮೈಸೂರು: ಗನ್ ತೋರಿಸಿ ಹೆದರಿಸುತ್ತಿದ್ದ ಬಿಜೆಪಿ ಕಾರ್ಯಕರ್ತನ ಬಂಧನ

  By ಯಶಸ್ವಿನಿ ಎಂ.ಕೆ
  |

  ಮೈಸೂರು, ಮಾರ್ಚ್ 3 : ಅಕ್ರಮ ಶಸ್ತ್ರಾಸ್ತ ಹೊಂದಿದ್ದ ಮೂವರನ್ನು ಬಂಧಿಸಿರುವ ಮೈಸೂರಿನ ನಂಜನಗೂಡು ಪೊಲೀಸರು, ಬಂಧಿತರಿಂದ 1 ಪಿಸ್ತೂಲ್ ಮತ್ತು 12 ಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.

  ಖಚಿತ ವರ್ತಮಾನದ ಮೇರೆಗೆ ಸಿಪಿಐ ಗೋಪಾಲಕೃಷ್ಣ ಅವರ ನೇತೃತ್ವದ ತಂಡ ಪಟ್ಟಣದ ಊಟಿ ರಸ್ತೆಯ ಚರ್ಚ್ ಹಿಂಭಾಗದ ಬಡಾವಣೆಯಲ್ಲಿ ವ್ಯವಹಾರ ನಡೆಸುತ್ತಿದ್ದ ಶಂಕರಪುರದ ಧನರಾಜ್ ಬೂಲಾ, ನೀಲಕಂಠ ನಗರ ನಿವಾಸಿ ಸಾದಿಕ್ ಖಾನ್, ಷಹನ್ ನನ್ನು ಬಂಧಿಸಿ, ಅವರ ಬಳಿ ಇದ್ದ ಪಿಸ್ತೂಲನ್ನು ವಶಪಡಿಸಿಕೊಂಡಿದೆ.

  ಮೈಸೂರಿನ ಕೇಂದ್ರ ಕಾರಾಗೃಹದಲ್ಲಿ 2 ಕೊಲೆ ಪಕರಣಗಳಲ್ಲಿ ಶಿಕ್ಷೆ ಅನುಭವಿಸುತ್ತಿರುವ ಅಫ್ಜರ್ ಖಾನ್ ಎಂಬಾತನ ಜತೆ ಈ ಮೂವರೂ ನಂಟು ಬೆಳೆಸಿಕೊಂಡಿದ್ದಾರೆ. ಆತನ ಮೂಲಕವೇ ಅಕ್ರಮ ಶಸ್ತ್ರಾಸ್ತವನ್ನು ಪಡೆದುಕೊಂಡಿದ್ದಾರೆ ಎಂದು ತನಿಖೆಯಿಂದ ಬೆಳಕಿಗೆ ಬಂದಿದೆ.

  ಧನರಾಜ್ ಬೂಲಾಗೆ ಅಫ್ಜರ್ ಖಾನ್ ಉತ್ತರ ಪ್ರದೇಶದ ಶಸ್ತ್ರಾಸ್ತ ಮಾರಾಟಗಾರನ ವಿಳಾಸ ನೀಡಿದ್ದಾನೆ. ಪಿಸ್ತೂಲ್ ಮತ್ತು ಗುಂಡುಗಳು ಧನರಾಜ್ ಬೂಲಾ ಕೈಸೇರಲು ನೆರವಾಗಿದ್ದಾನೆ. ಅಕಮ ಶಸ್ತ್ರಾಸ್ತ್ರ ಪ್ರಕರಣದ ಹಿಂದೆ ದೊಡ್ಡ ಜಾಲವೇ ಕೆಲಸ ಮಾಡುತ್ತಿದೆ ಎನ್ನಲಾಗಿದೆ.

  ಆರೋಪಿಗಳನ್ನು ಸತತ ವಿಚಾರಣೆ ನಡೆಸಿ ನಂಜನಗೂಡು ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ನ್ಯಾಯಧೀಶ ಬಿ.ಪಿ. ದೇವಮಾನೆ ಅವರು ಆರೋಪಿಗಳನ್ನು 15 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೊಪ್ಪಿಸಿದರು. ಅಫ್ಜರ್ ಖಾನ್‍ನನ್ನು ಜೈಲಿನಿಂದ ಕರೆತಂದ ಪಟ್ಟಣ ಪೊಲೀಸರು, ಅಕ್ರಮ ಶಸ್ತ್ರಾಸ್ತದ ಮೂಲ ಪತ್ತೆಗೆ ತೀವ ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ. ಬಿಜೆಪಿ ಕಾರ್ಯಕರ್ತನೋರ್ವ ಅನಧಿಕೃತ ಪಿಸ್ತೂಲ್ ಖರೀದಿಸಿ ರಾಜಕಾರಣಿಗಳ ಬೆದರಿಸಲು ಸ್ಕೆಚ್ ರೆಡಿ ಮಾಡುವಾಗ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾನೆ.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  ಇನ್ನಷ್ಟು ಮೈಸೂರು ಸುದ್ದಿಗಳುView All

  English summary
  Mysuru: Nanjangud police have arrested four men who were illegally selling pistols. One of the BJP Members also involved in this crime.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more