ಚೊಂಬಿನೊಂದಿಗೆ ಪಂಗನಾಮ ಹಾಕಲು ಹೊರಟವರ ಬಂಧನ

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮೈಸೂರು, ಜನವರಿ, 06: ಇದು ಅದೃಷ್ಟದ ಚೊಂಬು ಇದನ್ನು ಮನೆಯಲ್ಲಿಟ್ಟರೆ ಅದೃಷ್ಟ ಖುಲಾಯಿಸುತ್ತದೆ ಎಂದು ನಂಬಿಸಿ ಖಾಸಗಿ ಕಂಪನಿಯ ಅಧಿಕಾರಿಗೆ 60ಲಕ್ಷ ರೂ.ಗೆ ಪಂಗನಾಮ ಹಾಕಲು ಹೋದ ಹತ್ತು ಮಂದಿ ಮೈಸೂರು ಪೊಲೀಸರ ಅತಿಥಿಯಾಗಿದ್ದಾರೆ.

ಉಡುಪಿಯ ಪ್ರವೀಣ್ ಕುಮಾರ್, ರಮೇಶ, ಆಂಧ್ರಪ್ರದೇಶದ ಉಮಾಮಹೇಶ್ವರ ನಾಯ್ಡು, ಚಿಕ್ಕಬಳ್ಳಾಪುರದ ವರದರಾಜು, ಕೊಳ್ಳೇಗಾಲದ ಹರೀಶ್, ತಿರುಪತಿಯ ಮದನ್ ಮೋಹನ್, ಕೇರಳದ ಜಯಕೃಷ್ಣ, ಬೆಂಗಳೂರಿನ ಮಹದೇವನಾಯ್ಕ, ಶಿವಪ್ಪ ಹಾಗೂ ಮೈಸೂರು ವಿದ್ಯಾರಣ್ಯಪುರಂನ ಬಾಬುರಾಜ್ ಬಂಧಿತ ಆರೋಪಿಗಳು.[ಬೆಂಗಳೂರಲ್ಲಿ ಕಳುವಾದ ಸ್ಕೂಟಿಯ ಇಂಟರೆಸ್ಟಿಂಗ್ ಕತೆ!]

Mysuru

ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಸಿಇಓ ಆಗಿದ್ದ ಸುರೇಂದ್ರ ಎಂಬುವರಿಗೆ ನಮ್ಮ ಬಳಿ ಅದೃಷ್ಟದ ಚೊಂಬು(ರೈಸ್‍ಪುಲ್ಲಿಂಗ್) ಇದೆ. ಸದ್ಯಕ್ಕೆ ಮೈಸೂರಿನ ಗೆಳೆಯನ ಮನೆಯಲ್ಲಿದ್ದು, ಅದು ಕೋಟ್ಯಂತರ ರೂ. ಬೆಲೆಬಾಳುತ್ತದೆ. ಮನೆಯಲ್ಲಿಟ್ಟುಕೊಂಡರೆ ಅದೃಷ್ಟ ಒಲಿದು ಬರುತ್ತದೆ ಎಂದು ನಂಬಿಸಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಕೆಲವರನ್ನು ತೋರಿಸಿದ್ದಾರೆ.[ಈ ಊರಲ್ಲಿ ಇರೋರೆಲ್ಲಾ ಮನೇಲಿ ತರಬೇತಿ ಪಡೆದ ಖತರ್ನಾಕ್ ಕಳ್ಳರು!]

ವಿದ್ಯಾವಂತ, ಬುದ್ದಿವಂತನಾಗಿದ್ದ ಸುರೇಂದ್ರ ದೈವಭಕ್ತಿವುಳ್ಳವರಾಗಿದ್ದು, ಇವರ ಯಾವುದೇ ಮರ್ಮ ತಿಳಿಯದೆ ಎಲ್ಲವನ್ನು ಒಪ್ಪಿಕೊಂಡಿದ್ದಾರೆ. ಬಳಿಕ ಅವರನ್ನು ಕರೆದುಕೊಂಡು ಮೈಸೂರಿಗೆ ಬಂದಿದ್ದಾರೆ. ಇನೋವಾ ಕಾರಿನಲ್ಲಿಯೇ ಕುಳಿತು ಚೊಂಬನ್ನು ಪರೀಕ್ಷಿಸುವ ನಾಟಕವಾಡಿದ್ದಾರೆ.

ವಿಷಯ ತಿಳಿದ ಸರಸ್ವತಿಪುರಂ ಠಾಣೆಯ ಇನ್ಸ್ ಪೆಕ್ಟರ್ ಕೆ.ಸಿ.ಪೂವಯ್ಯ ಮತ್ತು ಸಿಬ್ಬಂದಿ ದಾಳಿ ನಡೆಸಿ ಆರೋಪಿಗಳು ಹಾಗೂ ಅವರ ಬಳಿಯಿದ್ದ ಚೊಂಬು, ಅಕ್ಕಿತುಂಬಿದ್ದ ಪೆಟ್ಟಿಗೆಯನ್ನು ವಶಕ್ಕೆ ಪಡೆದುಕೊಂಡಿದ್ದು, ತನಿಖೆ ಮುಂದುವರೆಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Police arrested 10 cheating people like Praveen Kumar, Ramesh (Udupi,Umamaheshwar Naidu(Andra pradesh),Varadaraju(Chikkaballapur), Harish (Kollegal), Madan Mohan (Tirupati), Jayakrishna (Kerala), Mahadeva Naik, Shivappa (Bengaluru), Baburaj (Mysuru) in Mysuru, on Wednesday, January 6th.
Please Wait while comments are loading...