ಸಮನ್ವಯ ಕವಿ ಚೆನ್ನವೀರ ಕಣವಿ ಅವರಿಂದ ದಸರಾಕ್ಕೆ ಚಾಲನೆ

Subscribe to Oneindia Kannada

ಬೆಂಗಳೂರು, ಆಗಸ್ಟ್, 07: ವಿಶ್ವವಿಖ್ಯಾತ ಮೈಸೂರು ದಸರಾವನ್ನು ಖ್ಯಾತ ಕವಿ ಚೆನ್ನವೀರ ಕಣವಿ ಉದ್ಘಾಟನೆ ಮಾಡಲಿದ್ದಾರೆ. ಈ ಮೂಲಕ ಸಚಿನ್ ತೆಂಡೂಲ್ಕರ್ ಉದ್ಘಾಟನೆ ಮಾಡಲಿದ್ದಾರೆ ಎಂಬ ಊಹಾಪೋಹಕ್ಕೆ ತೆರೆ ಬಿದ್ದಿದೆ.

ಸಿಎಂ ಸಿದ್ದರಾಮಯ್ಯ ಕಣವಿ ಅವರನ್ನು ದಸರಾ ಉದ್ಘಾಟನೆಗೆ ಆಮಂತ್ರಿಸಿದ್ದು ಕಣವಿಯವರು ಸಹ ಒಪ್ಪಿಗೆ ನೀಡಿದ್ದಾರೆ. ಕನ್ನಡಿಗರೇ ದಸರಾಕ್ಕೆ ಚಾಲನೆ ನೀಡುತ್ತಿದ್ದಾರೆ.[ಸಚಿನ್‌ರಿಂದ 2016ರ ಮೈಸೂರು ದಸರಾ ಉದ್ಘಾಟನೆ?]

kanavi

ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡೂಲ್ಕರ್, ಖ್ಯಾತ ಕವಿ ನಿಸಾರ್ ಅಹ್ಮದ್, ಎಸ್ ಎಲ್ ಭೈರಪ್ಪ, ಸುತ್ತೂರು ಮಠದ ಶ್ರೀಗಳಾದ ಶಿವರಾತ್ರಿ ದೇಶೀ ಕೇಂದ್ರ ಸ್ವಾಮಿ, ಸ್ವಾತಂತ್ರ್ಯ ಹೋರಾಟಗಾರ ಎಚ್ ಎಸ್ ದೊರೆಸ್ವಾಮಿ ಅಥವಾ ಚೆನ್ನವೀರ ಕಣವಿ ಅವರ ಹೆಸರು ಉದ್ಘಾಟನೆಗೆ ಕೇಳಿ ಬಂದಿತ್ತು. ಅಂತಿಮವಾಗಿ ಕಣವಿಯವರಿಗೆ ಉದ್ಘಾಟನಾ ಗೌರವ ನೀಡಲಾಗಿದೆ.[ಐತಿಹಾಸಿಕ ಮೈಸೂರು ದಸರಾದ ಮರೆಯದ ಚಿತ್ರಗಳು]

ಈ ಬಾರಿ ಅಕ್ಟೋಬರ್ 1ರಂದು ನವರಾತ್ರಿ ಮಹೋತ್ಸವ ಆರಂಭವಾಗುತ್ತದೆ. ಸಂಪ್ರದಾಯದಂತೆ ನವರಾತ್ರಿ 10ನೇ ದಿನ ಅಂದರೆ ಅಕ್ಟೋಬರ್ 10ರಂದು ಜಂಬೂ ಸವಾರಿ ನಡೆಯಬೇಕಿತ್ತು. ಆದರೆ, ಕ್ಯಾಲೆಂಡರ್‌ಗಳಲ್ಲಿ ಅಕ್ಟೋಬರ್ 11ರಂದು ಜಂಬೂ ಸವಾರಿ ಎಂದು ಹಾಕಲಾಗಿತ್ತು. ಆದರೆ ಅಕ್ಟೋಬರ್ 11 ರಂದೇ ಜಂಬೂ ಸವಾರಿ ನಡೆಯಲಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Veteran Kannada poet and a scholar Chennaveera Kanavi ( 88) chosen to inaugurate historical Mysuru Dasara festivities 2016.
Please Wait while comments are loading...