ಅರಮನೆಯನ್ನು ಕಣ್ತುಂಬಿಕೊಳ್ಳಲು ಮೈಸೂರಿಗೆ ಬಂದ ಮೋದಿ ಸಹೋದರ ಪ್ರಹ್ಲಾದ್

Posted By:
Subscribe to Oneindia Kannada

ಮೈಸೂರು, ಏಪ್ರಿಲ್ 19 : ಕರ್ನಾಟಕದಾದ್ಯಂತ ಪ್ರವಾಸ ಕೈಗೊಂಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸಹೋದರ ಪ್ರಹ್ಲಾದ್ ದಾಮೋದರ್ ಮೋದಿ ಅವರು ಕುಟುಂಬ ಸಮೇತ ಬುಧವಾರ ಅರಮನೆ ನಗರಿ ಮೈಸೂರಿಗೆ ಭೇಟಿ ನೀಡಿದರು.

ಪ್ರವಾಸಕ್ಕೆಂದು ಅರಮನೆ ನಗರಿ ಮೈಸೂರಿಗೆ ಆಗಮಿಸಿದ ದಾಮೋದರವರನ್ನು ನಗರ ಬಿಜೆಪಿ ಮೋರ್ಚಾ ಸಂಘದ ಪದಾಧಿಕಾರಿಗಳು ಆತ್ಮೀಯವಾಗಿ ಸ್ವಾಗತಿಸಿ ಸತ್ಕರಿಸಿದರು. [ಪ್ರಧಾನಿ ಮೋದಿ ಸಹೋದರ ಪ್ರಹ್ಲಾದ್‌ ದಂಪತಿ ಕುದ್ರೋಳಿಗೆ ಭೇಟಿ]

PM Narendra Modi's brother prahlad modi visits Mysuru

ಇತ್ತೀಚೆಗೆ ಹಂಪಿಯ ಪ್ರಸಿದ್ಧ ವಿರುಪಾಕ್ಷ ದೇವಾಲಯ ಸೇರಿದಂತೆ ಮಂಗಳೂರಿಗೆ ಭೇಟಿ ನೀಡಿರುವ ಪ್ರಹ್ಲಾದ್ ಮೋದಿ ಅವರು, ಇದೀಗ ಅವರು ಮೈಸೂರಿಗೆ ಆಗಮಿಸಿದ್ದು ಇಲ್ಲಿನ ಅಂದ ಚಂದದ ಪ್ರೇಕ್ಷಣೀಯ ಸ್ಥಳಕ್ಕೆ ಭೇಟಿ ನೀಡಲಿದ್ದಾರೆ.

ಮೈಸೂರು ಅರಮನೆ, ಚಾಮುಂಡಿ ಬೆಟ್ಟ ಸೇರಿದಂತೆ ಹಲವು ಸ್ಥಳಗಳನ್ನು ವೀಕ್ಷಿಸಿ ಕಣ್ತುಂಬಿಕೊಳ್ಳಲಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Prime Minister Narendra Modi’s brother Prahlad Damodar Modi and family visits the heritage city Mysuru, on April 19.
Please Wait while comments are loading...