ಮೈಸೂರಿನ ಹಲವೆಡೆ ಪೆಟ್ರೋಲ್ ಬಂಕ್ ಬಂದ್

Posted By:
Subscribe to Oneindia Kannada

ಮೈಸೂರು, ಜೂನ್ 16 : ಪ್ರತಿನಿತ್ಯ ತೈಲ ಬೆಲೆಯನ್ನು ಪರಿಷ್ಕರಿಸುವ ಕೇಂದ್ರ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ಮೈಸೂರು ವಿಭಾಗದ ಮಂಡ್ಯ, ರಾಮನಗರ, ಚಾಮರಾಜನಗರ, ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಪೆಟ್ರೊಲ್ ಬಂಕ್ ಭಾಗಶಃ ಬಂದ್ ಆಗಿವೆ.

ಮೈಸೂರಲ್ಲಿ 120 ಬಂಕ್ ಸೇರಿದಂತೆ ಜಿಲ್ಲೆಯಾದ್ಯಂತ ಎಲ್ಲ 240 ಕ್ಕೂ ಹೆಚ್ಚು ಬಂಕ್ ಗಳನ್ನು ಬಂದ್ ಮಾಡಲಾಗಿದೆ. ಆದರೆ ನಗರದ ಕೆಲವು ಪೆಟ್ರೋಲ್ ಬಂಕ್ ಗಳು ತೆರೆದಿದ್ದು, ವಾಹನ ಸವಾರರು ಸಾಲಿನಲ್ಲಿ ನಿಂತು ಪೆಟ್ರೋಲ್ ಹಾಕಿಸಿಕೊಳ್ಳುತ್ತಿದ್ದಾರೆ. ತೈಲ ಬೆಲೆ ನಿತ್ಯವೂ ಪರಿಷ್ಕರಣೆಗೆ ಕೇಂದ್ರ ಸರ್ಕಾರ ಆಸಕ್ತಿ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಪೆಟ್ರೋಲ್ ಬಂಕ್ ಸಂಪೂರ್ಣ ಸ್ಥಗಿತಗೊಂಡಿದೆ.

ರಾಜ್ಯದಲ್ಲಿ ಜೂ.16 ರಂದು ಪೆಟ್ರೋಲ್ ಬಂಕ್ ಬಂದ್?

Petrol pumps shut down in Mysuru, Mandya, Chamarajanagar

ಹೊಸ ಆದೇಶವನ್ನು ವಿರೋಧಿಸಿ ಪೆಟ್ರೋಲಿಯಂ ಉತ್ಪನ್ನಗಳ ಖರೀದಿ, ಮಾರಾಟವನ್ನು ಸ್ಥಗಿತಗೊಳಿಸಲಾಗಿದೆ. ಆದರೆ ಕೆಲವು ಪೆಟ್ರೋಲ್ ಬಂಕ್ ಗಳಲ್ಲಿ ವಾಹನ ಸವಾರರು ಕಂಡು ಬಂದಿದ್ದು, ಎಂದಿನಂತೆ ವಹಿವಾಟು ನಡೆದಿದೆ. ಬಂದ್ ಗೂ ತಮಗೂ ಸಂಬಂಧವೇ ಇಲ್ಲ ಎನ್ನುವಂತೆ ಕಾರ್ಯಾಚರಿಸುತ್ತಿವೆ.

ನಗರದಲ್ಲಿರುವ 120 ಬಂಕ್ ಸೇರಿದಂತೆ ಜಿಲ್ಲೆಯಾದ್ಯಂತ ಎಲ್ಲ 240ಕ್ಕೂ ಹೆಚ್ಚು ಬಂಕ್ ಗಳು ಸಾರ್ವಜನಿಕರ ಸೇವೆಗೆ ಲಭ್ಯವಿಲ್ಲ. ‌ನಿನ್ನೆ ರಾತ್ರಿ 12 ರಿಂದ ಇಂದು ರಾತ್ರಿ 12 ಗಂಟೆಯವರೆಗೆ ಬಂದ್ ಇರಲಿದೆ. ಪೆಟ್ರೋಲ್, ಡೀಸೆಲ್ ಗಾಗಿ ವಾಹನ ಸವಾರರು ಪರದಾಟ ಅನುಭವಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಖಾಸಗಿ ಸೆಲ್ ಪೆಟ್ರೋಲ್ ಬಂಕ್ ಹೊರತುಪಡಿಸಿ ಉಳಿದೆಲ್ಲ ಬಂಕ್ ಗಳೂ ಬಂದ್ ಆಗಿವೆ. ನಾಳೆ ಬೆಳಿಗ್ಗೆಯಿಂದ ಎಂದಿನಂತೆ ಕಾರ್ಯಾಚರಿಸಲಿದೆ.

Petrol pumps shut down in Mysuru, Mandya, Chamarajanagar

ಜೂ.16 ರಂದು ಅರ್ಧ ದಿನ ಖಾಸಗಿ ಆಸ್ಪತ್ರೆ ಬಂದ್

ಖಾಸಗಿ ವೈದ್ಯರ ತುರ್ತು ಸೇವೆಯೂ ಬಂದ್
ಇತ್ತ ಪೆಟ್ರೋಲ್ ಬಂಕ್ ಆಗಿರುವುದರ ಜೊತೆ - ಜೊತೆಗೇ ಸರ್ಕಾರದ ನಿಯಮಾವಳಿ ವಿರುದ್ಧ ರಾಜ್ಯ ವೈದ್ಯರ ಮುಷ್ಕರಕ್ಕೆ ಮೈಸೂರು ಖಾಸಗಿ ಆಸ್ಪತ್ರೆಗಳ ವೈದ್ಯರು ಬೆಂಬಲ ನೀಡಿದ್ದು ಪ್ರತಿಭಟನೆಗಿಳಿದಿದ್ದಾರೆ.

Petrol pumps shut down in Mysuru, Mandya, Chamarajanagar

ಮೈಸೂರಿನ 500 ಖಾಸಗಿ ವೈದ್ಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದು, ಸುಮಾರು 130 ಖಾಸಗಿ ಆಸ್ಪತ್ರೆ, ನರ್ಸಿಂಗ್ ಹೋಂ ನ ವೈದ್ಯರು ಬೆಂಬಲ ನೀಡಿದ್ದಾರೆ. ಒಳರೋಗಿಗಳಿಗಷ್ಟೇ ಚಿಕಿತ್ಸೆ ನೀಡುತ್ತಿರುವ ವೈದ್ಯರು, ಹೊರರೋಗಿಗಳ ತಪಾಸಣೆಗೆ ನಿರಾಕರಿಸಿದ್ದಾರೆ. ಅಷ್ಟೇ ಅಲ್ಲದೇ ತುರ್ತು ಚಿಕಿತ್ಸೆಯನ್ನೂ ನೀಡಲಾಗುವುದಿಲ್ಲ ಎಂದಿದ್ದಾರೆ. ಶನಿವಾರ ವೈದ್ಯರು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
To oppose central government's decision to revise petrol prices daily, Petroleum dealers association has protested in Mysuru, Mandya, Chamarajanagar distrcit today (June 16th). Most of the petrol pumps in the region are closed.
Please Wait while comments are loading...