ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು ಭಾಗ ಪ್ರವಾಹದಿಂದ ಮುಕ್ತ: ಸಾಂಕ್ರಾಮಿಕ ರೋಗ ವ್ಯಾಪಿಸುವ ಭೀತಿ

By Yashaswini
|
Google Oneindia Kannada News

ಮೈಸೂರು, ಆಗಸ್ಟ್ 20: ಕಬಿನಿ ಜಲಾಶಯದ ನೀರಿನ ಹೊರ ಹರಿವಿನ ಪ್ರಮಾಣ ಭಾನುವಾರ ಕೊಂಚ ಕಡಿಮೆಯಾಗಿದ್ದು, ನದಿ ಪಾತ್ರದ ರೈತರು ಹಾಗೂ ಗ್ರಾಮಸ್ಥರು ನಿರಾಳರಾಗಿದ್ದಾರೆ.
ಇಟ್ನಾ, ಚಕ್ಕೂರು, ಬೆಳ್ತೂರು, ಮಲಾರ ಕಾಲೊನಿ, ಜಿನ್ನಹಳ್ಳಿ, ಕೋಳಗಾಲ, ಬೊಪ್ಪನಹಳ್ಳಿ ಸೇರಿದಂತೆ ಹಲವು ಗ್ರಾಮಗಳ ಗ್ರಾಮಸ್ಥರು ತಮ್ಮ ತಮ್ಮ ಗ್ರಾಮಗಳಿಗೆ ಮರಳುತ್ತಿದ್ದಾರೆ.

ನದಿ ನೀರಿನ ಹರಿವು ಹೆಚ್ಚಾದ್ದರಿಂದ ಗ್ರಾಮಗಳ ನಿವಾಸಿಗಳು ನೆಂಟರಿಷ್ಟರ ಊರುಗಳಿಗೆ ತೆರಳಿದ್ದರು. ಇತ್ತ ಕಬಿನಿ ಜಲಾಶಯದ ಹೊರ ಹರಿವು ಕಡಿಮೆಯಾದರೂ ಚಕ್ಕೂರು ಸೇತುವೆ ಹಾಗೂ ಹೊಮ್ಮರಗಳ್ಳಿ ಸೇತುವೆ ಮೇಲೆ ನೀರು ಹರಿಯುತ್ತಿದೆ.

ಸಹಜ ಸ್ಥಿತಿಗೆ ಮರಳಿದ ನಂಜನಗೂಡು: ಖುಷಿಯಾದ ಜನರುಸಹಜ ಸ್ಥಿತಿಗೆ ಮರಳಿದ ನಂಜನಗೂಡು: ಖುಷಿಯಾದ ಜನರು

ಜಮೀನುಗಳಲ್ಲೂ ನೀರಿನ ಪ್ರಮಾಣ ಕಡಿಮೆಯಾಗಿದ್ದು, ರೈತರಲ್ಲಿ ಸಂತಸ ಮನೆಮಾಡಿದೆ. ಆದರೆ ಕೆಲವು ಗ್ರಾಮಗಳಲ್ಲಿ ವಿದ್ಯುತ್‌ ಸಂಪರ್ಕವಿಲ್ಲದೇ ಜನ ಕತ್ತಲಲ್ಲಿ ಕಾಲ ಕಳೆಯುವಂತಾಗಿದೆ.

ಇದರೊಟ್ಟಿಗೆ ಕೇರಳ ಹಾಗೂ ನಾಗರಹೊಳೆ ಭಾಗಗಳಲ್ಲಿ ಮತ್ತೆ ಭಾರಿ ಮಳೆಯಾದರೆ ಪ್ರವಾಹ ಎದುರಾಗಬಹುದು ಎಂಬ ಆತಂಕದಲ್ಲಿ ಗ್ರಾಮಸ್ಥರಿದ್ದಾರೆ. ನಂಜನಗೂಡು-ಮೈಸೂರು ಹೆದ್ದಾರಿ ಸಂಚಾರಕ್ಕೆ ಮುಕ್ತವಾಗಿದ್ದು, ಯಾತ್ರಿಗಳು ನಿರಾಳರಾಗಿದ್ದಾರೆ. ಅಂದಹಾಗೆ ಇಲ್ಲಿ ಮೈಸೂರು ಭಾಗದಲ್ಲಿ ಎಲ್ಲೆಲ್ಲಿ ಏನಾಗಿದೆ? ಎಂಬುದರ ಸಂಪೂರ್ಣ ವಿವರವಿದೆ.

 ಸಹಜ ಸ್ಥಿತಿಯತ್ತ ಜನಜೀವನ

ಸಹಜ ಸ್ಥಿತಿಯತ್ತ ಜನಜೀವನ

ನಂಜನಗೂಡು ತಾಲೂಕಿನ ಸುತ್ತೂರು ಸೇತುವೆಯಲ್ಲಿ ಪ್ರವಾಹ ನೀರು ಚಾಚಿಕೊಂಡಿರುವುದರಿಂದ ಮೂರನೇ ದಿನವೂ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ನಗರದ ಸರಸ್ವತಿ ಕಾಲನಿಯ ತಗ್ಗು ಪ್ರದೇಶದಲ್ಲಿ ಮುಳುಗಡೆಯಾಗಿದ್ದ 10 ಮನೆಗಳು ಸಹಜ ಸ್ಥಿತಿಗೆ ಮರಳಿವೆ.

ಇನ್ನೂ ನಾಲ್ಕೈದು ಮನೆಗಳು ಜಲಾವೃತದಿಂದ ಮುಕ್ತಿ ಪಡೆದಿಲ್ಲ. ಹಳ್ಳದಕೇರಿಯ ಐದು ಮನೆಗಳು ಮುಳುಗಡೆ ಪ್ರಮಾಣ ಕುಗ್ಗಿದರೂ ಯಥಾಸ್ಥಿತಿ ಮುಂದುವರೆದಿದೆ. ಚರಂಡಿ ಪೈಪ್‌ಲೈನ್ ಮೂಲಕ ಹಿಮ್ಮುಖವಾಗಿ ಪ್ರವಾಹ ನುಗ್ಗಿ ಅವಾಂತರ ಸೃಷ್ಟಿಸಿದ್ದ ತೋಪಿನ ಬೀದಿ ಬಡಾವಣೆಯ 25ಕ್ಕೂ ಹೆಚ್ಚು ಮನೆಗಳು ಪ್ರವಾಹದಿಂದ ಮುಕ್ತವಾಗಿವೆ.

 ಕ್ಷೀಣಿಸಿದ ಪ್ರವಾಹ

ಕ್ಷೀಣಿಸಿದ ಪ್ರವಾಹ

ಶ್ರೀಕಂಠೇಶ್ವರಸ್ವಾಮಿ ದೇವಾಲಯದ ಆವರಣ ಸುತ್ತುವರೆದಿದ್ದ ಪ್ರವಾಹ ಮರೆಯಾಗಿದೆ. ಇನ್ನು ಸಂಗಮ ಸುಕ್ಷೇತ್ರ ಮಹದೇವ ತಾತಾ ಗದ್ದುಗೆ ಆವರಣ, ಮಲ್ಲನಮೂಲೆ ಮಠ, ಚಾಮುಂಡೇಶ್ವರಿ, ಅಯ್ಯಪ್ಪಸ್ವಾಮಿ, ದತ್ತಾತ್ರೇಯ ಗುಡಿ ದೇವಾಲಯಗಳಲ್ಲಿ ಪ್ರವಾಹ ಕ್ಷೀಣಿಸಿದ್ದು, ಗರ್ಭಗುಡಿಯನ್ನು ಶುಚಿಗೊಳಿಸುವ ಕಾರ್ಯದಲ್ಲಿ ಅರ್ಚಕರು ನಿರತರಾಗಿದ್ದಾರೆ.

ಕೊಡಗಿನ ಜಲಪ್ರಳಯಕ್ಕೆ ಕೊಳ್ಳೇಗಾಲದ ಊರುಗಳು ನೀರುಪಾಲು!ಕೊಡಗಿನ ಜಲಪ್ರಳಯಕ್ಕೆ ಕೊಳ್ಳೇಗಾಲದ ಊರುಗಳು ನೀರುಪಾಲು!

 ಮುಂದಾದ ಅಧಿಕಾರಿಗಳು

ಮುಂದಾದ ಅಧಿಕಾರಿಗಳು

ಸಂತ್ರಸ್ತರಿಗಾಗಿ ಗಿರಿಜಾಕಲ್ಯಾಣ ಮಂಟಪ, ಸರಸ್ವತಿ ಕಾಲನಿ ಹಾಗೂ ಬೊಕ್ಕಹಳ್ಳಿ ಗ್ರಾಮದಲ್ಲಿ ತೆರೆದಿರುವ ಗಂಜಿಕೇಂದ್ರವನ್ನು ಮುಂದುವರೆಸಲಾಗಿದ್ದು, ಆಹಾರ ಪೂರೈಕೆ ಮಾಡಲಾಗುತ್ತಿದೆ.

ನಂಜನಗೂಡು, ಗುಂಡ್ಲುಪೇಟೆ ಬಡಾವಣೆಗಳಿಗೆ ಕುಡಿಯುವ ನೀರು ಪೂರೈಕೆ ಮಾಡುವ ಜಲಾಗಾರ ಘಟಕಗಳು ಹಾಗೂ ಕೈಗಾರಿಕಾ ಪ್ರದೇಶಗಳಿಗೆ ಸರಬರಾಜು ಮಾಡುವ ಪಂಪ್ ಹೌಸ್‌ಗಳಲ್ಲಿ ನೀರಿನ ಮಟ್ಟ ಇಳಿಮುಖವಾಗಿದ್ದು, ನೀರು ಪೂರೈಕೆ ಮಾಡಲು ಅಗತ್ಯ ವಿದ್ಯುತ್ ಸಂಪರ್ಕ ಸೇರಿದಂತೆ ಇನ್ನಿತರ ದುರಸ್ತಿ ಕಾರ್ಯ ಕೈಗೊಳ್ಳುವಲ್ಲಿ ಅಧಿಕಾರಿಗಳು ಮುಂದಾಗಿದ್ದಾರೆ.

 ಗಂಜಿಕೇಂದ್ರ ಮುಂದುವರಿಕೆ

ಗಂಜಿಕೇಂದ್ರ ಮುಂದುವರಿಕೆ

ಕಪಿಲೆಯ ಅಬ್ಬರದ ಪ್ರವಾಹಕ್ಕೆ ಸಿಲುಕಿದ ಜನತೆ ಮಾತ್ರ ಸಹಜ ಸ್ಥಿತಿಗೆ ಮರಳಲು ಹಲವು ವರ್ಷಗಳೇ ಬೇಕಾಗಬಹುದು. 8 ದಿನಗಳ ಕಾಲ ತಗ್ಗು ಪ್ರದೇಶಗಳನ್ನೆಲ್ಲ ಆವರಿಸಿಕೊಂಡಿದ್ದ ನೀರುತಗ್ಗು ಪ್ರದೇಶಗಳನ್ನೆಲ್ಲ ಆವರಿಸಿಕೊಂಡಿದ್ದ ನೀ ಈಗ ಗಬ್ಬೆದ್ದು ನಾರತೊಡಗಿದ್ದು, ಅನೇಕ ಸಾಂಕ್ರಾಮಿಕ ರೋಗಗಳ ಹರಡುವ ಆತಂಕ ಎದುರಾಗಿದೆ.

ತಾಲೂಕಿನ ಬೊಕ್ಕಳ್ಳಿ, ಗಿರಿಜಾಕಲ್ಯಾಣ ಮಂದಿರ, ಸರಸ್ವತಿ ಕಾಲೋನಿಗಳ ನಿರಾಶ್ರಿತರ ಶಿಬಿರವನ್ನು ತಾತ್ಕಾಲಿಕ ಆಸ್ಪತ್ರೆಯೊಂದಿಗೆ ಮುಂದುವರಿಸಲಾಗಿದ್ದು, ಜಿಲ್ಲಾಧಿಕಾರಿಗಳ ಮುಂದಿನ ಆದೇಶಕ್ಕಾಗಿ ತಾಲೂಕು ಆಡಳಿತ ಕಾಯುತ್ತಿದೆ.

English summary
Water flow of the Kabini reservoir has been slightly lower on Sunday. Now Lowlands water is smelling. Because of this People are afraid about inflammatory disease
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X