ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊಲೆ ಆರೋಪಿಗೆ ಜಾಮೀನು ಸಿಕ್ಕ ದಿನ, ಸೆಲ್ಫಿಗೆ ಮುಗಿಬಿದ್ದ ಜನ!

By Yashaswini
|
Google Oneindia Kannada News

ಮೈಸೂರು, ಫೆಬ್ರವರಿ 21 : ಎರಡು ವರುಷಗಳ ಹಿಂದೆ ಇಡೀ ಮೈಸೂರನ್ನೇ ಬೆಚ್ಚಿಬೀಳಿಸಿದ್ದ ಬಿಜೆಪಿ ಕಾರ್ಯಕರ್ತ ರಾಜು ಹತ್ಯೆಯ ಪ್ರಮುಖ ಆರೋಪಿ ಅಬೀಬ್ ಪಾಷಾಗೆ ಎರಡು ದಿನಗಳ ಹಿಂದೆ ಜಾಮೀನು ಸಿಕ್ಕಿದೆ. ಜೈಲಿನಿಂದ ಹೊರಬಂದ ಆತನಿಗೆ ಹಾರ, ತುರಾಯಿ ಹಾಕಿ ಸನ್ಮಾನ ಮಾಡಲಾಗಿದೆ. ಅಷ್ಟೇ ಅಲ್ಲ, ಅವನ ಜತೆಗೆ ಸೆಲ್ಫಿ ತೆಗೆಸಿಕೊಳ್ಳಲು ಜನ ಮುಗಿಬಿದ್ದಿದ್ದಾರೆ.

2016ರ ಮಾರ್ಚ್ 13 ರಂದು ಉದಯಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರಾಜು ಎಂಬ ಬಿಜೆಪಿ ಕಾರ್ಯಕರ್ತನ ಕೊಲೆಯಾಗಿತ್ತು. ಪ್ರಕರಣದ ಪ್ರಮುಖ ಆರೋಪಿ ಅಬೀಬ್ ಪಾಷಾ 5 ತಿಂಗಳು ತಲೆ ಮರೆಸಿಕೊಂಡಿದ್ದವನು ಆ ನಂತರ ಸಿಕ್ಕಿಬಿದ್ದಿದ್ದ. ರಾಜು ಹತ್ಯೆ ಜೊತೆ ಮೂರು ಕೊಲೆ ಪ್ರಕರಣಗಳಲ್ಲಿ ಅಬೀಬ್ ಆರೋಪಿಯಾಗಿದ್ದಾನೆ.

ಮೊಬೈಲ್ ಚಾರ್ಜರ್ ನಿಂದ ಹೋಯಿತು ಇಪ್ಪತ್ತು ವರ್ಷದ ಯುವಕನ ಪ್ರಾಣಮೊಬೈಲ್ ಚಾರ್ಜರ್ ನಿಂದ ಹೋಯಿತು ಇಪ್ಪತ್ತು ವರ್ಷದ ಯುವಕನ ಪ್ರಾಣ

ಎಸ್‍ ಡಿಪಿಐ ಸಂಘಟನೆಯ ಸಕ್ರಿಯ ಕಾರ್ಯಕರ್ತನಾಗಿದ್ದ ಅಬೀಬ್ ಪಾಷಾ, ರಾಜು ಹತ್ಯೆ ನಡೆಸುವ ಮುನ್ನ ಕೇರಳದ ಸಮುದ್ರ ದಂಡೆಯಲ್ಲಿ ನಾಯಿಗಳನ್ನು ಕೊಲ್ಲುವ ಮೂಲಕ ಕೊಲೆಗೆ ತಯಾರಿ ನಡೆಸಿದ್ದ ಎಂದು ಹೇಳಲಾಗುತ್ತಿದೆ.

Abib Pasha

ಕಾಶ್ಮೀರದ ಉಗ್ರ ಸಂಘಟನೆಗೆ ಸೇರುವ ಬಯಕೆ ಹೊಂದಿದ್ದ ಅಬೀಬ್, ಮೈಸೂರಿನ ಮೂವರು ಬಿಜೆಪಿ ಮುಖಂಡರು, ಉತ್ತರ ಪ್ರದೇಶದ ಬಿಜೆಪಿ ಮುಖಂಡ ಕಮಲೇಶ್ ತಿವಾರಿ ಅವರನ್ನು ಟಾರ್ಗೆಟ್ ಮಾಡಿದ್ದ ಎಂದು ತಿಳಿದು ಬಂದಿತ್ತು. 2 ಲಕ್ಷ ರುಪಾಯಿ ಭದ್ರತೆ ಹಾಗೂ ಇಬ್ಬರು ಷ್ಯೂರಿಟಿ ಜತೆಗೆ ಮೈಸೂರು ನ್ಯಾಯಾಲಯ ಆರೋಪಿಗೆ ಜಾಮೀನು ಮಂಜೂರು ಮಾಡಿತ್ತು.

English summary
People throng to take selfie with murder accused Abib Pasha, who released on Bhel in Mysuru. Abib Pasha main accused of Hindu organisation member Raju murder case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X