ಹುಣಸೂರಿನ ಬಿಸಿಲಿನ ಧಗೆ ನೀಗಿಸಿದ ಆಲಿಕಲ್ಲು ಮಳೆ

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮೈಸೂರು,ಮಾರ್ಚ್,14: ತಲೆಯ ಮೇಲೆ ರಣ ರಣ ಬಿಸಿಲು, ಕುಡಿಯುವ ನೀರಿಗಾಗಿ ಮಾರುಗಟ್ಟಲೇ ಹೋಗುವ ಹುಣಸೂರು ಜನರಿಗೆ ಕೆಲವೆಡೆ ಭಾನುವಾರ ಸುರಿದ ಮಳೆ ಬಿಸಿಲಿನ ಬೇಗೆಯಿಂದ ಬಳಲಿದ್ದವರಿಗೆ ತಂಪು ಎರೆದಿದೆ.

ಮೈಸೂರು ತಾಲೂಕಿನ ಕೆಲವೆಡೆ ಸಾಧಾರಣ ಮಳೆಯಾದರೆ, ಹುಣಸೂರಿನ ಗುರುಪುರದಲ್ಲಿ ಬಿರುಗಾಳಿ ಸಹಿತ ಧಾರಾಕಾರ ಮಳೆಯಾಗಿದೆ. ರಸ್ತೆಯಲ್ಲಿ ನೀರು ತುಂಬಿ ಹರಿದಿದ್ದು, ಗುರುಪುರ ನೆಲ್ಲೂರುಪಾಲ, ಆಜಾದ್ ನಗರ ಗ್ರಾಮಗಳಲ್ಲಿ ಆಲಿಕಲ್ಲು ಸಹಿತ ಮಳೆ ಸುರಿಯಿತು.[ಕೆಆರ್ ಎಸ್ ಡ್ಯಾಂ ಖಾಲಿ, ಬೆಂಗಳೂರು ಬೇಸಿಗೆ ಬಲು ಭೀಕರ]

People feel happy after rainfall in Hunsur, Mysuru

ಒಂದೆಡೆ ಮಳೆಯಿಂದ ವಾತಾವರಣ ತಂಪಾಗಿದ್ದರೆ ಮತ್ತೊಂದೆಡೆ ಒಂದಷ್ಟು ರೈತರು ಬೆಳೆದ ಬೆಳೆಗೆ ಹಾನಿಯಾಗಿದೆ. ಕೆಲವರ ಮನೆಗಳ ಹೆಂಚು, ಶೀಟ್ ಗಳು ಹಾರಿಹೋಗಿವೆ. ಆದರೂ ರೈತರು, ಜನಸಾಮಾನ್ಯರ ಮೊಗದಲ್ಲಿ ಸಂತಸ ಮೂಡಿದ್ದು, ಬಿಸಿಲಿನ ಧಗೆ ಕೊಂಚವಾದರೂ ಕಡಿಮೆಯಾಗಿದೆ ಎಂಬ ಭಾವ ಹೊಂದಿದ್ದಾರೆ.[ಭರ್ತಿ ಮಳೆಯಲ್ಲೂ ಹಾಲು ಹಾಕಲು ಬಂದ ಮಹಿಳೆಗೆ ಸಲಾಂ!]

ಕಾಡಾನೆ ಹಾವಳಿ:

ಒಂದೆಡೆ ಮಳೆ ಸುರಿದು ರೈತರಿಗೆ ಹಾನಿಯಾಗಿದ್ದರೆ ಮತ್ತೊಂದೆಡೆ ಗುರುಪುರ ಗ್ರಾಮಕ್ಕೆ ಕಾಡಾನೆಗಳು ನುಗ್ಗಿ ಗ್ರಾಮದ ರೈತ ತಂಗರಾಜು ಎಂಬುವರಿಗೆ ಸೇರಿದ 2 ಎಕರೆಯಲ್ಲಿ ಬೆಳೆದಿದ್ದ ಮುಸುಕಿನ ಜೋಳವನ್ನು ತಿಂದು ತುಳಿದು ನಾಶ ಪಡಿಸಿವೆ.[ಮೈಸೂರು ಶಿಡ್ಲು ಬೆಟ್ಟದಲ್ಲಿ ಹರಿಯುವ ನೀರು ಎಂದೂ ಬತ್ತೋದಿಲ್ಲ!]

ಅಲ್ಲದೆ ತೆಂಗಿನ ತೋಟದಲ್ಲಿ ಎರಡು ತೆಂಗಿನ ಮರಗಳನ್ನು ನೆಲಕ್ಕುರುಳಿಸಿವೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆದರೆ ಈ ಸಂದರ್ಭದಲ್ಲಿ ಗ್ರಾಮಸ್ಥರು ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Hunsur people were enjoying rainfall on Sunday. Crops destroyed some places but farmers are not worried.
Please Wait while comments are loading...