ಅತ್ತ ಖಾಸಗಿ ವೈದ್ಯರು- ಸರ್ಕಾರದ ಹಗ್ಗಜಗ್ಗಾಟ, ಇತ್ತ ರೋಗಿಗಳಿಗೆ ಪ್ರಾಣ ಸಂಕಟ

Posted By:
Subscribe to Oneindia Kannada

ಮೈಸೂರು, ನವೆಂಬರ್ 16 : ಖಾಸಗಿ ಆಸ್ಪತ್ರೆ ವೈದ್ಯರ ಮುಷ್ಕರದ ಹಿನ್ನೆಲೆ ಮೈಸೂರು ಕೆ.ಆರ್.ಆಸ್ಪತ್ರೆಯಲ್ಲಿ ರೋಗಿಗಳ ಸಂಖ್ಯೆ ದ್ವಿಗುಣಗೊಂಡಿದೆ. ಮೈಸೂರಿನ ಖಾಸಗಿ ಆಸ್ಪತ್ರೆಗಳ ಹೊರರೋಗಿಗಳ ವಿಭಾಗ ದಲ್ಲಿ ಸೇವೆ ಸಂಪೂರ್ಣ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ರೋಗಿಗಳು ಸರ್ಕಾರಿ ಆಸ್ಪತ್ರೆಳತ್ತ ಮುಖ ಮಾಡಿದ್ದಾರೆ.

ವೃತ್ತಿಯ ಗೌರವ, ಘನತೆ ಮಣ್ಣುಪಾಲಾಗುತ್ತಿದೆ : ದೇವಿಪ್ರಸಾದ್ ಶೆಟ್ಟಿ

ಕೆ.ಆರ್ ಆಸ್ಪತ್ರೆ ಸೇರಿದಂತೆ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ರೋಗಿಗಳು ಸಾಲುಗಟ್ಟಿ ನಿಂತಿದ್ದಾರೆ. ಕೆ.ಆರ್.ಆಸ್ಪತ್ರೆಯ ಮುಂದೆ ಚಾಮರಾಜನಗರ, ಮಂಡ್ಯ ಸೇರಿದಮೆ ವಿವಿಧೆಡೆಗಳಿಂದ ರೋಗಿಗಳು ಆಗಮಿಸಿ ಸರತಿಯ ಸಾಲಿನಲ್ಲಿ ನಿಂತುಕೊಂಡು ತಮ್ಮ ಸರದಿ ಬಂದ ನಂತರ ಚಿಕಿತ್ಸೆ ವೈದ್ಯರ ಬಳಿ ತೆರಳಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೆ.ಆರ್.ಆಸ್ಪತ್ರೆಯಲ್ಲಿ ರಜೆಯ ಮೇಲೆ ತೆರಳಿದ ವೈದ್ಯರುಗಳನ್ನು ಮರಳಿ ಕರೆಸಲಾಗಿದ್ದು, ಖಾಸಗಿ ವೈದ್ಯರ ಮುಷ್ಕರ ನಿಲ್ಲುವವರೆಗೂ ರಜೆ ಪಡೆಯದಂತೆ ತಿಳಿಸಿದ್ದಾರೆ.

ತಕ್ಷಣ ಮುಷ್ಕರ ನಿಲ್ಲಿಸಿ, ವೈದ್ಯರಿಗೆ ಹೈಕೋರ್ಟ್ ಸೂಚನೆ

Patients left in lurch as private doctors begin indefinte strike

ಕೆಪಿಎಂಇ ವಿಧೇಯಕ ತಿದ್ದುಪಡಿ ಆಗ್ರಹಿಸಿ ಖಾಸಗಿ ಆಸ್ಪತ್ರೆಗಳ ಮುಷ್ಕರ ಹಿನ್ನೆಲೆಯಲ್ಲಿ ಮೈಸೂರಿನಲ್ಲೂ ಖಾಸಗಿ ಆಸ್ಪತ್ರೆಗಳಿಂದ ಮುಷ್ಕರಕ್ಕೆ ಬೆಂಬಲ ನೀಡಿ ವೈದ್ಯರು ಮುಷ್ಕರ ನಡೆಸಿದ್ದಾರೆ. ಮೈಸೂರಿನ 175 ಖಾಸಗಿ ಆಸ್ಪತ್ರೆಗಳಿಂದ ಮುಷ್ಕರಕ್ಕೆ ಬೆಂಬಲ ವ್ಯಕ್ತವಾಗಿದೆ. ಖಾಸಗಿ ಆಸ್ಪತ್ರೆಗಳ ಮುಂಭಾಗ ಮುಷ್ಕರ ಭಿತ್ತಿಪತ್ರ ಅಂಟಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.

Patients left in lurch as private doctors begin indefinte strike

ನಗರದ ಖಾಸಗಿ ಆಸ್ಪತ್ರೆಗಳು ಓಪಿಡಿಗಳನ್ನು ಮುಚ್ಚಿವೆ. ಇದರಿಂದ ರೋಗಿಗಳು ಸರ್ಕಾರಿ ಆಸ್ಪತ್ರೆಗಳತ್ತ ಮುಖ ಮಾಡಿದ್ದಾರೆ. ಇತ್ತ ರಕ್ತ, ಮೂತ್ರ ತಪಾಸಣೆಗಳ ಪ್ರಯೋಗಾಲಯಗಳು ಮುಚ್ಚಿದ್ದು ತೆರೆದಿರುವ ಪ್ರಯೋಗಾಲಯದ ಬಳಿ ಜನರು ತಪಾಸಣೆಗಾಗಿ ಸರತಿ ಸಾಲಿನಲ್ಲಿ ನಿಂತಿರುವುದು ಕಂಡು ಬಂತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The inflow of patients at the government-run KR Hospital has more than doubled in the last couple of days, As no private hospitals are functioning in the city, patients are forced to come to K R hospital in large numbers from Chamarajanagar, Mandya, Gundlupet and other close-by places.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ