ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆಪರೇಷನ್ ಕಮಲ ಊಹಾಪೋಹವಷ್ಟೆ: ಕುಮಾರಸ್ವಾಮಿ

|
Google Oneindia Kannada News

ಮೈಸೂರು, ಜನವರಿ 14: ಮೂವರು ಶಾಸಕರು ಮುಂಬೈಗೆ ಶೀಫ್ಟ್‌ ಆಗಿರುವ ಬಗ್ಗೆ ಪ್ರತಿಕ್ರಿಯಿಸಿರುವ ಕುಮಾರಸ್ವಾಮಿ, ಆ ರೀತಿಯ ಘಟನೆಗಳು ನಡೆದಿಲ್ಲ, ಅಲ್ಲಿಗೆ ಹೋಗಿರುವ ಶಾಸಕರೊಂದಿಗೆ ನಾನು ಮಾತನಾಡಿದ್ದೇನೆ ಅವರು ಬಿಜೆಪಿ ಸೇರಲು ಹೋಗಿಲ್ಲ ಎಂದು ಹೇಳಿದ್ದಾರೆ.

ಮುಸ್ಲಿಮರನ್ನು ದಾರಿ ತಪ್ಪಿಸುವ ಕೆಲಸ ನಡೆಯುತ್ತಿದೆ: ಕುಮಾರಸ್ವಾಮಿ ಮುಸ್ಲಿಮರನ್ನು ದಾರಿ ತಪ್ಪಿಸುವ ಕೆಲಸ ನಡೆಯುತ್ತಿದೆ: ಕುಮಾರಸ್ವಾಮಿ

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕರು ಮುಂಬೈಗೆ ಹೋಗಿರುವುದು ಬಿಜೆಪಿ ಸೇರಲು ಅಲ್ಲ, ಅವರೊಂದಿಗೆ ನಾನು ಇಂದು ಬೆಳಿಗ್ಗೆ ಮಾತನಾಡಿದ್ದೇನೆ ಅವರು ಹೋಗಿರುವ ಉದ್ದೇಶ ಬೇರೆ ಎಂದು ಅವರು ಹೇಳಿದ್ದಾರೆ.

ಮುಂಬೈನಲ್ಲಿ ಶಾಸಕರು, ಬಿಜೆಪಿಯಿಂದ ಆಪರೇಷನ್ ಕಮಲ ಮುಂಬೈನಲ್ಲಿ ಶಾಸಕರು, ಬಿಜೆಪಿಯಿಂದ ಆಪರೇಷನ್ ಕಮಲ

ನನಗೆ ಯಾವುದೇ ಆತಂಕವಿಲ್ಲ, ನಾನು ಆರಾಮಾಗಿದ್ದೇನೆ. ಸರ್ಕಾರ ಬೀಳೂವ ಹೆದರಿಕೆ ಇದ್ದಿದ್ದರೆ ಹೀಗೆ ಆರಾಮವಾಗಿ ಇರಲಿಕ್ಕೆ ಸಾಧ್ಯವಿತ್ತಾ? ಆಪರೇಷನ್ ಕಮಲ ಆಗುತ್ತದೆ ಸರ್ಕಾರ ಬೀಳುತ್ತದೆ ಎಂಬುದು ಊಹಾಪೋಹವಷ್ಟೆ ಎಂದು ಅವರು ಹೇಳಿದರು.

Operation Kamala is just rumor : Kumaraswamy

ಎಂಟ ಜನ ಶಾಸಕರು ಮುಂಬೈಗೆ ಹೋಗುತ್ತಿದ್ದಾರೆ. ಹಲವರು ಸಂಪರ್ಕದಲ್ಲಿದ್ದಾರೆ ಎಂದು ಮಾಧ್ಯಮಗಳಲ್ಲಿ ಬರುತ್ತಿರುವ ವರದಿಗಳೆಲ್ಲಾ ಸುಳ್ಳು ಎಂದು ಹೇಳಿದ ಕುಮಾರಸ್ವಾಮಿ. ಆ ರೀತಿಯ ಯಾವುದೇ ಬೆಳವಣಿಗೆಗಳು ಆಗಿಲ್ಲ, ಸರ್ಕಾರ ಸುಭದ್ರವಾಗಿದೆ ಎಂದರು.

ಕಾಂಗ್ರೆಸ್ ನಾಯಕರ ದಿಢೀರ್ ಉಪಹಾರ ಕೂಟ: ಆಪರೇಷನ್ ಕಮಲದ ಚರ್ಚೆ ಕಾಂಗ್ರೆಸ್ ನಾಯಕರ ದಿಢೀರ್ ಉಪಹಾರ ಕೂಟ: ಆಪರೇಷನ್ ಕಮಲದ ಚರ್ಚೆ

ಬಿಜೆಪಿಯ ಶಾಸಕರು ದೆಹಲಿಗೆ ಹೋಗಿರುವುದು ಕಾರ್ಯಕಾರಿಣಿಯಲ್ಲಿ ಭಾಗವಹಿಸಲು. ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಹೆಚ್ಚು ಸೀಟು ಗೆಲ್ಲಬೇಕು ಎಂಬ ಕಾರಣದಿಂದ ತಂತ್ರ ರೂಪಿಸಲು ಅವರು ಅಲ್ಲಿ ಸೇರಿದ್ದಾರೆ ಅಷ್ಟೆ ಅದಕ್ಕೆ ವಿಶೇಷ ಅರ್ಥ ಕಲ್ಪಿಸುವುದು ಬೇಡ ಎಂದು ಅವರು ಹೇಳಿದರು.

English summary
CM Kumaraswamy said operation Kamala is just rumor. No our MLA is joingng BJP. The MLAs who were in Mumbai, i talked with them today morning they not joining BJP.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X