ಮೈಸೂರಿನಲ್ಲಿ ಆಪರೇಷನ್ ಹೆಲ್ಮೆಟ್, ಪೊಲೀಸರ ಜತೆ ಜನರ ಜಗಳ

Posted By:
Subscribe to Oneindia Kannada
   ಹೆಲ್ಮೆಟ್ ಮೇಲೆ ಐಎಸ್ಐ ಗುರುತು ಕಡ್ಡಾಯ , ಇಲ್ಲವಾದಲ್ಲಿ ದಂಡ ಖಚಿತ ! | Oneindia Kannada

   ಮೈಸೂರು, ಜನವರಿ 2 : ಒಂದು ಕಡೆ ಹೆಲ್ಮೆಟ್ ಖರೀದಿಗೆ ನೂಕು ನುಗ್ಗಲು, ಇನ್ನೊಂದೆಡೆ ನಗರದ ಹಲವು ಪೊಲೀಸ್ ಠಾಣೆಗಳಲ್ಲಿ ರಾಶಿ - ರಾಶಿ ಬಿದ್ದಿರುವ ಹೆಲ್ಮೆಟ್. ಇದೇನಪ್ಪಾ ಪೊಲೀಸ್ ಠಾಣೆಗಳಲ್ಲಿ ಹೆಲ್ಮೆಟ್ ಮಾರಾಟಕ್ಕಿಟ್ಟಿದ್ದಾರಾ ? ಹಾಗಂತ ಅಂದುಕೊಂಡರೆ ನಿಮ್ಮ ಊಹೆ ತಪ್ಪು.

   ಮೈಸೂರಿನ ಪೊಲೀಸರು ದ್ವಿಚಕ್ರ ವಾಹನ ಸವಾರರ ಹೆಲ್ಮೆಟ್ ಗಳನ್ನು ವಶಪಡಿಸಿಕೊಂಡು ಒಂದೆಡೆ ಹಾಕಿದ್ದಾರೆ. ಹೌದು, ನಗರ ಅಪರಾಧ ವಿಭಾಗ ಹಾಗೂ ಕಾನೂನು ಸುವ್ಯವಸ್ಥೆ ವತಿಯಿಂದ ಸಾಂಸ್ಕೃತಿಕ ನಗರಿ ಮೈಸೂರು ನಗರದಲ್ಲಿ ಹಾಫ್ ಹೆಲ್ಮೆಟ್ ಧರಿಸಿ ಬಂದ ವಾಹನ ಸವಾರರಿಗೆ ದೊಡ್ಡ ಆಘಾತ ಕಾದಿತ್ತು.

   ಮೈಸೂರಿನ ಮಂಡಿ ಮೊಹಲ್ಲಾದಲ್ಲಿ ಹಾಡಹಗಲೇ 23 ಲಕ್ಷ ದೋಚಿದ ಖದೀಮರು

   ಪೊಲೀಸರು ನಗರದಾದ್ಯಂತ ಕಾರ್ಯಚರಣೆ ನಡೆಸಿ ನಿಷೇಧಿತ, ದೋಷ ಪೂರಿತ ಹೆಲ್ಮೆಟ್ ಗಳನ್ನು ವಶಕ್ಕೆ ಪಡೆದರು. ಸುರಕ್ಷತೆ ದೃಷ್ಟಿಯಿಂದ ವಾಹನ ಸವಾರರು ಹಾಗೂ ಹಿಂಬದಿ ಸವಾರರಿಗೆ ಹೆಲ್ಮೆಟ್ ಕಡ್ಡಾಯಗೊಳಿಸಿ ಆದೇಶ ಹೊರಡಿಸಲಾಗಿದೆ. ಅದರಂತೆ ವಾಹನ ಸವಾರರು ಹೆಲ್ಮೆಟ್ ಖರೀದಿಸಿದ್ದರು. ಆದರೆ ಹೆಲ್ಮೆಟ್ ಗಳು ನಿಯಮ ಪ್ರಕಾರ ಇವೆಯೇ ಎಂದು ನಗರದೆಲ್ಲೆಡೆ ಬೆಳ್ಳಂಬೆಳಗ್ಗೆ ಸಂಚಾರ ಪೊಲೀಸರು ಪರಿಶೀಲನೆಗೆ ಮುಂದಾದರು.

   ಐಎಸ್ ಐ ಗುರುತಿರಬೇಕು

   ಐಎಸ್ ಐ ಗುರುತಿರಬೇಕು

   ಹೆಲ್ಮೆಟ್ ಕಡ್ಡಾಯಗೊಳಿಸಿ ಆದೇಶ ಹೊರಡಿಸಿದ ಸಮಯದಲ್ಲಿ ವಾಹನ ಸವಾರರು ಆದಷ್ಟು ಫುಲ್ ಹೆಲ್ಮೆಟ್ ಧರಿಸಬೇಕು. ಫುಲ್ ಹೆಲ್ಮೆಟ್ ಅಥವಾ ಹೆಲ್ಮೆಟ್ ಯಾವುದೇ ಧರಿಸಿದರೂ ಅದಕ್ಕೆ ಐಎಸ್ ಐ ಮಾರ್ಕ್ ಇರಬೇಕು ಎಂದು ತಿಳಿಸಲಾಗಿದ್ದು, ಈ ಬಗ್ಗೆ ನಗರ ಪೊಲೀಸರು, ಸಂಘ- ಸಂಸ್ಥೆಗಳವರು ಸಾಕಷ್ಟು ಅರಿವು ಮೂಡಿಸಿದ್ದರು.

   ಸುರಕ್ಷತೆಯ ದೃಷ್ಟಿಯಲ್ಲಿ ಹೆಲ್ಮೆಟ್

   ಸುರಕ್ಷತೆಯ ದೃಷ್ಟಿಯಲ್ಲಿ ಹೆಲ್ಮೆಟ್

   ಸಂಚಾರ ಪೊಲೀಸರು ಮಂಗಳವಾರ ಬೆಳಗ್ಗೆಯಿಂದಲೇ ನಗರದೆಲ್ಲೆಡೆ ವಾಹನ ಸವಾರರ ಹೆಲ್ಮೆಟ್ ಪರಿಶೀಲನೆಗೆ ಮುಂದಾದರು. ಹಾಫ್ ಹೆಲ್ಮೆಟ್ ಧರಿಸಿದ್ದ ವಾಹನ ಸವಾರರನ್ನು ನಿಲ್ಲಿಸಿ ಪರಿಶೀಲನೆಗೆ ಒಳಪಡಿಸಿದ ಪೊಲೀಸರು ಐಎಸ್ ಐ ಗುರುತು ಇಲ್ಲದ ಹೆಲ್ಮೆಟ್ ಗಳನ್ನು ವಶಪಡಿಸಿಕೊಂಡರು. ಸುರಕ್ಷತೆಯ ದೃಷ್ಟಿಯಿಂದ ಹೆಲ್ಮೆಟ್ ಗಳನ್ನು ಐಎಸ್ ಐ ಗುರುತಿನದೇ ಧರಿಸಿ ಎಂದು ತಿಳಿಹೇಳಿದರು.

   300ಕ್ಕೂ ಹೆಚ್ಚು ಹೆಲ್ಮೆಟ್ ವಶಕ್ಕೆ

   300ಕ್ಕೂ ಹೆಚ್ಚು ಹೆಲ್ಮೆಟ್ ವಶಕ್ಕೆ

   ಮೈಸೂರಿನ ಕುರುಬರಹಳ್ಳಿ ಸರ್ಕಲ್, ರೇಸ್ ಕೋರ್ಸ್ , ಕೆ.ಡಿ. ರೋಡ್ ಹೀಗೆ ನಗರದ ಪ್ರಮುಖ ರಸ್ತೆ, ವೃತ್ತಗಳಲ್ಲಿ ಹೆಲ್ಮೆಟ್ ತಪಾಸಣೆ ನಡೆಸಿ ಐಎಸ್ ಐ ಗುರುತು ಇಲ್ಲದ 300ಕ್ಕೂ ಹೆಚ್ಚು ಹೆಲ್ಮೆಟ್ ಗಳನ್ನು ಪೊಲೀಸರು ವಶಪಡಿಸಿಕೊಂಡರು.

   ಪೊಲೀಸ್ ಆಯುಕ್ತರ ಆದೇಶ

   ಪೊಲೀಸ್ ಆಯುಕ್ತರ ಆದೇಶ

   ಪೊಲೀಸ್ ಆಯುಕ್ತ ಸುಬ್ರಹ್ಮಣ್ಯೇಶ್ವರ ರಾವ್ ಸೂಚನೆ ಮೇರೆಗೆ ವಾಹನ ಸವಾರರನ್ನು ತಡೆದು ಹೆಲ್ಮೆಟ್ ಪರಿಶೀಲನೆ ನಡೆಸಿ, ನಿಯಮಬಾಹಿರವಾದದ್ದನ್ನು ವಶಕ್ಕೆ ಪಡೆದಿದ್ದಾರೆ. ವಾಹನ ಸವಾರರಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಇಂದು ಈ ಕ್ರಮಕ್ಕೆ ಮುಂದಾಗಿದ್ದೇವೆ ಅಷ್ಟೇ ಎಂದು ಪೊಲೀಸರು ತಿಳಿಸಿದರು.

   ಅಂಥ ಹೆಲ್ಮೆಟ್ ಮಾರುವ ಅಂಗಡಿ ಮೇಲೆ ದಾಳಿ ಮಾಡಿ

   ಅಂಥ ಹೆಲ್ಮೆಟ್ ಮಾರುವ ಅಂಗಡಿ ಮೇಲೆ ದಾಳಿ ಮಾಡಿ

   ಕೆಲವು ಕಡೆ ಪೋಲಿಸರೊಂದಿಗೆ ಸಾರ್ವಜನಿಕರು ಮಾತಿನ ಚಕಮಕಿ ನಡೆಸಿದ ಘಟನೆಯೂ ನಡೆದಿದೆ. ಪೊಲೀಸರ ದಿಢೀರ್ ಕ್ರಮಕ್ಕೆ ವಾಹನ ಸವಾರರು ಬೇಸರ ವ್ಯಕ್ತಪಡಿಸಿದ್ದಾರೆ. ಇಷ್ಟು ದಿನ ಸುಮ್ಮನಿದ್ದು, ಏಕಾಏಕಿ ಹಾಫ್ ಹೆಲ್ಮೆಟ್ ಹಾಕ್ಬೇಡಿ ಎಂದರೆ ಹೇಗೆ ? ಅಂಥ ಹೆಲ್ಮೆಟ್ ಮಾರುವ ಅಂಗಡಿಗಳನ್ನು ಮೊದಲು ಸೀಜ್ ಮಾಡಬೇಕು ಎಂದು ಬೈಕ್ ಸವಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   Mysuru traffic police seized half helmets and helmets which don't have ISI marks on Tuesday. According to rule full helmet and ISI mark helmet should be used. But this rule not followed by all. Tuesday operation by police lead to quarrel.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ