ಮೈಸೂರಿನಲ್ಲಿ ಆಪರೇಷನ್ ಚೀತಾ: ದಿನವೊಂದಕ್ಕೆ 4.68 ಲಕ್ಷ ರೂ.ದಂಡ ವಸೂಲು!

Posted By:
Subscribe to Oneindia Kannada

ಮೈಸೂರು, ಅಕ್ಟೋಬರ್ 26 : ಮೈಸೂರು ನಗರ ಪೊಲೀಸರ 'ಆಪರೇಷನ್ ಚೀತಾ' ಭರ್ಜರಿಯಾಗಿಯೇ ಕಾರ್ಯಾರಂಭ ಮಾಡಿದೆ. ನಿನ್ನೆ ಬುಧವಾರ ಒಂದೇ ದಿನದಲ್ಲಿ ಸಂಚಾರ ನಿಯಮ ಉಲ್ಲಂಘಿಸಿದ 15 ಸಾವಿರ ವಾಹನಗಳ ತಪಾಸಣೆ ನಡೆಸಿ, 4418 ಪ್ರಕರಣ ದಾಖಲಿಸಿ ಒಟ್ಟು 4.68 ಲಕ್ಷ ರೂ.ಗಳಷ್ಟು ಭಾರೀ ದಂಡವನ್ನು ವಸೂಲಿ ಮಾಡಲಾಗಿದೆ.

ನಿನ್ನೆಯಿನ್ನೂ 'ಆಪರೇಷನ್ ಚೀತಾ' ಕಾರ್ಯಾಚರಣೆಗೆ ಪೊಲೀಸರು ಚಾಲನೆ ನೀಡಿದರು. ಲಕ್ಷ್ಮಿಪುರಂ ಪೊಲೀಸ್ ಠಾಣೆ ಹೊರತುಪಡಿಸಿ ಉಳಿದೆಲ್ಲಾ ಠಾಣೆಗಳ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಒಮ್ಮೆಲೇ ರಸ್ತೆಗಿಳಿದು ವಾಹನಗಳ ತಪಾಸಣೆ ನಡೆಸಿದರು. ಕುವೆಂಪುನಗರ, ವಿದ್ಯಾರಣ್ಯಪುರಂ, ಒಂಟಿಕೊಪ್ಪಲು, ಉದಯಗಿರಿ, ಸರಸ್ವತಿಪುರಂ, ಜಯಲಕ್ಷ್ಮಿಪುರಂ, ವಿಜಯನಗರ ಮತ್ತಿತರ ಪ್ರಮುಖ ವೃತ್ತ ಹಾಗೂ ರಸ್ತೆಗಳಲ್ಲಿ ನಿಂತ ಪೊಲೀಸರು ವಾಹನಗಳ ತಪಾಸಣೆ ನಡೆಸಿ ಸಂಚಾರ ನಿಯಮ ಪಾಲಿಸದ ಸವಾರರ ವಿರುದ್ಧ ದಂಡ ವಿಧಿಸಿ ವಾಹನ ಸವಾರರಿಗೆ ಶಾಕ್ ನೀಡಿದ್ದಾರೆ.

Operation Cheetah in Mysuru: Rs.4.68 lakh fine collected in a single day.

ಬುಧವಾರ ಸಂಜೆ 4ಗಂಟೆಯಿಂದ 7ರವರೆಗೆ ಅನಿರೀಕ್ಷಿತ ಸಂಚಾರ ತಪಾಸಣೆ ನಡೆಸಲಾಗಿದ್ದು, 4418 ಪ್ರಕರಣಗಳು ದಾಖಲಾಗಿ 4,92,700 ದಂಡ ಸಂಗ್ರಹವಾಗಿದೆ. ನರಸಿಂಹರಾಜ ಸಂಚಾರ ಠಾಣಾ ವ್ಯಾಪ್ತಿಯಲ್ಲಿ ತಪಾಸಣೆ ನಡೆಸುವಾಗ ಸಿಕ್ಕಿ ಬಿದ್ದ ದು ಹೀರೋ ಹೊಂಡಾ ಸ್ಪ್ಲೆಂಡರ್ ಪ್ಲಸ್ ಬೈಕ್ ನ ರಿಜಿಸ್ಟ್ರೇಷನ್ ನಂಬರ್ ನ್ನು ಬ್ಲಾಕ್ ಬೆರ್ರಿ ತಂತ್ರಾಂಶದಲ್ಲಿ ಪರಿಶೀಲಿಸಲಾಗಿ ಈ ವಾಹನದ ವಿರುದ್ಧ ಒಟ್ಟು 108 ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ದಾಖಲಾಗಿದ್ದು, ವಾಹನದ ಮಾಲೀಕ ಯಾವುದೇ ದಂಡ ಪಾವತಿಸದೇ ಬಾಕಿ ಉಳಿಸಿಕೊಂಡ ಕುರಿತು ತಿಳಿದು ಬಂದಿದ್ದು, ಈತನಿಂದ ಒಟ್ಟು 10,800 ರೂ ದಂಡ ಸಂಗ್ರಹಿಸಲಾಗಿದೆ.

Operation Cheetah in Mysuru: Rs.4.68 lakh fine collected in a single day.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
In order to enforce strict traffic rules in the city, police on Oct 25th launched operation cheetah. Rs.4.68 lakh fine collected in a single day.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ