ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಜ್ಯದಲ್ಲೂ ಆನ್ ಲೈನ್ ನಾಮಪತ್ರ ಸಲ್ಲಿಕೆ, ಮತದಾನಕ್ಕೆ ಚಿಂತನೆ

|
Google Oneindia Kannada News

ಮೈಸೂರು, ಡಿಸೆಂಬರ್ 4: ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಚುನಾವಣೆಗಳಲ್ಲಿ ಆನ್ ಲೈನ್ ನಾಮಪತ್ರ ಹಾಗೂ ಮತದಾನ ಜಾರಿಗೆ ತರಲು ಚಿಂತನೆ ನಡೆಸಲಾಗುತ್ತಿದೆ ಎಂದು ರಾಜ್ಯ ಚುನಾವಣಾ ಆಯೋಗದ ಆಯುಕ್ತ ಶ್ರೀನಿವಾಸಚಾರಿ ತಿಳಿಸಿದರು.

ನಗರದ ಲಲಿತ್ ಮಹಲ್ ಹೋಟೆಲ್ ನಲ್ಲಿ ಇಂದಿನಿಂದ ಎರಡು ದಿನಗಳವರೆಗೆ ನಡೆಯುತ್ತಿರುವ ದೇಶದ ವಿವಿಧ ರಾಜ್ಯಗಳ ಚುನಾವಣಾ ಆಯುಕ್ತರ 27ನೇ ಸಮ್ಮೇಳನದಲ್ಲಿ ಪಾಲ್ಗೊಂಡು ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.

2014ರಲ್ಲಿ ಮೋದಿ ಗೆಲ್ಲಿಸಿದ್ದ ವ್ಯಕ್ತಿಗೆ ಕಾಲೇಜು ವಿದ್ಯಾರ್ಥಿಗಳಿಂದ ಗೂಸಾ2014ರಲ್ಲಿ ಮೋದಿ ಗೆಲ್ಲಿಸಿದ್ದ ವ್ಯಕ್ತಿಗೆ ಕಾಲೇಜು ವಿದ್ಯಾರ್ಥಿಗಳಿಂದ ಗೂಸಾ

ನಮ್ಮ ರಾಜ್ಯದಲ್ಲಿ ನಡೆಯುವ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಇವಿಎಂ ಮಷಿನ್ ಬಳಸಿಕೊಳ್ಳಲು ಚಿಂತಿಸಲಾಗುತ್ತಿದೆ. ಆದರೆ ಇದರ ವೆಚ್ಚ ಸಾಕಷ್ಟು ತಗುಲಲಿದ್ದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ . ಗುಜರಾತ್ ರಾಜ್ಯದಲ್ಲಿ ಈಗಾಗಲೇ ಸ್ಥಳೀಯ ಸಂಸ್ಥೆ ಚುನಾವಣೆಗೆ ಆನ್ ಲೈನ್ ನಾಮಪತ್ರ ಸಲ್ಲಿಕೆ ಮತ್ತು ಆನ್ ಲೈನ್ ಓಟಿಂಗ್ ತಂದಿದ್ದು, ಮಹರಾಷ್ಟ್ರದಲ್ಲೂ ಆನ್ ಲೈನ್ ನಾಮಪತ್ರ ಸಲ್ಲಿಕೆಕೆಗೆ ಅವಕಾಶ ಕಲ್ಪಿಸಲಾಗಿದೆ. ಈ ವ್ಯವಸ್ಥೆ ರಾಜ್ಯದಲ್ಲೂ ತರಬಹುದೇ ? ಇದರ ಸಾಧಕ ಬಾದಕಗಳ ಚರ್ಚೆ ನಡೆಯುತ್ತದೆ ಎಂದು ತಿಳಿಸಿದರು.

Online nomination and vote will implement: Srinivasachari

ಮಧ್ಯಪ್ರದೇಶ ಚುನಾವಣಾ ಆಯುಕ್ತ ಪರಶುರಾಂ ಮಾತನಾಡಿ, ರಾಜ್ಯ ಚುನಾವಣಾ ಆಯೋಗಗಳು ಹೊಸ ತಂತ್ರಜ್ಞಾನದ ಅಳವಡಿಕೆಗೆ ಮುಕ್ತವಾಗಿವೆ. ಯಾವುದೇ ರಾಜ್ಯದಲ್ಲಿ ಚುನಾವಣೆ ನಡೆದರೂ ಮೈಸೂರಿನಿಂದಲೇ ಇಂಕ್ ಬಾಟೆಲ್ ಗಳು ರವಾನೆಯಾಗುತ್ತದೆ. ಮೈಸೂರಿನ ಪೇಂಟ್ಸ್ ಮತ್ತು ವಾರ್ನಿಶ್ ನಲ್ಲಿ ಇಂಕ್ ತಯಾರಾಗುವುದು ನಿಜಕ್ಕೂ ಹೆಮ್ಮೆಯ ವಿಚಾರ.

ನೆಹರು ಮೇಲೆ ಟೀಕಾಸ್ತ್ರ ಪ್ರಯೋಗಿಸಿ ಕಾಂಗ್ರೆಸ್ ಹಿಂದೂ ವಿರೋಧಿ ಎಂದ ಮೋದಿನೆಹರು ಮೇಲೆ ಟೀಕಾಸ್ತ್ರ ಪ್ರಯೋಗಿಸಿ ಕಾಂಗ್ರೆಸ್ ಹಿಂದೂ ವಿರೋಧಿ ಎಂದ ಮೋದಿ

ಮೈಸೂರಿನಲ್ಲಿ ತಯಾರಾಗುವ ಶಾಯಿ ನಮಗೆ ಉತ್ತಮ ಎನಿಸಿದೆ ಹಾಗಾಗಿ ಮೈಸೂರು ಶಾಯಿ ಯನ್ನೇ ಬಳಸುತ್ತೇವೆ ಎಂದರು. ಪ್ರಜಾಪ್ರಭುತ್ವದ ವಿಕೇಂದ್ರೀಕರಣಕ್ಕೆ ಚುನಾವಣಾ ಆಯೋಗ ಒತ್ತು ನೀಡುತ್ತಿದೆ. ಪ್ರತಿ ಚುನಾವಣೆಯನ್ನು ಅಚ್ಚುಕಟ್ಟಾಗಿ ನಡೆಸಿಕೊಡುವ ನಿಟ್ಟಿನಲ್ಲಿ ಪ್ರಯತ್ನಿಸುತ್ತಿದೆ. ಇತ್ತೀಚೆಗೆ ಹಲವು ಹೊಸ ತಂತ್ರಜ್ಞಾನಗಳು ಅನ್ವೇಷಣೆಯಾಗಿದ್ದು, ಅದನ್ನು ಅಳವಡಿಕೊಳ್ಳುವ ನಿಟ್ಟಿನಲ್ಲಿ ಚರ್ಚೆ ನಡೆಸುತ್ತಿದ್ದೇವೆ.

ಬಿಜೆಪಿ ಫೇಲ್, ಆದ್ರೂ ಮೋದಿ ಪಾಸ್! ಬಿಜೆಪಿ ಸಮೀಕ್ಷೆ ಹೇಳಿದ ಸತ್ಯಸಂಗತಿ!ಬಿಜೆಪಿ ಫೇಲ್, ಆದ್ರೂ ಮೋದಿ ಪಾಸ್! ಬಿಜೆಪಿ ಸಮೀಕ್ಷೆ ಹೇಳಿದ ಸತ್ಯಸಂಗತಿ!

ಉತ್ತರ ಪ್ರದೇಶ, ಮಧ್ಯಪ್ರದೇಶ, ಕರ್ನಾಟಕದಂತಹ ದೊಡ್ಡ ರಾಜ್ಯಗಳಲ್ಲಿ ಮಿಲಿಯನ್‌ಗಟ್ಟಲೆ ಅಭ್ಯರ್ಥಿಗಳಿರುತ್ತಾರೆ. ಮಾದರಿ ನೀತಿ ಸಂಹಿತೆ ಜಾರಿ, ಕಾನೂನು ಪಾಲನೆ ಸೇರಿದಂತೆ ಹಲವು ರೀತಿಯ ಸವಾಲುಗಳನ್ನು ಸಮರ್ಥವಾಗಿ ನಿರ್ವಹಿಸಲು ಹಣಕಾಸಿನ ಕೊರತೆಯಾಗದಂತೆ ನೋಡಿಕೊಳ್ಳಬೇಕು ಎಂದರು.

ಸಮ್ಮೇಳನದಲ್ಲಿ ರಾಜ್ಯ ಚುನಾವಣಾ ಆಯುಕ್ತರುಗಳ ಜೊತೆಗೆ ಭಾರತ್ ಎಲೆಕ್ಟ್ರಾನಿಕ್ ಲಿಮಿಟೆಡ್, ಎಲೆಕ್ಟ್ರಾನಿಕ್ ಕಾರ್ಪೊರೇಷನ್ ಇಂಡಿಯಾ ಲಿಮಿಟೆಡ್, ಮೈಸೂರು ಪೇಯಿಂಟ್ಸ್ ಅಂಡ್ ವಾರ್ನಿಶ್ ಸಂಸ್ಥೆಯ ಅಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಶಕರುಗಳು ಪಾಲ್ಗೊಂಡಿದ್ದಾರೆ.

English summary
State Election Commission Commissioner Srinivasachari Said Coming days in State elections Online nomination and vote will implement. It is being discussed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X